Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಸುಡುತಿದೆ ಭೂಮಿ; ಮಾರ್ಚ್‌ ಅಂತ್ಯಕ್ಕೆ 46.5 ಡಿಗ್ರಿ! ಮುಂದಿದೆ ಅಪಾಯ

ಹೊಸದಿಲ್ಲಿ: ಮಾರ್ಚ್‌ ಅಂತ್ಯಕ್ಕೆ ದೇಶದ ಎಲ್ಲೆಡೆ ಬಿಸಿಲಿನ ಝಳ ಜೋರಾಗಿದ್ದು ,ದೇಶದಾದ್ಯಂತ ದಾಖಲೆಯ ತಾಪಮಾನ ದಾಖಲಾಗಿ ಅಪಾಯದ ಮುನ್ಸೂಚನೆ ನೀಡಿದೆ.

ಮಹಾರಾಷ್ಟ್ರದ ಭಿರಾದಲ್ಲಿ ಹಿಂದೆಂದೂ ದಾಖಲಾಗದ ದಾಖಲೆಯ 46.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಮಂಗಳವಾರ ದಾಖಲಾಗಿರುವ ಬಗ್ಗೆ ಹವಮಾನ ಇಲಾಖೆ ತಿಳಿಸಿದೆ.

ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌, ಮಧ್ಯ ಮಹಾರಾಷ್ಟ್ರ, ಉತ್ತರ ಪ್ರದೇಶದ ದಕ್ಷಿಣ ಪ್ರಾಂತ್ಯ, ದಕ್ಷಿಣ ಹರಿಯಾಣ, ಚಂದೀಘಡ  ಮತ್ತು ಒಡಿಶಾದಲ್ಲಿ ಬಿಸಿ ಗಾಳಿ ಬೀಸುವ ಎಚ್ಚರಿಕೆಗಳನ್ನು ನೀಡಲಾಗಿದೆ.

ಜಾಗತಿಕ ತಾಪಮಾನ ಏರಿಕೆಯ ಸೂಚನೆಯಾಗಿ ಎಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕಳೆದ ತಿಂಗಳಿಗಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ ಎಂದು ಹವಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

ಒಂದೆಡೆ ಬರ ಇನ್ನೊಂದೆಡೆ  ಸುಡುತ್ತಿರುವ ಬಿಸಿಲಿನ ತಾಪ ಜನರನ್ನು ಈಗಾಗಲೇ ಹೈರಾಣಾಗಿಸುತ್ತಿದ್ದು, ಎಪ್ರಿಲ್‌ ಮತ್ತು ಮೇ ತಿಂಗಳನ್ನು ಹೇಗೆ ಕಳೆಯುವುದು ಎನ್ನುವ ಚಿಂತೆ  ಕಾಡುತ್ತಿದೆ.

No Comments

Leave A Comment