Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ವಿಷ ಉಣಿಸಿದ ಹಂತಕ: ಐಸಿಸ್‌ ಮುಖ್ಯಸ್ಥ ಅಲ್‌ ಬಾಗ್ಧಾದಿ ಸ್ಥಿತಿ ಗಂಭೀರ

bagdhadi-700ಬಾಗ್ಧಾದ್‌ : ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಮೂಹದ ರಿಂಗ್‌ ಲೀಡರ್‌ ಎನಿಸಿಕೊಂಡಿರುವ ಅಬು ಬಕರ್‌ ಅಲ್‌ ಬಾಗ್ಧಾದಿ ವಿಷಪ್ರಾಶನದಿಂದ ಗಂಭೀರ ಅಸ್ವಸ್ಥನಾಗಿರುವುದಾಗಿ ವರದಿಯಾಗಿದೆ.

ಹಂತಕನೊಬ್ಬ ವಿಷ ಬೆರೆಸಿದ ಆಹಾರವನ್ನು ಬಾಗ್ಧಾದಿ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಬೇ ಆಜ್‌ ಜಿಲ್ಲೆಯ ನಿನೇವೇಹ್‌ ಎಂಬಲ್ಲಿ ಬಾಗ್ಧಾದಿ ಮತ್ತು ಐಸಿಸ್‌ ಉಗ್ರ ಸಂಘಟನೆಯ ಇತರ ಮೂವರು ಕಮಾಂಡರ್‌ಗಳಿಗಾಗಿ ಸಿದ್ಧಪಡಿಸಲಾಗಿದ್ದ  ಆಹಾರಕ್ಕೆ ವಿಷ ಬೆರೆಸಲಾಗಿತ್ತು. ಅದನ್ನು ಸೇವಿಸಿ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು ಎಂದು “ದ  ಡೇಲಿ ಮೇಲ್‌’ ನಿನ್ನೆ ಸೋಮವಾರ ವರದಿ ಮಾಡಿದೆ.

ಇರಾಕಿ ಸುದ್ದಿ ಸಂಸ್ಥೆಯೊಂದನ್ನು ಉಲ್ಲೇಖೀಸಿ ವರದಿ ಮಾಡಿರುವ ಡೇಲಿ ಮೇಲ್‌, ಬಾಗ್ಧಾದಿ ಸಹಿತವಾಗಿ ವಿಷ ಪ್ರಾಶನದಿಂದ ತೀವ್ರವಾಗಿ ಅಸ್ವಸ್ಥರಾಗಿರುವ ನಾಲ್ವರು ಉನ್ನತ ಉಗ್ರರನ್ನು ಅಜ್ಞಾತ ಸ್ಥಳಕ್ಕೆ, ಅತ್ಯಂತ ಬಿಗಿ ಭದ್ರತೆಯಲ್ಲಿ ಒಯ್ಯಲಾಗಿದೆ ಎಂದು ತಿಳಿಸಿದೆ.

ಇದೇ ವೇಳೆ ಬಾಗ್ಧಾದಿ ಮತ್ತು ಇತರ ಮೂವರು ಕಮಾಂಡರ್‌ಗಳಿಗೆ ವಿಷ ಪ್ರಾಶನ ಮಾಡಿಸಿರುವ ಹಂತಕನನ್ನು ಹುಡುಕಿ ಬಂಧಿಸುವ ವ್ಯಾಪಕ ಕಾರ್ಯಾಚರಣೆಯನ್ನು ಐಸಿಸ್‌ ಕೈಗೊಂಡಿರುವುದಾಗಿ ವರದಿ ತಿಳಿಸಿದೆ. ಬಾಗ್ಧಾದಿಯೊಂದಿಗೆ ವಿಷ ಪ್ರಾಶನದಿಂದ ಗಂಭೀರವಾಗಿ ಅಸ್ವಸ್ಥರಾಗಿರುವ ಇತರ ಮೂವರು ಕಮಾಂಡರ್‌ಗಳ ಗುರುತು ಇನ್ನೂ ಬಹಿರಂಗವಾಗಿಲ್ಲ.

No Comments

Leave A Comment