Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಒಡಿಶಾದಲ್ಲಿ ಭಾರೀ ದುರಂತ: ಆಸ್ಪತ್ರೆಗೆ ಬೆಂಕಿ;24 ರೋಗಿಗಳ ಭೀಕರ ಸಾವು

sum-hospitalಭುವನೇಶ್ವರ: ಒಡಿಶಾದ ರಾಜಧಾನಿ ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 24 ಮಂದಿ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.

“ಎಸ್‌ಯುಎಮ್‌’ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಯನ್ನು ನಿಯಂತ್ರಿಸಲಾಗಿದ್ದು, ರೋಗಿಗಳನ್ನು ಸಮೀಪದ ಹಲವು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರೋಗಿಗಳಿಗೆ ಎಲ್ಲಾ ಅಗತ್ಯ ನೆರವು ಒದಗಿಸುವಂತೆ ಕೇಂದ್ರ ಆರೋಗ್ಯ ಖಾತೆ  ಸಚಿವ ಜೆ.ಪಿ.ನಡ್ಡಾ ಮತ್ತು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಸೂಚಿಸಿದ್ದಾರೆ. ರೋಗಿಗಳ ನೆರವಿಗೆ ಸನಿಹದ ಎಐಎಎಮ್‌ಎಸ್‌ ಆಸ್ಪತ್ರೆಯಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ ಎಂದು ಬಳಿಕ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

„ ಏನಾಯ್ತು?

ಇಲ್ಲಿನ ಶಾಂಪುರ್‌ ಪ್ರದೇಶದಲ್ಲಿರುವ 4 ಅಂತಸ್ತಿನ “ಎಸ್‌ಯುಎಮ್‌’ ಆಸ್ಪತ್ರೆಯ ಮೊದಲ ಅಂತಸ್ತಿನ ಲ್ಲಿರುವ ಡಯಾಲಿಸಿಸ್‌ ವಾರ್ಡ್‌ನಲ್ಲಿ ಸಂಜೆ 7.30ರ ಸಮಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಕ್ಷಣಾರ್ಧದಲ್ಲಿ ಈ ಬೆಂಕಿ ಪಕ್ಕದಲ್ಲೇ ಇದ್ದ ತುರ್ತು ನಿಗಾಘಟಕಕ್ಕೆ ಬೆಂಕಿ ವ್ಯಾಪಿಸಿದೆ. ದುರಂತ ಸಂಭವಿಸಿದ ವೇಳೆ ವಾರ್ಡ್ನಲ್ಲಿ 30 ಜನ ರೋಗಿಗಳು ಇದ್ದರು ಇದ್ದರು.

ಇಲೆಕ್ಟ್ರಿಕ್‌ ಶಾರ್ಟ್‌ ಸರ್ಕೀಟ್ನಿಂದ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಶಂಕಿ ಸಲಾಗಿದೆ. ಘಟನೆ ವೇಳೆ ಆಸ್ಪತ್ರೆಯ ಒಳಗೆ 500ಕ್ಕೂ ರೋಗಿಗಳು ಸಿಲುಕಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಕಿಟಕಿ ಗಾಜುಗಳನ್ನು ಒಡೆದು ಹಲವು ರೋಗಿಗಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಗಾಗಿ 24 ಅಗ್ನಿಶಾಮಕ ವಾಹನಗಳನ್ನು ನಿಯೋಜನೆ ಮಾಡಲಾಗಿತ್ತು. ಬಳಿಕ ಎಲ್ಲಾ ರೋಗಿಗಳನ್ನು ಆಸ್ಪತ್ರೆಯಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣ ಹಿನ್ನೆಲೆಯಲ್ಲಿ ಒಡಿಶಾ ಆರೋಗ್ಯ ಸಚಿವ ಆತನು ಎಸ್‌. ನಾಯಕ್‌ ಮಾತನಾಡಿ, ಘಟನೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 2011ರಲ್ಲಿ ಕೋಲ್ಕತಾದ ಎಎಮ್‌ ಆರ್‌ಐ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು 85 ಮಂದಿ ಮೃತಪಟ್ಟಿದ್ದರು.

ಪ್ರಧಾನಿ ತೀವ್ರ ದುಃಖ

ದುರಂತದ ಬಗ್ಗೆ  ಪ್ರಧಾನಿ ತೀವ್ರ ದುಃಖ ವ್ಯಕ್ತ ಪಡಿಸಿದ್ದಾರೆ. ಇದು ಮನ ಕಲುಕುವ ದುರಂತ ಎಂದಿದ್ದು, ಮೃತರ ಕುಟುಂಬಗಳ ಜೊತೆ ನಾವಿದ್ದೇವೆ ಎಂದಿದ್ದಾರೆ. ಈ ಸಂಬಂಧ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌,ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಗಾಯಾಳುಗಳಿಗೆ  ಏಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಿ ವಿಶೇಷ ಚಿಕಿತ್ಸೆ ನೀಡಲು ಸಲಹೆ ನೀಡಿದ್ದಾರೆ.

No Comments

Leave A Comment