Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಗ್ಯಾಂಗ್‌ ರೇಪ್‌, ವಿಡಿಯೋ ಬೆದರಿಕೆ: ಬಿಜೆಪಿ ನಾಯಕನ ಪುತ್ರ ಆರೋಪಿ

gang-rapeಮಹಾಸಮುಂದ್‌ : ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯೊಬ್ಬಳ ಮೇಲೆ ಕಳೆದ ವಾರ ನಡೆದಿದ್ದ ಗ್ಯಾಂಗ್‌ ರೇಪ್‌ ಪ್ರಕರಣದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಮೂರನೇ ಆರೋಪಿಯಾಗಿರುವ ಸ್ಥಳೀಯ ಬಿಜೆಪಿ ನಾಯಕನ ಪುತ್ರನಿಗಾಗಿ ಛತ್ತೀಸ್‌ಗಢ ಪೊಲೀಸರೀಗ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ರಾಜ್ಯ ರಾಜಧಾನಿ ರಾಯಪುರದಿಂದ ಸುಮಾರು 75 ಕಿ.ಮೀ. ದೂರದಲ್ಲಿರುವ ಮಹಾಸಮುಂದ್‌ ಜಿಲ್ಲೆಯಲ್ಲಿ ಕಳೆದ ಮಂಗಳವಾರ 36ರ ಹರೆಯದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.

ಪೊಲೀಸರು ತಿಳಿಸಿರುವ ಪ್ರಕಾರ ಮಹಿಳೆಯನ್ನು ಆಕೆಯ ಮನೆಯ ಹಿಂಬದಿಯಿಂದ ಬಲವಂತವಾಗಿ ಹೊತ್ತೂಯ್ಯಲಾಗಿತ್ತು. ಆಗ ಆಕೆಯ ಜತೆಗೆ ಆಕೆಯ ಸಹೋದರಿ ಇದ್ದಳು. ಆರೋಪಿಗಳಾದ ದೇವೇಂದ್ರ, ಫ‌ರೀದ್‌ ಅಲಿ ಮತ್ತು ಪ್ರಿನ್ಸ್‌ ಸಲೂಜ ಅವರು ಮಹಿಳೆಯನ್ನು ಕಾರಿನೊಳಗೆ ತುರುಕಿ ಒಯ್ದಿದ್ದರು.

ಬಳಿಕ ಆಕೆಯ ಮೇಲೆ ಮೂವರೂ ಸೇರಿ ಅತ್ಯಾಚಾರ ನಡೆಸಿದ್ದರಲ್ಲದೆ ಆ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದರು. ಪೊಲೀಸರಿಗೆ ದೂರು ನೀಡಿದರೆ ರೇಪ್‌-ವಿಡಿಯೋವನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್‌ ಲೋಡ್‌ ಮಾಡುವುದಾಗಿ ಅವರು ಮಹಿಳೆಗೆ ಬೆದರಿಕೆ ಹಾಕಿದ್ದರು.

ಹಾಗಿದ್ದರೂ ಅತ್ಯಾಚಾರಕ್ಕೆ ಗುರಿಯಾಗಿದ್ದ ಮಹಿಳೆ ಮರುದಿನವೇ ಪೊಲಿಸರಿಗೆ ದೂರು ನೀಡಿದ್ದಳು. ಅದಾಗಿ ಆರೋಪಿಗಳಲ್ಲಿ ಪ್ರಮುಖನಾದ ಪ್ರಿನ್ಸ್‌ ಸಲೂಜ (ಈತನ ತಂದೆ ಈ ಹಿಂದೆ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಪದಾಧಿಕಾರಿಯಾಗಿದ್ದ) ತಲೆಮರೆಸಿಕೊಂಡಿದ್ದ.

ರೇಪ್‌ ಕೃತ್ಯದಲ್ಲಿ ಆತನೊಂದಿಗಿದ್ದ ಆತನ ಇನ್ನಿಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿ ಕೃತ್ಯದಲ್ಲಿ ಬಳಸಲಾದ ಕಾರನ್ನು ವಶಕ್ಕೆ ತೆಗೆದುಕೊಂಡರು. ಎಲ್ಲ ಮೂರು ಆರೋಪಿಗಳ ವಿರುದ್ಧ ಪೊಲೀಸರು ಕ್ರಿಮಿನಲ್‌ ಬೆದರಿಕೆ ಮತ್ತು ಗ್ಯಾಂಗ್‌ ರೇಪ್‌ ಕೇಸನ್ನು ದಾಖಲಿಸಿಕೊಂಡಿದ್ದಾರೆ.

No Comments

Leave A Comment