Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಸಮಯ ವ್ಯರ್ಥ; ಟಿಜೆ ಅಬ್ರಹಾಂಗೆ 25 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ

ನವದೆಹಲಿ/ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂಗೆ ಸುಪ್ರೀಂಕೋರ್ಟ್ ಬರೋಬ್ಬರಿ 25 ಲಕ್ಷ ರೂಪಾಯಿ ದಂಡ ವಿಧಿಸಿರುವ ಪ್ರಸಂಗ ಸೋಮವಾರ ನಡೆದಿದೆ.

ಅಬ್ರಹಾಂ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿ, ಅನಗತ್ಯವಾಗಿ ಪಿಐಎಲ್ ಸಲ್ಲಿಸಿ ಕೋರ್ಟ್ ನ ಸಮಯವನ್ನು ವ್ಯರ್ಥಗೊಳಿಸಿರುವುದಾಗಿ ಸುಪ್ರೀಂಪೀಠ ಹೇಳಿದೆ. 2 ವಾರದಲ್ಲಿ ದಂಡದ ಮೊತ್ತವನ್ನು ತುಂಬುವಂತೆ ಸೂಚನೆ ನೀಡಿದೆ.

ಆಳಂದಲ್ಲಿ ಮಿನಿವಿಧಾನಸೌಧ ನಿರ್ಮಾಣ ಹಿನ್ನೆಲೆಯಲ್ಲಿ, ಬೇರೆ ಸರ್ವೆ ನಂಬ್ರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಟಿಜೆ ಅಬ್ರಹಾಂ ಪಿಐಎಲ್ ನಲ್ಲಿ ದೂರಿದ್ದರು. ಹಾಗಾಗಿ  ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

No Comments

Leave A Comment