Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳ ಸುದ್ದಿ…

52537507ಇಸ್ಪೀಟ್‌ ಜುಗಾರಿ ಪ್ರಕರಣಗಳು….
ಶಿರ್ವಾ: ಜಾನ್ಸನ್‌ ಡಿಸೋಜಾ, ಉಪನಿರೀಕ್ಷಕರು ಶಿರ್ವಾ ಪೊಲೀಸ್ ಠಾಣೆ ಇವರಿಗೆ ದಿನಾಂಕ 03/10/2016 ರಂದು ಮಧ್ಯಾಹ್ನ 15:00 ಗಂಟೆಗೆ ಕುತ್ಯಾರು ಗ್ರಾಮದ ಹಿಂದೂ ರುದ್ರ ಭೂಮಿಯ ಹತ್ತಿರದ ಹಾಡಿಯಲ್ಲಿ ಕೆಲವು ಮಂದಿ ಇಸ್ಪೀಟ್, ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತು ನಂತರ ಇಬ್ಬರು ಪಂಚರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಅಲ್ಲಿಗೆ ಹೋಗಿ ದೂರದಲ್ಲಿ ನಿಂತು ನೋಡಲಾಗಿ ಹಾಡಿಯಲ್ಲಿ ಕೆಲವು ಮಂದಿ ಸುತ್ತ ಕುಳಿತು ಓರ್ವ ಇಸ್ಪೀಟ್ ಎಲೆಗಳನ್ನು ನೆಲದ ಮೇಲೆ ಹಳೆಯ ದಿನಪತ್ರಿಕೆಯ ಮೇಲೆ ಹಾಕುತ್ತಿದ್ದು ಸುತ್ತ ಕುಳಿತವರು ರೂಪಾಯಿ 50 ಒಳಗೆ, ರೂಪಾಯಿ 50 ಹೊರಗೆ ಎಂದು ಹೇಳಿ ಹಣವನ್ನು ಪಣವಾಗಿ ಕಟ್ಟುತ್ತಿದ್ದು, ಈ ವ್ಯಕ್ತಿಗಳು ಅಂದರ್-ಬಾಹರ್ ಎಂಬ ಜೂಜಾಟವನ್ನು ಆಡುತ್ತಿರುವುದನ್ನು ಖಚಿತಪಡಿಸಿ ಸಮಯ 15:20 ಗಂಟೆಗೆ ದಾಳಿ ನಡೆಸಿದೆವು. ಇಸ್ಪೀಟ್ ಆಡುತ್ತಿದ್ದ 1) ಜಗದೀಶ (46) ತಂದೆ: ಮುದ್ದು ಮೂಲ್ಯ, ವಾಸ: ದುರ್ಗಾನಗರ, ಬಿಳಿಯಾರು, ಶಂಕರಪುರ ಅಂಚೆ, ಕುರ್ಕಾಲು ಗ್ರಾಮ 2) ರಿತೇಶ್ (22) ತಂದೆ: ಜಗನ್ನಾಥ ಪೂಜಾರಿ, ವಾಸ: ಬಗ್ಗು ತೋಟ, ಕುತ್ಯಾರು ಗ್ರಾಮ 3) ಅರುಣ್ ರಾವ್, (49) ತಂದೆ: ನಾರಾಯಣ ರಾವ್, ವಾಸ: ಜನರನ್ನು ವಶಕ್ಕೆ ಪಡೆದು ಹಾಗೂ ಆಟಕ್ಕೆ ಬಳಸಿದ ಹಣ, ಹಳೆಯ ದಿನಪತ್ರಿಕೆ ಹಾಗೂ ಇಸ್ಪೀಟಿನ ಎಲೆಗಳನ್ನು ವಶಕ್ಕೆ ಪಡೆದಿರುವುದಾಗಿದೆ,ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 103/2016 ಕಲಂ 87 ಕೆ.ಪಿ.ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

—————————————————————————————————————————————
ಮಣಿಪಾಲ: ದಿನಾಂಕ 03/10/2016 ರಂದು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರನಗರ ಹೊಟೇಲ್ ಆಶ್ಲೇಷ ಬಳಿ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಇಸ್ಫೀಟ್‌ ಎಲೆಗಳ ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಹಣವನ್ನು ಪಣವಾಗಿಟ್ಟುಕೊಂಡು ಆಡುತ್ತಿದ್ದವರನ್ನು ಸಮಯ 18:30ಗಂಟೆಗೆ ಸುದರ್ಶನ್ ಎಮ್‌, ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚಿ ದಾಳಿ ನಡೆಸಿ ಆರೋಪಿತರಾದ 1) ರೋನಾಲ್ಡ್ ಡಿಸೋಜಾ(43), 2) ಸಂಜೀವ ಸುವರ್ಣ(54), 3) ಅನಿಲ್ ಕುಮಾರ್‌(37), 4) ಗಣೇಶ ಶೇರಿಗಾರ(36) 5) ದಿನೇಶ್ ಪೂಜಾರಿ(35), 6) ಎಲ್ಸನ್‌(32) 7) ಶಂಕರ ನಾಯ್ಕ(47), 8) ಮಹಮ್ಮದ್ ರಫೀಕ್‌(47), ಇವರನ್ನು ದಸ್ತಗಿರಿ ಮಾಡಿ ರೂಪಾಯಿ 16300/-, 52 ಇಸ್ಫೀಟ್‌ ಎಲೆಗಳು, ದಿನ ಪತ್ರಿಕೆ ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 227/2016 ಕಲಂ 87 ಕೆ.ಪಿ.ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

—————————————————————————————————————————————
ಉಡುಪಿ: ಜಿ ರತ್ನ ಕುಮಾರ್ ಪೊಲೀಸ್ ನಿರೀಕ್ಷಕರು ಡಿಸಿಬಿ ಉಡುಪಿ ಇವರು ದಿನಾಂಕ 03/10/2016 ರಂದು ಸಾಯಂಕಾಲ 4:15 ಗಂಟೆಗೆ ಪುತ್ತೂರು ಗ್ರಾಮದ ವಾಸುಕೀ ನಗರ ರಸ್ತೆಯ ಡಿಸೋಜಾ ಕಂಪೌಂಡ್‌ ನಲ್ಲಿರುವ ಮನೆ ನಂ 2-64 ರ ಪಕ್ಕದ ಓಪನ್‌ ಶೆಡ್‌‌ ನಲ್ಲಿ ಸಾರ್ವಜನಿಕರು ಸೇರಿಕೊಂಡು ಕಾನೂನು ಬಾಹಿರವಾಗಿ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಸಾಯಂಕಾಲ 05:00 ಗಂಟೆಗೆ ಹಣವನ್ನು ಪಣವಾಗಿರಿಸಿಕೊಂಡು ಕಾನೂನು ಬಾಹಿರವಾಗಿ ಉಲಾಯಿ-ಪಿದಾಯಿ ಎಂದು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ದಸ್ತಗಿರಿ ಮಾಡಿ ಆರೋಪಿತರ ಹೆಸರು ವಿಳಾಸ ವಿಚಾರಿಸಲಾಗಿ 1. ಸುನೀಲ್‌ ಶೆಟ್ಟಿ , 2. ವಾಸು ಪೂಜಾರಿ, 3. ಪ್ರಕಾಶ ಆಚಾರ್ಯ, 4, ದಿನೇಶ ಮೊಗವೀರ, 5. ಸುಧೀರ್ ನಾಯ್ಕ, 6. ಬಾಬು ಆಚಾರಿ, 7. ಅಶೋಕ ಪೂಜಾರಿ ಎಂಬುದಾಗಿ ತಿಳಿಸಿದ್ದು ಆರೋಪಿತರು ಜೂಜಾಟಕ್ಕೆ ಬಳಿಸಿದ್ದ ಒಟ್ಟು ನಗದು ರೂ 10,950/-, 52 ಇಸ್ಪೀಟು ಎಲೆಗಳು, 7 ಪ್ಲಾಸ್ಟೀಕ್‌ ಚೇರ್ ಮತ್ತು ರೌಂಡ್ಸ್ ಟೇಬಲ್‌ ಅನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 227/2016 ಕಲಂ 87 ಕೆ.ಪಿ.ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 219/2016 ಕಲಂ 79,80 ಕೆ.ಪಿ.ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

——————————————————————————————————————————————–
ಅಪಘಾತ ಪ್ರಕರಣಗಳು
ಬ್ರಹ್ಮಾವರ:ದಿನಾಂಕ 01/10/2016 ರಂದು 22:00 ಗಂಟೆಗೆ ಉಡುಪಿ ತಾಲೂಕು, ಉಪ್ಪೂರು ಗ್ರಾಮದ, ಕೆಜಿ ರೋಡ್‌ನ ತಿರುವ ಆಗುವ ಡಿವೈಡರ್ ಬಳಿ, ರಾಷ್ಡ್ರೀಯ ಹೆದ್ದಾರಿ 66 ರಲ್ಲಿ ಆರೋಪಿಯು ತನ್ನ KA-20-MA-0155 ನೇ ನ್ಯಾನೊ ಕಾರನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ KA-20-EA-7535 ನೇ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ಅದರ ಸವಾರ ರತ್ನಾಕರ ಎಂಬವರು ರಸ್ತೆಗೆ ಬಿದ್ದು ಅವರ ಬಲಕಾಲಿಗೆ ರಕ್ತಗಾಯವಾಗಿ, ತಲೆಗೆ ತರಚಿದ ಗಾಯವಾಗಿರುತ್ತದೆ, ಗಾಯಾಳು ರತ್ನಾಕರ ರವರನ್ನು ಚಿಕಿತ್ಸೆ ಬಗ್ಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಜತ್ತನ್ (52)ತಂದೆ: ದಿ| ಕರಿಯಾ ಪೂಜಾರಿ , ವಾಸ: ನಯಂಪಳ್ಳಿ, 3ನೇ ಕ್ರಾಸ್, ಸಂತೆಕಟ್ಟೆ ಅಂಚೆ, ಉಡುಪಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 297/16 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

————————————————————————————————————————————–
ಮಣಿಪಾಲ:ಪಿರ್ಯಾದಿ ವಿನ್ಸೆಂಟ್ ಫೆರ್ನಾಂಡೀಸ್ (43) ತಂದೆ: ಆಂತೋನಿ ಫೆರ್ನಾಂಡಿಸ್ ವಾಸ: ಕಟ್ಟಿಂಗೇರಿ ಗ್ರಾಮ , ಮೂಡುಬೆಳ್ಳೆ, ಉಡುಪಿ ಇವರು ದಿನಾಂಕ 03/10/2016 ರಂದು ತನ್ನ ಸ್ವಂತ ಕೆಲಸದ ನಿಮಿತ್ತ ಅತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ತನ್ನ ಮನೆಗೆ ಹೋಗುವಾಗ ನೆಲ್ಲಿಕಟ್ಟೆ ಕೋಳಿ ಫಾರಂ ಸಮೀಪಿಸುತ್ತಿದ್ದಂತೆ ಸಮಯ ಸುಮಾರು 19:15 ಗಂಟೆಗೆ ತನ್ನ ಎದುರಿನಿಂದ ಒಂದು ಮೋಟಾರು ಸೈಕಲ್ ನ್ನು ಒರ್ವ ಸವಾರನು ಸಹಸವಾರ ಹೆಂಗಸಿನೊಂದಿಗೆ ಹೋಗುತ್ತಿದ್ದು, ಆತ ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಕೆಎ-20-ವೈ-0582 ಸಮೇತ ಹತೋಟಿ ತಪ್ಪಿ ಕೆಳಗೆ ಬಿದ್ದವರನ್ನು ವಿನ್ಸೆಂಟ್ ಫೆರ್ನಾಂಡೀಸ್ ರವರು ಹಾಗೂ ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಗಾಯಗೊಂಡ ಹೆಂಗಸು ಡೋಲಿ ಆಶಾ ಕುಮಾರಿ ಹಾಗೂ ಸವಾರನು ಮ್ಯಾಕ್ವಿನ್ ಜೊಸೆಪ್ ಎಂಬವರಾಗಿದ್ದು ಡೋಲಿ ಆಶಾ ಕುಮಾರಿ ಇವರು ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 228/2016 ಕಲಂ 279,338,304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

——————————————————————————————————————————————–
ವಂಚನೆ ಪ್ರಕರಣ
ಕುಂದಾಪುರ: ಪಿರ್ಯಾದಿಯ ರಾಘವೇಂದ್ರ ಜೋಯಿಸ್‌ (34) ತಂದೆ: ಮಹಾಬಲ ಜೋಯಿಸ್‌ ವಾಸ: ಶ್ರೀ ಶಾರದಾ, ಆಲೂರು ಗ್ರಾಮ ಮತ್ತು ಅಂಚೆ, ಕುಂದಾಪುರ ಇವರಿಗೆ ಆರೋಪಿಗಳಾದ 1) ಉದಯನ್‌ರಾಜೆ ದಾಮೋದರ ಬೋಸ್ಲೆ , 2) ಸಂಜಿತ್‌ ತುಕರಾಮ್‌ ಶಿವಾಲೆ ಇವರು ಮುಂಬೈಯ ಇಂಡೋ ವಲ್ಡ್‌ ಫೈನಾನ್ಸ್‌ ಕಾರ್ಪೋರೇಶನ್‌ ಸಂಸ್ಥೆಯ ಸಹಭಾಗಿತ್ವದೊಂದಿಗೆ ಭೂಮಿಯನ್ನು ಅಡಮಾನವಾಗಿಟ್ಟುಕೊಂಡು ವ್ಯವಹಾರದ ಬಗ್ಗೆ 7% ಸರಳ ಬಡ್ಡಿಯಂತೆ ಸಾಲ ನೀಡುತ್ತೇವೆ ಎಂದು 2015 ನೇ ಆಗಸ್ಟ್‌ ತಿಂಗಳಲ್ಲಿ ಕುಂದಾಪುರ ಮುಖ್ಯರಸ್ತೆಯಲ್ಲಿರುವ ಸುಶಾನ್‌ ಫ್ಲಾಜಾ ಕಟ್ಟಡದಲ್ಲಿ ರಾಘವೇಂದ್ರ ಜೋಯಿಸ್‌ ರವರಿಗೆ ರೂಪಾಯಿ 4 ಕೋಟಿ, ಅಣ್ಣನಾದ ರತ್ನಾಕರ ಜೋಯಿಸರಿಗೆ ರೂಪಾಯಿ 2½ ಕೋಟಿ, ವಿಜಯಾನಂದ ಶೆಟ್ಟಿ ರವರಿಗೆ ರೂಪಾಯಿ 2½ ಕೋಟಿ, ಹಾಗೂ ರಾಮಕೃಷ್ಣ ಪೈ ರವರಿಗೆ ರೂಪಾಯಿ 6 ಕೋಟಿ ಸಾಲ ನೀಡುವುದಾಗಿ ನಂಬಿಸಿ, ರಾಘವೇಂದ್ರ ಜೋಯಿಸ್‌ ರವರಿಗೆ ಮತ್ತು ಇತರರ ಸಂಬಧಿಕರ ಜಾಗದ ದಾಖಲೆಗಳನ್ನು ಸಾಲ ಕೊಡುವ ಬಗ್ಗೆ ಪಡಕೊಂಡು, ಆರೋಪಿಗಳು ರೂಪಾಯಿ 33,50,000/- ಹಣವನ್ನು ಸಾಲದ ಪ್ರೊಸೆಸ್‌ ಬಗ್ಗೆ ಪಡೆದುಕೊಂಡು ಭೂಮಿಗಳ ಅಡಮಾನ ಪತ್ರ ಬರೆದು ಸಾಲ ನೀಡದೇ ಕೊಟ್ಟ ಹಣವನ್ನು ಹಿಂತಿರುಗಿಸದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ, ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 282/2016 ಕಲಂ: 406, 409, 417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

————————————————————————————————————————————————
ಅಸ್ವಾಭಾವಿಕ ಮರಣ ಪ್ರಕರಣ
ಉಡುಪಿ:ಪಿರ್ಯಾದಿ ವಿಜಯ ಬಿ ಶೆಟ್ಟಿ (51) ವಿಳಾಸ: ಫ್ಲಾಟ್ ನಂ 203 ಸಾಯಿರಾಧ ಪ್ರೈಡ್, ಬ್ರಹ್ಮಗಿರಿ ರವರ ಗಂಡನಾದ ಭಾಸ್ಕರ ಶೆಟ್ಟಿ (61) ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಈ ಬಗ್ಗೆ ಮಾನಸಿಕವಾಗಿ ನೊಂದುಕೊಂಡು ಚಿಕಿತ್ಸೆ ಸಲುವಾಗಿ ಉಡುಪಿಯ ವಾಸುದೇವ್‌ ಮತ್ತು ಬಾಳಿಗಾ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುತ್ತಾರೆ. ದಿನಾಂಕ 03/10/2016 ರಂದು ವಿಜಯ ಬಿ ಶೆಟ್ಟಿ ರವರು ಮತ್ತು ಭಾಸ್ಕರ ಶೆಟ್ಟಿಯವರು ಮಧ್ಯಾಹ್ನ 2:00 ಗಂಟೆಗೆ ಬೆಡ್ ರೂಮ್‌ ನಲ್ಲಿ ಮಲಗಿದ್ದು ಸಂಜೆ ಸುಮಾರು 4:00 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡುವಾಗ ಭಾಸ್ಕರ ಶೆಟ್ಟಿಯವರು ಪಕ್ಕದಲ್ಲಿ ಇರದೇ ಇದ್ದ ಕಾರಣ ಹುಡುಕುತ್ತಾ ಮನೆಯ ಹಾಲ್‌ಗೆ ಬಂದು ನೋಡಿದಾಗ ಭಾಸ್ಕರ ಶೆಟ್ಟಿಯವರು ಹಾಲ್‌ ನ ಸಿಲಿಂಗ್ ಫ್ಯಾನ್‌ಗೆ ಚೂಡೀದಾರದ ವೆಲ್‌ ನಿಂದ ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡಿರುವುದು ಕಂಡು ಬಂದಿದ್ದು. ಅಕ್ಕಪಕ್ಕದ ಮನೆಯವರನ್ನು ಕರೆದು ನೋಡುವಾಗ ಮೃತಪಟ್ಟಿರುತ್ತಾರೆ. ಭಾಸ್ಕರ ಶೆಟ್ಟಿಯವರು ಆನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು, ಡಿ, ಆರ್‌ ಕ್ರಮಾಂಕ 70/2016 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ
ಹುಡುಗಿ ಕಾಣೆ ಪ್ರಕರಣ

————————————————————————————————————————————————–
ಬೈಂದೂರು:ಪಿರ್ಯಾದಿ ಪುರುಷೋತ್ತಮ್‌ (39) ಆಚಾರ್ಯ ತಂದೆ ಮಹಾಬಲ ಆಚಾರ್ಯ್‌ ಬ್ರಹ್ಮಶ್ರೀ, ಕುಳ್ಳನಕೇರೆ ನಾವುಂದ ಗ್ರಾಮ ಕುಂದಾಪುರ ರವರ ಅಣ್ಣನ ಮಗಳಾದ ಸುಚಿತ್ರಾ (24) ಎಂಬುವವರು ದಿನಾಂಕ 02/10/2016 ರಂದು ಬೆಳಿಗ್ಗೆ 8:45 ಗಂಟೆಗೆ ಕುಂದಾಪುರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಕುಂದಾಪುರ ತಾಲೂಕು ನಾವುಂದ ಗ್ರಾಮದ ಕುಳ್ಳನಕೇರೆ ಎಂಬಲ್ಲಿನ ಅವರ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು ಅವಳ ಪತ್ತೆಯ ಬಗ್ಗೆ ಸಂಬಂದಿಕರ ಮನೆಯಲ್ಲಿ ಹಾಗೂ ಆಕೆಯ ಸ್ನೇಹಿತರಲ್ಲಿ ವಿಚಾರಿಸಿದ್ದು ಸುಚಿತ್ರಾಳ ಪತ್ತೆಯಾಗಿರುವುದಿಲ್ಲ, ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 257/2016 ಕಲಂ: ಹುಡುಗಿ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

————————————————————————————————————————————————-
ಕಳವು ಪ್ರಕರಣ
ಉಡುಪಿ:ಪಿರ್ಯಾದಿ ಕಿರಣ್‌ ಕುಮಾರ್ (31 ವರ್ಷ) ತಂದೆ ಶಿವಕುಮಾರ್ ವಾಸ: ಅರುಣೋದಯ ನಿವಾಸ ಕೊಂಡಡಿ ಹಿಡಿಯಡ್ಕ ಮೊಮ್ಮರಬೆಟ್ಟು ಗ್ರಾಮ ಉಡುಪಿ ಇವರು ಕಡಿಯಾಳಿಯಲ್ಲಿರುವ ಹಿಮಾಲಯ ಪ್ರಿಸ್ಟೇಜ್ ಕಟ್ಟಡದಲ್ಲಿರುವ ಸ್ಯಾಮ್‌ಸಂಗ್ ಪ್ಲಾಜಾ ಎಲೆಕ್ಟ್ರಾನಿಕ್ಸ್ ಶೋರೂಮ್‌ನಲ್ಲಿ ಮೆನೇಜರ್ ಆಗಿದ್ದು ದಿನಾಂಕ 02/10/2016 ರಂದು ರಾತ್ರಿ 08:00 ಗಂಟೆಗೆ ಶೋರೂಮ್‌ಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 03-10-2016 ರಂದು ಬೆಳಿಗ್ಗೆ 10:00 ಗಂಟೆಗೆ ಬೀಗ ತೆರೆಯಲು ಬಂದಾಗ ಶಟರ್‌ಗೆ ಹಾಕಿದ ಎರಡು ಬೀಗಗಳು ಹಾಕಿದಂತೆಯೇ ಇದ್ದು ಯಾರೋ ಕಳ್ಳರು ಶಟರ್‌ನ್ನು ಎಳೆದು ಒಳಗಿನ ಗ್ಲಾಸ್ ಡೋರನ್ನು ದೂಡಿ ಒಳಪ್ರವೇಶಿಸಿ ಕ್ಯಾಶ್ ಡ್ರಾವರಿನಲ್ಲಿದ್ದ ನಗದು ರೂಪಾಯಿ 81,635/ ಮತ್ತು ಮೊಬೈಲ್ ಕೌಂಟರಿನಲ್ಲಿಟ್ಟಿದ್ದ 11,95,878/ ರೂಪಾಯಿ ಮೌಲ್ಯದ 63 ಮೊಬೈಲ್ ಫೋನ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಮೊಬೈಲ್ ಮತ್ತು ನಗದು ಸೇರಿ 12,77,513/- ಅಂದಾಜು ಮೌಲ್ಯ ಆಗಿರುತ್ತದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 218/2016 ಕಲಂ 454,457,380 ಯಂತೆ ಪ್ರಕರಣ ದಾಖಲಾಗಿರುತ್ತದೆ.

————————————————————————————————————————————————–
ಇತರೆ ಪ್ರಕರಣಗಳು
ಉಡುಪಿ:ಪಿರ್ಯಾದಿ ಚಂದ್ರಶೇಖರ್ (43) ತಂದೆ; ದಿ. ಗಿರಿಯ ಪೂಜಾರಿ ವಾಸ; ಲಿಂಗೋಟಿ ಗುಡ್ಡೆ ಸುಬ್ರಹ್ಮಣ್ಯ ನಗರ ಪುತ್ತೂರು ಗ್ರಾಮ ಉಡುಪಿ ಇವರ ಮಗಳು ಚೈತ್ರಾಳು ಉಡುಪಿ ಅಂಬಲಪಾಡಿಯ ಶಾಮಿಲಿ ಹಾಲ್‌ನ ಹತ್ತಿರ ಮಾಂಡವಿ ಟವರ್ಸ್‌ನಲ್ಲಿರುವ ನೆಟ್‌ಜಿ ಎಂಬ ಹೆಸರಿನ ಕಂಪ್ಯೂಟರ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಆದರ್ಶ ಎಂಬುವನನ್ನು ಪ್ರೀತಿಸುತ್ತಿದ್ದು ಆತನು ಚಂದ್ರಶೇಖರ್ ರವರ ಮನೆಗೆ ಬಂದು ಹೋಗುತ್ತಿದ್ದು ಮನೆಯವರು ಮದುವೆ ಮಾಡುವ ಇರಾದೆ ಹೊಂದಿರುತ್ತಾರೆ ಆದರೆ ದಿನಾಂಕ 28/09/2016 ರಂದು 12:45 ಗಂಟೆಗೆ ಕೆಲಸದ ಸ್ಥಳವಾದ ನೆಟ್‌ಜಿ ಕಂಪ್ಯೂಟರ್‌ಸೆಂಟರ್‌ನಿಂದ ಚೈತ್ರಾಳನ್ನು ಪವನ್ ಹಾಗೂ ಸಾಗರ್ ಎಂಬವರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಂಜೆ ಸುಮಾರು 4:00 ಗಂಟೆಗೆ ಕೆಲಸದ ಸ್ಥಳದಲ್ಲಿ ವಾಪಾಸು ಬಿಟ್ಟುಹೋಗಿರುತ್ತಾರೆ, ಚೈತ್ರಳನ್ನು ಆರೋಪಿಗಳಾದ ಆದರ್ಶ್, ಪವನ್ ,ಸಾಗರ್ ಎಂಬವರು ಪುಸಲಾಯಿಸಿ ಕರೆದುಕೊಂಡು ಹೋದ ಸಮಯದಲ್ಲಿ ಅವಳ ಮೇಲೆ ಯಾವುದೋ ದುಷ್ಕೃತ್ಯ ಎಸಗಿರಬಹುದಾಗಿದ್ದು, ಈ ಕಾರಣದಿಂದ ಚೈತ್ರಳು ದಿನಾಂಕ 28/09/2016 ರಂದು ಉಪ್ಪೂರು ಕೆ.ಜಿ ರೋಡಿನ ಸೇತುವೆ ಮೇಲೆ ಬ್ಯಾಗ್ ಮತ್ತು ಚಪ್ಪಲ್ ನ್ನು ಇಟ್ಟು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 217/2016 ಕಲಂ;363,306,ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

————————————————————————————————————————————————-
ಬೈಂದೂರು:ಪಿರ್ಯಾದಿ ಉದಯ ಪೂಜಾರಿ (30) ತಂದೆ ಬಾಬು ಪೂಜಾರಿ ಶಿರೂರು ಗ್ರಾಮ ಕುಂದಾಪುರ ರವರು ದಿನಾಂಕ 03/10/2016 ರಂದು ಮದ್ಯಾಹ್ನ 4:30 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಮೈದಿನಪುರ ಪೆಟ್ರೋಲ್‌ಬಂಕ್‌ಗೆ ಬಂದಿದ್ದು ಅಲ್ಲಿ ಪರಿಚಯದ ಇಬ್ರಾಹಿಂ ಎಂಬುವವನು ಇದ್ದು ಆತನಲ್ಲಿ ಉದಯ ಪೂಜಾರಿ ರವರು ಹೇಗಿದ್ದೀಯಾ ಎಂದು ವಿಚಾರಿಸಿದ್ದು ಅದಕ್ಕೆ ಆತನು ಸಿಟ್ಟಿನಿಂದ ಅವಾಚ್ಯ ಶಬ್ಧಗಳಿಂದ ಬೈದು ಇಬ್ರಾಹಿಂನು ಕೈಯಿಂದ ಕಪಾಳಕ್ಕೆ ಹೊಡೆದು ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿ ಅಲ್ಲಿಂದ ಬೈಕಿನಲ್ಲಿ ಹೋದವನು ಸ್ವಲ್ಪ ಸಮಯದ ನಂತರ ವಾಪಸ್ಸು ಅಲ್ಲಿಗೆ ಬಂದಿದ್ದು ಆತನೊಂದಿಗೆ ರಿಕ್ಷಾದಲ್ಲಿ ನದೀಮ್‌, ಇಸ್ಮಾಯಿಲ್‌, ಅನ್ವರ್‌ರವರು ಬಂದಿದ್ದು ಇಬ್ರಾಹಿಂನು ಕೈಯಲ್ಲಿ ಬ್ಯಾಟನ್ನು ಹಿಡಿದುಕೊಂಡಿದ್ದು , ನದೀಮ್‌ನು ಕೈಯಲ್ಲಿ ಸ್ಟಂಪ್‌ಹಿಡಿದುಕೊಂಡಿದ್ದು ಅವರೆಲ್ಲರು ಸೇರಿ ಉದಯ ಪೂಜಾರಿ ರವರ ಬಳಿ ಬಂದು ಮುಂದೆ ಹೋಗದಂತೆ ಅಡ್ಡಗಟ್ಟಿ ಬ್ಯಾಟ್‌ಮತ್ತು ಸ್ಟಂಪ್‌ನಿಂದ ಬೆನ್ನಿಗೆ ಹೊಡೆದಿದ್ದು ಉಳಿದವರು ಕೈಯಿಂದ ಮುಖಕ್ಕೆ ಹೊಡೆದಿರುತ್ತಾರೆ. ಇಬ್ರಾಹಿಂನು ಬಲಕೈ ಹೆಬ್ಬೆರಳಿಗೆ ಕಚ್ಚಿದ್ದು ರಕ್ತಗಾಯವಾಗಿರುತ್ತದೆ. ಆಗ ಅಲ್ಲಿಗೆ ಬಂದ ಸತೀಶ. ಸಂತೋಷ ಗಣೇಶ್‌ರವರು ಉದಯ ಪೂಜಾರಿ ರವರನ್ನು ತಪ್ಪಿಸಿರುತ್ತಾರೆ. ಆಗ ಇಬ್ರಾಹಿಂನು ನಿನ್ನನ್ನು ಬಿಡುವುದಿಲ್ಲ ಮುಂದಕ್ಕೆ ನೋಡಿಕೊಳ್ಳುತ್ತೇವೆ” ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 258/2016 ಕಲಂ: 341, 323, 324, 504,506,34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment