Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಮರಳುಗಾರಿಕೆ‌ ತಡೆ ವಿಚಾರಣೆ ಅ. 1ಕ್ಕೆ ಮುಂದೂಡಿಕೆ

sand-1-1ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ವಿಧಿಸಿರುವ ತಡೆಯಾಜ್ಞೆ ತೆರವು ಅರ್ಜಿ ವಿಚಾರಣೆಯನ್ನು ಚೆನ್ನೈಯ ಹಸಿರು ಪೀಠವು ಅ. 1ಕ್ಕೆ ಮುಂದೂಡಿದೆ. ಕಾವೇರಿ ಗಲಾಟೆಯ ಹಿನ್ನೆಯಲ್ಲಿ ವಿಚಾರಣೆ ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕಟ್ಟಡ ಮತ್ತು ಸಾಮಗ್ರಿ ಸಾಗಾಟ ಟೆಂಪೋ ಮಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಮತ್ತೆ ಕನಿಷ್ಠ 2 ತಿಂಗಳಾದರೂ ಮರಳುಗಾರಿಕೆ ಸ್ಥಗಿತದ ಸ್ಥಿತಿ ಹಾಗೆಯೇ ಮುಂದುವರಿಯುವ ಆತಂಕ ಉಂಟಾಗಿದೆ ಎಂದರು.

ಸೆ. 26: ಸತ್ಯಾಗ್ರಹ: ತಡೆಯಾಜ್ಞೆ ತೆರವಿಗೆ ಸರಕಾರ ಪ್ರಯತ್ನಿಸಬೇಕೆಂದು ಆಗ್ರಹಿಸಿ ಸೆ. 26ರಂದು ಉಡುಪಿ ಡಿಸಿ ಕಚೇರಿ ಎದುರು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಗೊಳ್ಳ ಲಿದೆ ಎಂದು ಪ್ರಕಟನೆ ತಿಳಿಸಿದೆ.

No Comments

Leave A Comment