Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಪಾಕ್ ಗೆ ಚೀನಾ ಬೆಂಬಲ; ಬ್ರಿಕ್ಸ್ ನಲ್ಲೊಂದು, ಚೀನಾದಲ್ಲೊಂದು ಹೇಳಿಕೆ!

modi-china1-700ಬೀಜಿಂಗ್‌ : ಪಾಕಿಸ್ಥಾನವು ಭಯೋತ್ಪಾದನೆಯ ಮಾತೃಭೂಮಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಒಂದು ದಿನದ ತರುವಾಯ, ಪಾಕಿಸ್ಥಾನದ ಸರ್ವಋತು ಮಿತ್ರನಾಗಿರುವ ಚೀನ “ಯಾವುದೇ ದೇಶವನ್ನು ಭಯೋತ್ಪಾದನೆಯೊಂದಿಗೆ ಜೋಡಿಸುವುದಕ್ಕೆ ತನ್ನ ವಿರೋಧವಿದೆ’ ಎಂದು ಹೇಳಿದೆ.

ಮಾತ್ರವಲ್ಲದೆ, ಉಗ್ರ ನಿಗ್ರಹ ಕಾರ್ಯದಲ್ಲಿ ಪಾಕಿಸ್ಥಾನ ಗೈದಿರುವ “ಮಹಾನ್‌ ತ್ಯಾಗ’ವನ್ನು ವಿಶ್ವ ಸಮುದಾಯ ಗುರುತಿಸಬೇಕು’ ಎಂದು ಚೀನ ಕರೆ ನೀಡಿದೆ.

ಗೋವೆಯಲ್ಲಿ ನಡೆದ ಬ್ರಿಕ್ಸ್‌ ಶೃಂಗದಲ್ಲಿ ಪ್ರಧಾನಿ ಮೋದಿ ಅವರು ಪಾಕಿಸ್ಥಾನವನ್ನು ಉಗ್ರ ದೇಶವೆಂದು ಬಿಂಬಿಸಿರುವ ರೀತಿಯ ಬಗ್ಗೆ ಕೇಳಲಾದ ಪ್ರತಿಕ್ರಿಯೆಗೆ ಕಟುವಾಗಿ ಉತ್ತರಿಸಿದ ಚೀನದ ವಿದೇಶ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್‌ ಅವರು “ಯಾವುದೇ ದೇಶವನ್ನು ಭಯೋತ್ಪಾದನೆಯೊಂದಿಗೆ ಜೋಡಿಸುವುದನ್ನು ಚೀನ ವಿರೋಧಿಸುತ್ತದೆ’ ಎಂದು ಹೇಳಿದರು.

ಇಸ್ಲಾಮಾಬಾದ್‌ ಭಾರತ ವಿರೋಧಿ ಉಗ್ರ ಗುಂಪುಗಳಿಗೆ ನೆರವು ಮತ್ತು ಚಿತಾವಣೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಮಾಡಿರುವ ಟೀಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಿದ್ದ ಚುನ್ಯಿಂಗ್‌ ಅವರು, “ಉಗ್ರ ನಿಗ್ರಹ ಕುರಿತಾದ ಚೀನದ ನಿಲುವು ಖಚಿತವಿದೆ ಮತ್ತು ಯಾವುದೇ ದೇಶ ಅಥವಾ ಧರ್ಮದೊಂದಿಗೆ ಭಯೋತ್ಪಾದನೆಯನ್ನು ಜೋಡಿಸುವುದಕ್ಕೆ ನಮ್ಮ ವಿರೋಧ ಇರುವ ನೀತಿಗೆ ಅದು ಸಮಾನವಾಗಿದೆ. ನಾವು ಎಲ್ಲ ಬಗೆಯ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ ಮತ್ತು ಎಲ್ಲ ದೇಶಗಳ ಸ್ಥಿರತೆ ಹಾಗೂ ಭದ್ರತೆಗಾಗಿ ಭಯೋತ್ಪಾದನೆ ವಿರುದ್ಧದ ಸಂಘಟಿತ ಅಂತಾರಾಷ್ಟ್ರೀಯ ಯತ್ನಗಳಲಿಲ ನಾವು ನಂಬಿಕೆ ಇರಿಸಿದ್ದೇವೆ’ ಎಂದು ಹೇಳಿದರು.

“ಭಾರತ ಮತ್ತು ಪಾಕಿಸ್ಥಾನ ಎರಡೂ ದೇಶಗಳು ಭಯೋತ್ಪಾದನೆಯ ಬಲಿಪಶುಗಳಾಗಿವೆ. ಉಗ್ರ ನಿಗ್ರಹದಲ್ಲಿ ಪಾಕಿಸ್ಥಾನ ಗೈದಿರುವ ಮಹಾನ್‌ ತ್ಯಾಗವನ್ನು ಅಂತಾರಾಷ್ಟ್ರೀಯ ಸಮುದಾಯ ಗುರುತಿಸಬೇಕಾಗಿದೆ’ ಎಂದು ಚುನ್ಯಿಂಗ್‌ ಹೇಳಿದರು.

No Comments

Leave A Comment