Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ತಾಯಿಯ ಶವ ಹೊತ್ತ ಹೆಣ್ಮಕ್ಕಳು; ಸುಡಲು ಕಟ್ಟಿಗೆಯೂ ಇಲ್ಲದೆ ಒದ್ದಾಟ!

odisha-leadಭುವನೇಶ್ವರ್: ಪತ್ನಿಯ ಶವ ಸಾಗಿಸಲು ಆಂಬುಲೆನ್ಸ್ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಆಸ್ಪತ್ರೆ ಕಾನ್ಪುರ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ್ದರಿಂದ ಸುಮಾರು 10 ಕಿಲೋ ಮೀಟರ್ ವರೆಗೆ ಪತ್ನಿಯ ಶವವನ್ನು ಪತಿ ಹೊತ್ತುಕೊಂಡು ಹೋದ ಘಟನೆ ದೇಶಾದ್ಯಂತ ಚರ್ಚೆಗೀಡಾದ ಬೆನ್ನಲ್ಲೇ ಇದೀಗ ತಾಯಿ ಶವ ಸುಡಲು ಕಟ್ಟಿಗೆ ಇಲ್ಲದೆ ಒದ್ದಾಡಿ ಕೊನೆಗೆ ಮಂಚದ ಮೇಲೆಯೇ ಹೆಣ್ಣುಮಕ್ಕಳು ತಾಯಿಯ ಶವವನ್ನು ಹೊತ್ತುಕೊಂಡು ಹೋದ ಘಟನೆ ಒಡಿಶಾದ ಕಾಳಹಂಡಿಯಲ್ಲಿ ನಡೆದಿದೆ.

ಘಟನೆ ವಿವರ:
ಒಡಿಶಾದ ಡೋಕ್ರಿಪಾಡಾ ಗ್ರಾಮದ ಗೋಲಾಮುಂಡಾ ಬ್ಲಾಕ್ ನ ನಿವಾಸಿಯಾದ 80 ವರ್ಷದ ಕನಕ್ ಸತ್ಪಥಿ(80) ಕಳೆದ ಶುಕ್ರವಾರ ಸಾವನ್ನಪ್ಪಿದ್ದರು. ಈಕೆಗೆ ನಾಲ್ವರು ಪುತ್ರಿಯರು. ತಾಯಿಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ನೆರವು ನೀಡುವಂತೆ ಮಕ್ಕಳು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಆದರೆ ಗ್ರಾಮದ ಯಾರೊಬ್ಬರು ನೆರವು ನೀಡಲು ಮುಂದೆ ಬರಲಿಲ್ಲ. ಹೆಣ್ಮಕ್ಕಳಾದ ಪಂಕಜಿನಿ ದಾಸ್ (50ವರ್ಷ), ರಾಧಾ ಠಾಕೂರ್ (45ವ), ಪ್ರತಿಮಾ ದಾಸ್(39) ಮತ್ತು ಸಂಯುಕ್ತಾ ಮುಂಡಾ(40ವ) ಸೇರಿ ತಾಯಿ ಮಲಗಿದ್ದ ಕಟ್ಟಿಗೆ ಮಂಚವನ್ನೇ ತಿರುಗಿಸಿ ಅದರ ಮೇಲೆ ಶವ ಇಟ್ಟು ತಮ್ಮ ಭುಜದ ಮೇಲೆಯ ಸ್ಮಶಾನಕ್ಕೆ ಹೊತ್ತೊಯ್ದಿದ್ದರು.
ಶನಿವಾರ ಬೆಳಗ್ಗೆ ತಮ್ಮ ತಾಯಿಯ ಶವವನ್ನು ತಾವೇ ಹೊತ್ತೊಯ್ದು, ಹಿರಿಯ ಮಗಳಾದ ಪಂಕಜಿನಿ ಚಿತೆಗೆ ಬೆಂಕಿ ಹೊತ್ತಿಸಿ ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ವರದಿ ವಿವರಿಸಿದೆ.

ಹೆಣ್ಣು ಮಕ್ಕಳ ಬಳಿ ತಾಯಿ ಅಂತ್ಯ ಸಂಸ್ಕಾರ ನಡೆಸಲು ಕಟ್ಟಿಗೆ ತರಲು ಹಣ ಕೂಡ ಇರಲಿಲ್ಲವಾಗಿತ್ತು. ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆಸಲು ಮನೆಯ ಮೇಲ್ಛಾವಣಿಯ ಕಟ್ಟಿಗೆಯನ್ನೇ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಿದ್ದರು!

ಬ್ರಾಹ್ಮಣ ಸಮುದಾಯದ ಕನಕ್ ಪತಿ ಕೆಲವು ವರ್ಷಗಳ ಹಿಂದೆ ತೀರಿಹೋಗಿದ್ದರು. ಈಕೆಯ ಮೂವರು ಪುತ್ರಿಯರ ಗಂಡಂದಿರು ಕೂಡಾ ಸಾವನ್ನಪ್ಪಿದ್ದರು. ನಾಲ್ವರು ಪುತ್ರಿಯರು ತಮ್ಮ ತಾಯಿಯ ಜೊತೆಯೇ ವಾಸಿಸುತ್ತಿದ್ದರು. ಆಕೆ ಭಿಕ್ಷೆ ಬೇಡಿಯೇ ಬದುಕು ಸಾಗಿಸುತ್ತಿದ್ದರು ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

No Comments

Leave A Comment