Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಗೋವಾ ಬೀಚ್‌ನಲ್ಲಿ ಪೊಲೀಸರಿಗೆ ಥಳಿತ : 11 ಪ್ರವಾಸಿಗರ ಬಂಧನ

ಪಣಜಿ: ಗೋವೆಯ ಪ್ರಸಿದ್ಧ ಕಾಲಂಗೂಟೆ ಬೀಚಿನಲ್ಲಿ ಇಬ್ಬರು ಪೊಲೀಸರನ್ನು ಥಳಿಸಿದ ಆರೋಪದ ಮೇಲೆ 11 ಮಂದಿ ಪುಂಡ ಪ್ರವಾಸಿಗರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರವಾಸಿಗರು ಬೀಚಿನಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರು. ಹಾಗೆ ಮಾಡಬೇಡಿ ಎಂದು ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಅವರಿಗೆ ಹೇಳಿದರು. ಅದಕ್ಕಾಗಿ ಕೋಪೋದ್ರಿಕ್ತರಾದ ಆ ಪುಂಡ ಪ್ರವಾಸಿಗರು ಕಾನ್‌ಸ್ಟೆಬಲ್‌ಗ‌ಳಿಬ್ಬರನ್ನು  ಥಳಿಸಿದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಈ ಪುಂಡ ಪ್ರವಾಸಿಗರು ಹರಿಯಾಣ ಮತ್ತು ದಿಲ್ಲಿಯಿಂದ ಬಂದವರಾಗಿದ್ದು ಕಂಠ ಪೂರ್ತಿ ಮದ್ಯಸೇವಿಸಿ ಧಾಂಧಲೆ ನಡೆಸುತ್ತಿದ್ದರು. ತಮಗೆ ಬುದ್ಧಿ ಹೇಳಿದ ಕಾನ್‌ಸ್ಟೆಬಲ್‌ಗ‌ಳಿಬ್ಬರನ್ನು ಇವರು ಥಳಿಸಿದರು ಎಂದು ಕಾಲಂಗೂಟೆ ಪೊಲೀಸ್‌ ಸ್ಟೇಶನ್‌ ಇನ್ಸ್‌ಪೆಕ್ಟರ್‌ ಜಿವ್‌ಮಾ ದಳವಿ ಸುದ್ದಿಗಾರರಿಗೆ ತಿಳಿಸಿದರು.

No Comments

Leave A Comment