Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಪ್ರಮೋದರಿಂದ ಕೇಂದ್ರ ಕೃಷಿ ಸಚಿವರ ಭೇಟಿ

230916uk4aಉಡುಪಿ: ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಕೇಂದ್ರ ಕೃಷಿ, ಕೃಷಿಕರ ಕಲ್ಯಾಣ ಸಚಿವ ರಾಧಾ ಮೋಹನ್‌ ಸಿಂಗ್‌ ಅವರನ್ನು ದಿಲ್ಲಿಯ ಕೃಷಿ ಭವನದಲ್ಲಿ ಗುರುವಾರ ಭೇಟಿ ಮಾಡಿ ಹೆಚ್ಚಿನ ಅನುದಾನವನ್ನು ಕೋರಿದರು.

ರಾಜ್ಯದ ಮೀನುಗಾರಿಕಾ ಬಂದರು ಯೋಜನೆಗಳಿಗೆ ಕೇಂದ್ರದ ಬಾಕಿ ಅನುದಾನವನ್ನು ಮಂಜೂರು ಮಾಡಲು, ಸಾಗರ ಮೀನುಗಾರಿಕೆಯ ಸಂರಕ್ಷಣೆಗಾಗಿ ಏಕರೂಪಿ ನೀತಿ ರೂಪಿಸಲು ಕರಾವಳಿ ರಾಜ್ಯಗಳ ಮೀನುಗಾರಿಕಾ ಸಚಿವರ ಸಮ್ಮೇಳನವನ್ನು ನವೆಂಬರ್‌/ಡಿಸೆಂಬರ್‌ನಲ್ಲಿ ಆಯೋಜಿಸಲು, ಮೂಲ ಯೋಜನೆಗಳಿಗೆ ಹಿಂದಿನಂತೆ ಕೇಂದ್ರದ 75:25 ಅನುಪಾತವನ್ನು ಮುಂದುವರಿಸಿಕೊಂಡು ಹೋಗಲು ಪ್ರಮೋದ್‌ ಅವರು ಮನವಿ ಮಾಡಿದರು.

ಕೇಂದ್ರ ಸಚಿವರು ವಿವರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ದೇವೇಂದ್ರ ಚೌಧರಿ, ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಮೀನುಗಾರಿಕಾ ನಿರ್ದೇಶಕ ಎಚ್‌.ಎಸ್‌.ವೀರಪ್ಪ ಗೌಡ, ಜಂಟಿ ನಿರ್ದೇಶಕ ಡಾ| ಸಿ.ಕೆ. ಮೂರ್ತಿ ಉಪಸ್ಥಿತರಿದ್ದರು.

No Comments

Leave A Comment