Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಸೌದಿ ಅರೇಬಿಯಾ; ಅಗ್ನಿ ದುರಂತದಲ್ಲಿ 10 ಮಂದಿ ಭಾರತೀಯರು ಬಲಿ

ನವದೆಹಲಿ/ರಿಯಾದ್: ಅಗ್ನಿ ದುರಂತದಲ್ಲಿ ಸುಮಾರು 10 ಮಂದಿ ಭಾರತೀಯರು ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದ ನಜ್ರಾನ್ ಪಟ್ಟಣದಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.

ಕಿಟಕಿ ಇಲ್ಲದ ಮನೆಯೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಿಂದ ಈ ಘಟನೆ ನಡೆದಿದೆ.  ದುರಂತ ನಡೆದ ಸ್ಥಳಕ್ಕೆ ಜೆಡ್ಡಾದಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತೆರಳಿರುವುದಾಗಿ ಸುಷ್ಮಾ ತಿಳಿಸಿದ್ದಾರೆ.

ನಿಜ್ರಾನ್ ನಲ್ಲಿ ನಡೆದಿರುವ ಅಗ್ನಿ ಅನಾಹುತದ ಬಗ್ಗೆ ಮಾಹಿತಿ ಬಂದಿದೆ. ಘಟನೆಯಲ್ಲಿ ಸುಮಾರು 10 ಮಂದಿ ಭಾರತೀಯರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದು, ಅವರೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

 

No Comments

Leave A Comment