Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಶಿವಪುರ : ಬಸ್ಸು ರಿಕ್ಷಾ ಡಿಕ್ಕಿ ,ಇಬ್ಬರು ಸಾವು

021016hbrm6ಹೆಬ್ರಿ :ಶಿವಪುರ ಬಿಲ್ಲಬೈಲು ಸೇತುವೆ ಬಳಿ ಬಸ್ಸು ಹಾಗೂ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗುರುಪ್ರಸಾದ್‌ (26)  ಹಾಗೂ ಆತನ ಸಹೋದರ ವಸಂತ(30) ಮೃತಪಟ್ಟ ಘಟನೆ ರವಿವಾರ ನಡೆದಿದೆ.

ಶಿವಪುರದಿಂದ ಹೆಬ್ರಿ ಕಡೆ  ತನ್ನ ಅಣ್ಣ ವಸಂತ ಅವರನ್ನು ಕರೆದುಕೊಂಡು ರಿಕ್ಷಾದಲ್ಲಿ ಬರುತ್ತಿರುವಾಗ ಹೆಬ್ರಿಯಿಂದ ಉಡುಪಿ ಕಡೆ ಹೋಗುತ್ತಿದ್ದ ಮಿನಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ನುಜುÌಗುಜ್ಜಾಗಿದ್ದು ಗುರುಪ್ರಸಾದ್‌ ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಗಂಭೀರ ಗಾಯಗೊಂಡ ಸಹೋದರ ವಸಂತ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲಿಸಿದ್ದು ಚಿಕಿತ್ಸೆ ಫಲಖಾರಿಯಾಗದೆ ಮೃತಪಟ್ಟಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment