Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಮತ್ತೆ ಉಗ್ರ ನೆಲೆಗಳ ಮೇಲೆ ಸೇನೆ ದಾಳಿ: ಚೀನಾ, ಪಾಕ್ ಧ್ವಜಗಳು ವಶಕ್ಕೆ

armyಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದ್ದು, ದಾಳಿ ವೇಳೆ ಚೀನಾ ಹಾಗೂ ಪಾಕಿಸ್ತಾನ ದೇಶಗಳ ಧ್ವಜ, ಭಾರೀ ಪ್ರಮಾಣದ ಬಾಂಬ್ ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಬುಧವಾರ ತಿಳಿದುಬಂದಿದೆ.

ಬಾರಾಮುಲ್ಲಾದ 10 ಹಳೆಯ ಪಟ್ಟಣದಲ್ಲಿ ಭಾರತೀಯ ಸೇನೆ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಪ್ರತ್ಯೇಕತಾವಾದಿಗಳೆಂದು ಹೇಳಿಕೊಂಡಿರುವ ಕ್ವಾಝಿ ಹಮಾಮ್, ಗಣೈ ಹಮಾಮ್, ಟವೀದ್ ಗುಂಜ್, ಜಮ್ಯಾ ಹಾಗೂ ಇನ್ನಿತರರ ಮನೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಚೀನಾ ದೇಶದ ಧ್ವಜಗಳು, ಎಲ್ ಇಟಿ ಮತ್ತು ಜೆಇಎಂ ಲೆಟ್ರ್ ಹೆಡ್ ಪ್ಯಾಡ್ ಹಾಗೂ ಇನ್ನಿತರೆ ನಿಷೇಧಿಕ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ.

ಎಂದು ಹೇಳಲಾಗುತ್ತಿದೆ.ಉಗ್ರರ ನೆಲೆಗಳಲ್ಲಿ ಚೀನಾ ಧ್ವಜ ದೊರಕಿರುವುದು ಇದೀಗ ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದ್ದು, ಕಾಶ್ಮೀರ ಹಿಂಸಾಚಾರದಲ್ಲಿ ಕೇವಲ ಪಾಕಿಸ್ತಾನವಷ್ಟೇ ಅಲ್ಲದೆ, ಚೀನಾ ದೇಶದ ಕೈವಾಡ ಕೂಡ ಇದೆಯೇನೋ ಎಂಬ ಹಲವು ಶಂಕೆಗಳು ಮೂಡತೊಡಗಿದೆ.ಇನ್ನು ಕಾರ್ಯಾಚರಣೆ ವೇಳೆ ಉಗ್ರರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಅಧಿಕಾರಿಗಳು 44 ಮಂದಿಯನ್ನು ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಸೇನೆ ನಡೆಸಿದ ಕಾರ್ಯಾಚರಣೆ ಕುರಿತಂತೆ ಸೇನಾ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದು, ಬಾರಾಮುಲ್ಲಾ ಪ್ರದೇಶದಲ್ಲಿ ಮಂಗಳವಾರ ಸೇನೆ 12 ಗಂಟೆಗಳ ಕಾರ್ಯಾಚರಣೆಯನ್ನು ನಡೆಸಿತ್ತು.ಕಾರ್ಯಾಚರಣೆ ವೇಳೆ ಪಾಕಿಸ್ತಾನ ಹಾಗೂ ಚೀನಾ ದೇಶಗಳ ಧ್ವಜಗಳು ದೊರಕಿವೆ ಅಲ್ಲದೆ, ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಕರಪತ್ರಗಳು, ಪೆಟ್ರೋಲ್ ಬಾಂಬ್ ಗಳು, ಅಕ್ರಮ ಮೊಬೈಲ್ ಫೋನ್ ಗಳು ಹಾಗೂ ಹಲವು ನಿಷೇದಿತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.ಸೇನೆ, ಪೊಲೀಸರು, ಬಿಎಸ್ಎಫ್ ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಬಾರಾಮುಲ್ಲಾ ಪ್ರದೇಶದಲ್ಲಿ 12 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿತ್ತು.

ಉಗ್ರರಿಗೆ ಸುರಕ್ಷಿತ ತಾಣವಾಗಿದ್ದ ಬಾರಾಮುಲ್ಲಾದ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. 700 ಮನೆಗಳನ್ನು ತಪಾಸಣೆ ನಡೆಸಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

No Comments

Leave A Comment