Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ರಾತ್ರಿ 1ರವರೆಗೂ ಬಾರ್ ಮತ್ತು ರೆಸ್ಟೋರೆಂಟ್ ಅವಧಿ ವಿಸ್ತರಣೆ: ಅಬಕಾರಿ ಸಚಿವ ಹೆಚ್ ವೈ ಮೇಟಿ

excise-departmentಬೆಂಗಳೂರು: ಮದ್ಯಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಕರ್ನಾಟಕ ಸರ್ಕಾರ ಬಾರ್ ಮತ್ತು ರೆಸ್ಟೋರೆಂಟ್ ಗಳ ಸಮಯವನ್ನು ವಿಸ್ತರಿಸುವ ನಿರ್ಧಾರಕ್ಕೆ ಬಂದಿದೆ.ಈ ಬಗ್ಗೆ ಸ್ವತಃ ಅಬಕಾರಿ ಸಚಿವ ಹೆಚ್ ವೈ ಮೇಟಿ ಅವರು ಸ್ಪಷ್ಟನೆ ನೀಡಿದ್ದು, ಈ ಹಿಂದೆ ವಾರಾಂತ್ಯದಲ್ಲಿ ಮಾತ್ರ ಇದ್ದ ಬಾರ್ ಅವಧಿ ವಿಸ್ತರಣೆಯನ್ನು ಇದೀಗ ವಾರಪೂರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ.

ಅದರಂತೆ ಬಾರ್ ಮತ್ತು ರೆಸ್ಟೋರೆಂಟ್ ಗಳ ಸಮಯವನ್ನು 1 ಗಂಟೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಮೇಟಿ ಅವರು, ಅಬಕಾರಿ ಇಲಾಖೆಯ ವತಿಯಿಂದ ಬಾರ್ ಮತ್ತು ರೆಸ್ಟೋರೆಂಟ್ ಸಮಯವನ್ನು ರಾತ್ರಿ 1ಗಂಟೆಯವರೆಗೂ ವಿಸ್ತರಿಸಲು  ನಿರ್ಧರಿಸಲಾಗಿದೆ.

ಆದರೆ ಈ ವಿಸ್ತರಣೆ ಕೇವಲ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಸಮಯವೇ ಮುಂದುವರೆಯಲಿದೆ ಎಂದು ಹೇಳಿದ್ದಾರೆ.ಇದೇ ವೇಳೆ ಬಿಹಾರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮದ್ಯಮಾರಾಟ ನಿಷೇಧಿಸುವ ಕುರಿತು ಮಾತಾನಾಡಿದ ಮೇಟಿ ಅವರು, “ಆ ಅಧಿಕಾರ ತಮಗಿಲ್ಲ. ನಾನು ಕೇವಲ ಯಾರೂ  ಕುಡಿಯಬೇಡಿ ಎಂದು ಸಲಹೆ ನೀಡಬಹುದು.

ಆದರೆ ನೀವು ಕುಡಿಯಲೇ ಬಾರದು ಎಂದು ಕಾನೂನು ಮಾಡುವ ಹಕ್ಕು ತಮಗಿಲ್ಲ. ಈ ಆಧಿಕಾರವಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಮಾತ್ರ. ಅವರು ಬಯಸಿದರೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬಹುದು ಎಂದು ಹೇಳಿದರು.

No Comments

Leave A Comment