Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಮತ್ತೊಂದು ಸಾಧನೆಗೆ ಇಸ್ರೋ ಸಿದ್ಧ; ಏಕಕಾಲಕ್ಕೆ 2 ಕಕ್ಷೆಗೆ 8 ಉಪಗ್ರಹಗಳ ಉಡಾವಣೆ

india-toಶ್ರೀಹರಿಕೋಟಾ: ವಿವಿಧ ಉಪಗ್ರಹಗಳನ್ನು ಉಡಾವಣೆ ಮೂಲಕ ವಿಶ್ವದ ಪ್ರಶಂಸೆಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ  ಇಸ್ರೋ, ಇದೀಗ ಮತ್ತೊಂದು ಮೈಲುಗಲ್ಲಿಗೆ ಸಿದ್ಧತೆ  ನಡೆಸಿದ್ದು, ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡಲು ಸಿದ್ಥತೆ ನಡೆಸಿದೆ.

ಇದೇ ಸೋಮವಾರ ಏಕಕಾಲದಲ್ಲಿ 8 ಉಪಗ್ರಹ ಉಡಾವಣಾ ಕಾರ್ಯ ನಡೆಯಲಿದ್ದು, ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಈ  ಉಡಾವಣೆಯು ಇಸ್ರೋದ ಸುದೀರ್ಘಾವಧಿಯ ಕಾರ್ಯವಾಗಿದ್ದು, ಸುಮಾರು 2 ಗಂಟೆ, 15 ನಿಮಿಷಗಳ ಕಾಲ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೋ ಹೇಳಿದೆ.

8 ಉಪಗ್ರಹಗಳ ಪೈಕಿ ಮೂರು  ಉಪಗ್ರಹಗಳು ಭಾರತದ್ದಾಗಿದ್ದು, ಐದು ವಿದೇಶಿ ಉಪಗ್ರಹಗಳು ಸೇರಿವೆ. ಒಟ್ಟು 8 ಉಪಗ್ರಹಗಳನ್ನು ಏಕಕಾಲದಲ್ಲಿ 2 ಕಕ್ಷೆಗೆ ಸೇರಿಸುವುದು ಇಸ್ರೋ ಗುರಿಯಾಗಿದೆ.ಇದಕ್ಕಾಗಿ ಇಸ್ರೋದ ಯಶಸ್ವೀ ಉಡಾವಣಾ ವಾಹಕ ಪಿಎಸ್ಎಲ್ವಿ ರಾಕೆಟ್ ಮೂಲಕ ಈ 8 ಉಪಗ್ರಹಳನ್ನು ಉಡಾಯಿಸಲಾಗುತ್ತದೆ.

ಪಿಎಸ್ಎಲ್ವಿ ರಾಕೆಟ್ 320 ಟನ್ ತೂಕ ಹೊಂದಿದ್ದು,  ಶ್ರೀಹರಿಕೋಟಾದ ಮೊದಲನೇ ಉಡಾವಣಾ ನೆಲೆಯಿಂದ ಸೋಮವಾರ ಬೆಳಗ್ಗೆ 9.12ಕ್ಕೆ ಉಡಾವಣೆ ಮಾಡಲಾಗುತ್ತದೆ.ಇಸ್ರೋ ಮುಂದಿದೆ ಕ್ಲಿಷ್ಟಕರ ಸವಾಲುಒಂದು ಕಕ್ಷೆಗೆ ಉಪಗ್ರಹವನ್ನು ಸೇರಿಸಿದ ಬಳಿಕ ಪಿಎಸ್‌ಎಲ್‌ವಿ ರಾಕೆಟ್‌ನ 4ನೇ ಸ್ಟೇಜ್‌ ಅಂದರೆ ಎಂಜಿನ್‌ ಅನ್ನು ಆಫ್ ಮಾಡಲಾಗುತ್ತದೆ. ಬಳಿಕ ಮತ್ತೆ ಎಂಜಿನ್‌ ಸ್ಟಾರ್ಟ್‌ ಮಾಡಿ ಮತ್ತೊಂದು  ಕಕ್ಷೆಗೆ 7 ಉಪಗ್ರಹಗಳನ್ನು ಸೇರಿಸಲಾಗುತ್ತದೆ.

ಹೀಗೆ ಭಾರೀ ಉಷ್ಣತೆ ಹೊಂದಿರುವ ರಾಕೆಟ್‌ ಅನ್ನು ಆಫ್ ಮಾಡಿ ಪುನಃ ಚಾಲೂ ಮಾಡುವುದು ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆ. ಹೀಗಾಗಿ ಇಸ್ರೋ  ಮುಂದೆ ಬಹುದೊಡ್ಡ ಸವಾಲಿದೆ ಎಂದು ಹೇಳಲಾಗುತ್ತಿದೆ.

ಭಾರತದ ಮೂರು ಉಪಗ್ರಹಗಳುನಾಳೆ ಉಡಾವಣೆಯಾಗಲಿರುವ 8 ಉಪಗ್ರಹಗಳ ಪೈಕಿ ಮೂರು ಉಪಗ್ರಹಗಳು ಸ್ವದೇಶಿ ಉಪಗ್ರಹಗಳಾಗಿದ್ದು, ಈ ಪೈಕಿ ಭಾರತದ ಪ್ರಮುಖ ಹವಾಮಾನ ಉಪಗ್ರಹ ಸ್ಕಾಟ್ಸ್ಯಾಟ್-1 371  ಕೆಜಿ. ತೂಕ ಹೊಂದಿದೆ. ಈ ಸ್ಕಾಟ್ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ. ಇದಲ್ಲದೆ ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ  ಸಹಭಾಗಿತ್ವದಲ್ಲಿ ನಿರ್ವಿುಸಿದ ಪಿಸ್ಯಾಟ್ ಉಪಗ್ರಹ ಕೂಡಾ ಕಕ್ಷೆ ಸೇರಲಿದೆ.

ಸ್ಕಾಟ್ಸ್ಯಾಟ್-1 ಉಪಗ್ರಹವು ಓಶಿಯನ್ ಸ್ಯಾಟ್-2 ಯೋಜನೆಯ ಮುಂದುವರಿದ ಭಾಗವಾಗಿದ್ದು, ಹವಾಮಾನ  ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಉಳಿದ 7 ಉಪಗ್ರಹಗಳನ್ನು 689 ಕಿಮೀ. ಧ್ರುವ  ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಸ್ಕಾಟ್ಸ್ಯಾಟ್-1ನ್ನು 730 ಕಿಮೀ. ಸೂರ್ಯ ಸಮಕಾಲಿಕ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ.

No Comments

Leave A Comment