Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಶರಣ ಸಂಸ್ಕೃತಿ ಉತ್ಸವ-2016-ಚಿತ್ರಕಲಾ ಪ್ರದರ್ಶನ

ಶರಣ ಸಂಸ್ಕೃತಿ ಉತ್ಸವ-೨೦೧೬ ಅಂಗವಾಗಿ ಶ್ರೀಮಠದ ರಾಜಾಂಗಣದಲ್ಲಿ ಎಸ್.ಜೆ.ಎಂ.ಚಿತ್ರಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದು ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು.dsc_0209-1

ಈ ಕಾರ್ಯಕ್ರಮದಲ್ಲಿ ತಿಪಟೂರಿನ ರುದ್ರಮುನಿ ಸ್ವಾಮೀಜಿ ಮತ್ತು ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಹಾಗೂ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕಣ್ಮೇಶ್ ಉಪನ್ಯಾಸಕ ಪಾಪಣ್ಣ ಮತ್ತು ನೀಲಕಂಠಪ್ಪ ಉಪಸ್ಥಿತರಿದ್ದರು.

ಪ್ರಾಚಾರ್ಯರಾದ ಕಣ್ಮೇಶ್ ರವರು ಚಿತ್ರಕಲೆಯ ಬಗ್ಗೆ ಮಾಹಿತಿ ನೀಡುತ್ತಾ, ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಪ್ರತಿವರ್ಷವೂ ಚಿತ್ರಗಳನ್ನು ಪ್ರದರ್ಶಿಸುತ್ತು ಬಂದಿದ್ದೇವೆ.

ಈ ವರ್ಷ ದಿನಾಂಕ ೦೭-೧೦-೨೦೧೬ ರಿಂದ ೧೩-೧೦-೨೦೧೬ ರವರೆಗೆ ಪ್ರದರ್ಶನಗೊಳ್ಳಲಿವೆ, ಸುಮಾರು ೨೫ ವಿದ್ಯಾರ್ಥಿಗಳು ೨ ತಿಂಗಳಿನಿಂದ ಸತತ ಪರಿಶ್ರಮಪಟ್ಟು ೪೦೦ಕ್ಕೂ ಹೆಚ್ಚು ಕಲಾಕೃತಿಗಳು ಚಿತ್ರಸಲ್ಪಟ್ಟಿವೆ. ಇದರಲ್ಲಿ ಲ್ಯಾಂಡ್ ಸ್ಕೇಪ್, ಚಿತ್ರಸಂಯೋಜನೆ, ಕ್ರಿಯೇಟಿವ್ ಪೇಂಟಿಂಗ್, ಭಾವಚಿತ್ರಗಳು, ಅಫ್ ಸ್ಟ್ರಾಕ್ಟ್ ಕಲಾಕೃತಿಗಳು ಸಾಧುಸಂತರ ಕಲಾಕೃತಿಗಳು, ಬುದ್ದನ ಸರಣಿ ಕಲಾಕೃತಿಗಳು, ರೇಖಾಚಿತ್ರಗಳು, ಚಿತ್ರದುರ್ಗದ ಪ್ರಕೃತಿ ಮತ್ತು ಕೋಟೆಯ ಚಿತ್ರಗಳು ಪ್ರದರ್ಶನಗೊಂಡಿವೆ.

ವಿದ್ಯಾರ್ಥಿ ಪ್ರೇಮರಾಜ್ ರವರು ರಚಿಸಿರುವ ಭೀಕರ ಬರಗಾಲ, ನೀರನ ಆಹಾಕಾರದ ಮಧ್ಯೆ ಪ್ರಾಣಿಪಕ್ಷಿಗಳ ಹೋರಾಟದ ಬದುಕನ್ನು ಉತ್ತವವಾಗಿ ಚಿತ್ರಸಿದ್ದಾರೆ.

ಕ್ರಿಯೇಟಿವ್ ಪೇಂಟಿಂಗ್‌ನಲ್ಲಿ ದುಶ್ವಟಗಳಿಗೆ ಬಲಿಯಾಗಿರುವ ವ್ಯಕ್ತಿಯ ಮಾನಸಿಕ ಸ್ಥಿತಿ ಹಾಗೂ ಮಧ್ಯಪಾನ, ಧೂಮಪಾನಗಳಿಗೊಳಾಗಾಗಿ ಕಾಲಚಕ್ರ ವ್ಯಸನಿಗಳನ್ನು ಯಾವರೀತಿ ಬಲಿಪಶುಮಾಡುತ್ತದೆ ಎಂಬ ಚಿತ್ರಣ ಅತ್ಯಮೋಘವಾಗಿದೆ.

ವಿದ್ಯಾರ್ಥಿಗಳಾದ ಕಿರಣ್ ಕುಮಾರ್, ಮಂಜುಳ ಆವನೂರು, ಅಂಬಿಕಾ, ಮಹಂತೇಶ್, ಅಮಿತ್ ಮುಂತಾದವರು ರಚಿಸಿರುವ ಕಲಾಕೃತಿಗಳು ಜನಮನ ಸೆಳೆಯುತ್ತಿವೆ ಎಂದು ಹೇಳಿದರು.

No Comments

Leave A Comment