Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಗಡಿಯಲ್ಲಿ ಗುಂಡಿನ ಚಕಮಿಕಿ: ಭಾರತೀಯ ಯೋಧರ ಗುಂಡೇಟಿಗೆ ಪಾಕ್ ಯೋಧ ಸಾವು

indian-armyಶ್ರೀನಗರ: ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಯೋಧರು ಪ್ರತ್ಯುತ್ತರ ನೀಡಿದ್ದು, ಗುಂಡಿನ ದಾಳಿಯಲ್ಲಿ ಪಾಕ್ ಸೈನಿಕನೋರ್ವ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. 
 
ಹೀರಾನಗರ್ ಸೆಕ್ಟರ್ ನ ಬೊಬಿಯಾ ಪೋಸ್ಟ್ ನಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದ ಬಳಿಕ ಭಾರತೀಯ ಯೋಧರು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಎರಡು ಕಡೆಯಿಂದಲೂ ಕಳೆದ 15 ಗಂಟೆಗಳಿಂದಲೂ ಗುಂಡಿನ ಚಕಮಕಿ ನಡೆಯುತ್ತಿದೆ.
 
ಸೆಪ್ಟೆಂಬರ್ 18 ರಂದು ಉರಿ ವಾಯು ನೆಲೆ ಮೇಲೆ ಉಗ್ರರ ದಾಳಿ ನಡೆದ ನಂತರ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಾ ಬಂದಿದೆ. ಅಕ್ಟೋಬರ್ 16 ರಂದು ಪಾಕಿಸ್ತಾನದ ಮೇಲೆ ಸೀಮಿತ ದಾಳಿ ನಡೆದ ನಂತರ ಇದುವರೆಗೆ ಪಾಕಿಸ್ತಾನ ಸುಮಾರು 32 ಬಾರಿ ಕದನ ವಿರಾಮ ಉಲ್ಲಂಘಿಸಿದೆ, ಈಗಲೂ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ಚಕಮಕಿ ಮುಂದುವರಿದಿದೆ.
No Comments

Leave A Comment