Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಪಾಕಿಸ್ತಾನ ಆಯ್ತು, ಈಗ ಕರ್ನಾಟಕ, ಪಲ್ಟಿಯಾದ ಟ್ಯಾಂಕರ್ ನಿಂದ ಡೀಸೆಲ್ ಗೆ ಮುಗಿ ಬಿದ್ದ ಜನ!

ಕಲಬುರಗಿ: ಹೆದ್ದಾರಿಯಲ್ಲಿ ಪಲ್ಟಿಯಾದ ಟ್ಯಾಂಕರ್ ನಿಂದ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಬೆಂಕಿ ದುರಂತ ಸಂಭವಿಸಿ 157 ಮಂದಿ ಸತ್ತ ಪಾಕಿಸ್ತಾನದ ಘಟನೆ ಹಸಿರಾಗಿರುವಾಗಲೇ ಅಂತಹುದೇ ಘಟನೆ ಕರ್ನಾಟಕದಲ್ಲೂ ಸಂಭವಿಸಿದೆ.

ಕರ್ನಾಟಕದ ಕಲಬುರಗಿ ಜಿಲ್ಲೆಯ ನದಿಸಿನ್ನೂರು ಗ್ರಾಮದ ಸಮೀಪದ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿತ್ತು. ಪಲ್ಟಿಯಾದ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಯಾಗುತ್ತಿತ್ತು. ಈ ವಿಚಾರ ತಿಳಿದ  ಸ್ಥಳೀಯ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಧಾವಿಸಿ ಟ್ಯಾಂಕರ್ ನಿಂದ ಸೋರಿಕೆಯಾಗುತ್ತಿದ್ದ ಡೀಸೆಲ್ ಅನ್ನು ಸಂಗ್ರಹಿಸಿದ್ದಾರೆ.

ದೃಷ್ಟವಶಾತ್ ಡೀಸೆಲ್ ಸಂಗ್ರಹಸುವ ವೇಳೆ ಯಾವುದೇ ದುರಂತ ಸಂಭವಿಸಿಲ್ಲ, ಒಂದು ವೇಳೆ ಪಾಕಿಸ್ತಾನದಲ್ಲಿ ನಡೆದಂತೆ ಟ್ಯಾಂಕರ್ ಗೆ ಬೆಂಕಿ ತಗುಲಿದ್ದರೆ, ಪಾಕಿಸ್ತಾನದ ದುರ್ಘಟನೆ ಕರ್ನಾಟಕದಲ್ಲೂ ಮರುಕಳಿಸುತ್ತಿತ್ತು.  ಜನರು ಡೀಸೆಲ್ ಸಂಗ್ರಹಿಸುವಾಗ ಸ್ಥಳೀಯ ಪೊಲೀಸರು ಇದ್ದರಾದರೂ ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜನರು ಡೀಸೆಲ್ ಸಂಗ್ರಹಿಸುತ್ತಿದ್ದರು.

ಇನ್ನು ಬೇರೆ ಮಾರ್ಗವಿಲ್ಲದೇ ಪೊಲೀಸರು ಕ್ರೇನ್ ಮೂಲಕ ಪಲ್ಟಿಯಾದ ಟ್ಯಾಂಕರ್ ಅನ್ನು ಸ್ಥಳಾಂತರಿಸುವ ಕಾರ್ಯ ಮಾಡಿದರು.ಪಾಕಿಸ್ತಾನ ಟ್ಯಾಂಕರ್ ದುರಂತಕ್ಕೆ ಸಂಬಂಧಿಸಿದಂತೆ ವಿಶ್ವದ್ಯಾಂತ ವ್ಯಾಪಕ ಚರ್ಚೆಗಳಾಗುತ್ತಿದೆ. ಅಂದಿನ ಘಟನೆಯಲ್ಲಿ ಅಪಾಯದ ಮುನ್ಸೂಚನೆ ಇಲ್ಲದೇ ಬಿಟ್ಟಿ ಪೆಟ್ರೋಲ್ ಸಿಗುತ್ತದೆ ಎಂದು ಮುಗಿಬಿದ್ದ ಅಲ್ಲಿನ ಜನ ಪೆಟ್ರೋಲ್  ಸಂಗ್ರಹಿಸಲು ಹೋಗಿ ಪ್ರಾಣ ಬಿಟ್ಟಿದ್ದರು.

ಇಂದಿಗೂ ಆ ಘಟನೆಗೆ ಸಂಬಂಧಿಸಿದ ವಿಡಿಯೋಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ಇದಾವುದರ ಪರಿವೇ ಇಲ್ಲದೆ ಕಲಬುರಗಿ ಜನ ಡೀಸೆಲ್ ಗಾಗಿ ಮುಗಿ ಬಿದ್ದಿರುವುದು ಮಾತ್ರ  ಶೋಚನೀಯ..

No Comments

Leave A Comment