Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಜರ್ಮನಿಯಲ್ಲಿ ಬಾಗಲಕೋಟೆ ಮೂಲದ ವಿದ್ಯಾರ್ಥಿ ನಾಪತ್ತೆ!

ಹ್ಯಾಂಬರ್ಗ್: ಕರ್ನಾಟಕ ಮೂಲದ ವಿದ್ಯಾರ್ಥಿಯೋರ್ವ ಜರ್ಮನಿಯಲ್ಲಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕರ್ನಾಟಕದ ಬಾಗಲಕೋಟೆ ಮೂಲದ ಮಂಜುನಾಥ್ ಎಂಬ ವಿದ್ಯಾರ್ಥಿಯು ಜರ್ಮನಿಯ ಹ್ಯಾಂಬರ್ಗ್ ನಲ್ಲಿ ನಾಪತ್ತೆಯಾಗಿದ್ದು, ಹ್ಯಾಂಬರ್ಗ್ ನದಿ ದಡದಲ್ಲಿ ಮಂಜುನಾಥ್ ನ ವಸ್ತುಗಳ ಪತ್ತೆಯಾಗಿವೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ. ಮಂಜುನಾಥ್ ಬಳಸುತ್ತಿದ್ದ ಸೈಕಲ್, ಇತರೆ ವಸ್ತುಗಳು ಸೇರಿದಂತೆ ಪತ್ರವೊಂದು ಪತ್ತೆಯಾಗಿದ್ದು, ಪತ್ರದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

28 ವರ್ಷದ ಮಂಜುನಾಥ್ ಸಿದ್ದಣ್ಣ ಚುರಿ ಬಿಇ ವಿದ್ಯಾರ್ಥಿಯಾಗಿದ್ದು, ಉನ್ನತ ವ್ಯಾಸಂಗಕ್ಕಾಗಿ ಹ್ಯಾಂಬರ್ಗ್ ಗೆ ತೆರಳಿದ್ದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಸಿಮಿಕೇರಿ ಗ್ರಾಮದವರಾದ ಮಂಜುನಾಥ್ ಬಸವೇಶ್ವ ಇಂಜಿನಿಯರಿಂಗ್  ಕಾಲೇಜಿನಲ್ಲಿ ಬಿಇ ಮುಗಿಸಿದ್ದರು. ಬಳಿಕ ಮಾಸ್ಟರ್ ಸಾಫ್ಟ್ ವೇರ್ ಉನ್ನತ ವ್ಯಾಸಂಗಕ್ಕಾಗಿ 2 ವರ್ಷಗಳ ಹಿಂದೆ ಮಂಜುನಾಥ್ ಜರ್ಮನಿಯ ಹ್ಯಾಂಬರ್ಗ್ ಗೆ ತೆರಳಿದ್ದರು.

ಇದೇ ಸೆಪ್ಚೆಂಬರ್ ನಲ್ಲಿ ಊರಿಗೆ ಬರುವುದಾಗಿ ಮಂಜುನಾಥ್  ತಿಳಿಸಿದ್ದರು. ಆದರೆ ಇದೀಗ ಮಂಜುನಾಥ್ ನಾಪತ್ತೆಯಾಗಿದ್ದಾನೆ ಜರ್ಮನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾಗಿಳು ಸೋಮವಾರ ಮಾಹಿತಿ ನೀಡಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸುತ್ತಿದ್ದ ಜರ್ಮನ್ ಪೊಲೀಸರಿಗೆ ಮಂಜುನಾಥ್ ರೂಮಿನಲ್ಲಿ ಪತ್ರವೊಂದು ದೊರೆತಿದ್ದು, ಇದು ಭಾರತೀಯ ಭಾಷೆಯಲ್ಲಿದ್ದರಿಂದ ಅದನ್ನು ಓದಲು ಸಾಧ್ಯವಾಗದೇ ಭಾರತಯೀ ರಾಯಭಾರ ಕಚೇರಿ  ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಇದೀಗ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

No Comments

Leave A Comment