Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಸೇನೆ-ಪಾಕ್ ಸರ್ಕಾರದ ನಡುವಿನ ಬಿರುಕಿನ ಕುರಿತು ವರದಿ ಮಾಡಿದ್ದ ಪತ್ರಕರ್ತನಿಗೆ “ದಿಗ್ಭಂಧನ”

nawaz-dawn-newsಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಬಳಿಕ ಪಾಕಿಸ್ತಾನ ಸೇನೆ ಹಾಗೂ ನವಾಜ್ ಷರೀಫ್ ಸರ್ಕಾರದ ನಡುವೆ ಬಿರುಕು ಉಂಟಾಗಿದೆ  ಎಂದು ವರದಿ ಮಾಡಿದ್ದ ಪಾಕಿಸ್ತಾನ ಪತ್ರಕರ್ತನ ಮೇಲೆ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಆತ ಪಾಕಿಸ್ತಾನ ಗಡಿ ದಾಟದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ  ನೀಡಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ದಿಗ್ಭಂಧನಕ್ಕೊಳಗಾಗಿರುವ ಪತ್ರಕರ್ತ ಸಿರಿಲ್ ಅಲ್ಮೈದಾ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ನನ್ನ ಮಾತೃಭೂಮಿ. ದೇಶ ತೊರೆಯುವ ಯಾವುದೇ ಆಲೋಚನೆ  ನನ್ನಲ್ಲಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಉರಿ ಉಗ್ರ ದಾಳಿ ಪ್ರಕರಣದ ಬಳಿಕ ಪಾಕಿಸ್ತಾನದ ವಿರುದ್ಧ ಕೆಂಗಣ್ಣು ಬೀರಿರುವ ಭಾರತ, ವಿಶ್ವ ಸಮುದಾಯದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ನಿರ್ಧರಿಸಿದೆ.

ಇದೇ ಸಂದರ್ಭದಲ್ಲಿ  ಪಾಕಿಸ್ತಾನ ಸೇನೆಯ ಆಶ್ರಯದಲ್ಲಿರುವ ಉಗ್ರರು ಭಾರತದ ಗಡಿಯಲ್ಲಿ ದಾಳಿ ಮಾಡುತ್ತಿದ್ದು. ಪಾಕಿಸ್ತಾನದ ಗಾಯಕ್ಕೆ ಉಪ್ಪು ಸವರುವಂತಾಗಿತ್ತು. ಅಮೆರಿಕ ಸೇರಿದಂತೆ ವಿಶ್ವ ಸಮುದಾಯ ಕೂಡ  ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದವು. ಅಮೆರಿಕ ಮಾತ್ರವಲ್ಲದೇ ಉಗ್ರ ಅಜರ್ ಮಸೂದ್ ಬೆಂಬಲಕ್ಕೆ ನಿಂತಿದ್ದ ಚೀನಾ ಕೂಡ ಪರೋಕ್ಷವಾಗಿ ಉಗ್ರರ ವಿರುದ್ಧ  ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿತ್ತು.

ಇದೇ ಸಂದರ್ಭದಲ್ಲೇ ಪಾಕಿಸ್ತಾನದ ಖ್ಯಾತ ಪತ್ರಿಕೆ ಡಾನ್, ಗಡಿಯಲ್ಲಿ ಉಗ್ರ ಚಟುವಟಿಕೆ ಹಾಗೂ ಉಗ್ರ ಪೋಷಣೆ ಮಾಡುತ್ತಿರುವ ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಸರ್ಕಾರದ ನಡುವೆ  ಭಿನ್ನಾಭಿಪ್ರಾಯವಿದೆ ಎಂದು ಮುಖಪುಟದಲ್ಲೇ ಸುದೀರ್ಘ ವರದಿ ಪ್ರಸಾರ ಮಾಡಿತ್ತು. ಭಾರತದ ಸೀಮಿತ ದಾಳಿ ಬೆನ್ನಲ್ಲೇ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್  ಷರೀಫ್ ಅವರು ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದರಂತೆ. ಆದರೆ ಇದಕ್ಕೆ ಪಾಕಿಸ್ತಾನ ಗುಪ್ತಚರ ಇಲಾಖೆ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥರು ಅಸಮಾಧಾನ  ವ್ಯಕ್ತಪಡಿಸಿದ್ದರಂತೆ.

ಉರಿ ಉಗ್ರ ದಾಳಿ ಬಳಿಕ ಭಾರತ ಪಾಕಿಸ್ತಾನವನ್ನು ಮೂಲೆಗುಂಪಾಗಿಸುವ ಪ್ರಯತ್ನಕ್ಕೆ ಕೈಹಾಕಿದ್ದು, ವಿಶ್ವ ಸಮುದಾಯ ಕೂಡ ಈ ಬಗ್ಗೆ ಪಾಕಿಸ್ತಾನದ ಮೇಲೆ ಒತ್ತಡ  ಹೇರುತ್ತಿವೆ. ಹೀಗಾಗಿ ಮೂಲೆಗುಂಪಾಗುವುದನ್ನು ತಡೆಯಲು ನಾವು ಪ್ರಸ್ತುತ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕಿದೆ ಎಂದು ನವಾಜ್ ಷರೀಫ್ ಹೇಳಿದ್ದರು. ಆದರೆ ಇದಕ್ಕೆ ಉಭಯ  ಇಲಾಖೆಯ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು.ಪತ್ರಿಕೆಯ ವರದಿ ಕುರಿತಂತೆ ಕೆಂಡಾಮಂಡಲವಾಗಿರುವ ಪಾಕಿಸ್ತಾನ ಸರ್ಕಾರ ಇದೀಗ ವರದಿ ಪ್ರಸಾರ ಮಾಡಿದ ಪತ್ರಕರ್ತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಆತನ ಮೇಲೆ ದಿಗ್ಭಂಧನ  ಹೇರಿದೆ.

ಯಾವುದೇ ಕಾರಣಕ್ಕೂ ಆತ ದೇಶ ತೊರೆಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.ಇನ್ನು ಈ ಬಗ್ಗೆ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಸರ್ಕಾರ ಪತ್ರಿಕಾ ವರದಿ ದುರುದ್ದೇಶ ಪೂರಿತವಾಗಿದ್ದು, ಪಾಕಿಸ್ತಾನ ಸರ್ಕಾರ ಇಂತಹ ಕಾನೂನು ಬಾಹಿರ  ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ.

No Comments

Leave A Comment