Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ದಕ್ಷಿಣ ಕನ್ನಡ: ನೇತ್ರಾವತಿ ನೀರೂ ಇಲ್ಲ, ಮರಳೂ ಇಲ್ಲ !

sandಬೆಳ್ತಂಗಡಿ: ನೇತ್ರಾವತಿ ನೀರು ದಕ್ಷಿಣ ಕನ್ನಡ ಜಿಲ್ಲೆಗೆ ಅಲಭ್ಯಗೊಳಿಸುವ ಎತ್ತಿನಹೊಳೆ ಯೋಜನೆ ಭರದಲ್ಲಿ ಅನುಷ್ಠಾನವಾಗುತ್ತಿರುವಂತೆಯೇ ನೇತ್ರಾ ವತಿ ಮರಳಿಗೂ ಹಾಹಾಕಾರ ಪಡುವಂತೆ ಜಿಲ್ಲಾಡಳಿತ ಭಯ ಹುಟ್ಟಿಸುತ್ತಿದೆ.

ಜನಸಾಮಾನ್ಯರು ಮನೆ ಕಟ್ಟಿಸಲು, ಉದ್ಯಮಿಗಳು ಕಟ್ಟಡ ನಿರ್ಮಿಸಲು, ಸರಕಾರಿ ಕಾಮಗಾರಿಗಳು ಬಾಕಿ ಆಗುತ್ತಿರಲು ಮರಳಿನ ಕೊರತೆ ಪ್ರಮುಖ ಕಾರಣವಾಗಿದೆ. ಇದರ ಹಿಂದೆ ಬಹುದೊಡ್ಡ ಲಾಬಿ ಇದ್ದು, ಇಡೀ ಜಿಲ್ಲಾಡಳಿತ ಮರಳು ಲಾಬಿಯ ಹಿಂದೆ ಬಿದ್ದಿದೆಯೇ ಎಂಬ ಸಂಶಯ ಸಾರ್ವ ಜನಿಕರಲ್ಲಿ ಮೂಡುತ್ತಿದೆ.

ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ಉಪ್ಪಿಗೆ ತೆರಿಗೆ ವಿಧಿಸಿದಾಗ ಕರ ನಿರಾಕರಣೆ ಚಳವಳಿ ಪ್ರಾರಂಭವಾಯಿತು. ಬ್ರಿಟಿಷ್‌ ಆಡಳಿತಕ್ಕಿಂತಲೂ ಕೆಟ್ಟದಾಗಿ ಜಿಲ್ಲಾಡಳಿತ ನಡೆದುಕೊಳ್ಳುತ್ತಿದೆ. ನದಿಗಳಲ್ಲಿ  ಸಹಜವಾಗಿರುವ ಮರಳು ತೆಗೆಯಲು ಲೈಸನ್ಸ್‌ ನೀಡಲು ಸೂಕ್ತ ಏರ್ಪಾಟು ಮಾಡುವ ಬದಲು ಕೋರ್ಟ್‌ ಕ್ಯಾತೆಯ ನೆಪ ಹಿಡಿದು ಲಾಬಿಗಳಿಗೆ ಹಣ ಮಾಡಲು ಅವಕಾಶ ನೀಡುತ್ತಿದೆ. ಹಾಗಾಗಿ ಈಗ ಮರಳು ಎತ್ತಲಾರದೆ ಒಂದು ಲೋಡು ಮರಳಿಗೆ ದ.ಕ.ದಲ್ಲಿ 12ರಿಂದ 16 ಸಾವಿರ ರೂ. ವರೆಗೆ ಕಳ್ಳಮಾರುಕಟ್ಟೆಯಲ್ಲಿ ದರ ವಿಧಿಸಲಾಗುತ್ತಿದೆ. ಬೆಂಗಳೂರಿಗೆ ತಲುಪುವಾಗ ಈ ಮರಳಿನ ಬೆಲೆ 60 ಸಾವಿರದಿಂದ 80 ಸಾವಿರ ರೂ. ವರೆಗೆ ಇರುತ್ತದೆ. ಕೇರಳ ರಾಜ್ಯಕ್ಕೆ ಅವ್ಯಾಹತವಾಗಿ ಮರಳಿನ ಸಾಗಾಟ ನಡೆಯುತ್ತಿದೆ. ಜಿಲ್ಲೆಯೊಳಗೆ ಮರಳು ಸಾಗಿಸಿದರೆ ದಂಡ ವಿಧಿಸಲಾಗುತ್ತದೆ!

ಮರಳು ತೆಗೆದರೆ ಏನು ತೊಂದರೆ?
ಹರಿಯುವ ನೀರಿನಲ್ಲಿ ಸಹಜವಾಗಿ ಪ್ರಾಕೃತಿಕ ವಾಗಿ ರಚನೆಯಾಗುವ ಮರಳು ಇದ್ದಲ್ಲೇ ಇದ್ದರೆ, ನದಿಯಲ್ಲೇ ಮುಂದುವರಿದರೆ ಹೂಳು ತುಂಬಿ ದಂತಾಗುತ್ತದೆ. ನದಿಯ ಎತ್ತರ ಹೆಚ್ಚಾಗಿ ನೀರು ನದಿಯಿಂದ ಉಕ್ಕುತ್ತದೆ. ಆದರೆ ಮರಳು ತೆಗೆದರೆ ನೀರಿನ ಪ್ರಮಾಣ ನದಿಯಲ್ಲಿ ಹೆಚ್ಚಾಗುತ್ತದೆ. ಅಂತ ರ್ಜಲ ಪ್ರಮಾಣವೂ ಹೆಚ್ಚಾಗುತ್ತದೆ. ಮರಳುಗಾರಿಕೆಗೆ ನಿರ್ಬಂಧ ವಿಧಿಸಿದರೆ ಅದು ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗಂತ ಬೇಕಾಬಿಟ್ಟಿ ಮರಳು ತೆಗೆದರೆ ಅಸಮತೋಲನವಾಗುತ್ತದೆ.

ಅನುಮತಿ ಕೊಡಲಿ
ಮನೆ ಅಥವಾ ಕಟ್ಟಡ ಕಟ್ಟಿಸುವಾಗ ಸ್ಥಳೀಯಾ ಡಳಿತದಿಂದ ಅನುಮತಿ ಪಡೆಯಬೇಕು. ಅದರಲ್ಲಿ ಇಷ್ಟು ವಿಸ್ತೀರ್ಣದ ಮನೆ/ಕಟ್ಟಡ ಎಂದು ನಮೂದಿಸಿ ತೆರಿಗೆ ಪಾವತಿಸುವ ವ್ಯವಸ್ಥೆ ಇದೆ. ಈ ಸಂದರ್ಭದಲ್ಲೇ ಮರಳು ಸಾಗಾಟಕ್ಕೆ ಅನುಮತಿ ನೀಡುವ ವ್ಯವಸ್ಥೆ ಮಾಡಬಹುದು. 1,000 ಚದರ ಅಡಿಯ ಕಟ್ಟಡಕ್ಕೆ ಇಷ್ಟು ಯುನಿಟ್‌ ಮರಳು ಬೇಕಾಗುತ್ತದೆ ಎಂಬ ಎಂಜಿನಿಯರ್‌ ನಿಗದಿಪಡಿಸುವ ಮಾನದಂಡದಂತೆ ಅನುಮತಿ ನೀಡಿ ಅದಕ್ಕೆ ತೆರಿಗೆ ವಸೂಲಿ ಮಾಡಲಿ. ಆಗ ಹಣ ನೇರ ಸರಕಾರಕ್ಕಾದರೂ ಹೋಗುತ್ತದೆ. ಅಕ್ರಮ ಮಾರಾಟವೂ ನಿಲ್ಲುತ್ತದೆ. ಈಗ ಬ್ಲಾಕ್‌ ಮಾರ್ಕೆಟ್‌ ಮೂಲಕ ಮರಳು ಮಾರಿದರೆ ಕುಳಗಳ ಕಿಸೆ ತುಂಬುವುದಷ್ಟೇ ಸಾಧ್ಯ. ಇದರಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪಾಲು ಇಲ್ಲದಿದ್ದರೆ ಜನಸಾಮಾನ್ಯರಿಗೆ ಅನುಕೂಲವಾಗುವ ನಿಯಮ ಎಂದೋ ಬರುತ್ತಿತ್ತು. ಆದರೆ ಯಾರೇ ಜಿಲ್ಲಾಧಿಕಾರಿ ಬಂದರೂ ಮರಳು ಲಾಬಿಗೆ ಮಣಿದರೆ ಎಂದು ಸಾರ್ವಜನಿಕರಿಗೆ ಸಂಶಯ ಬರುವಂತೆ ಮರಳಿನ ಕುರಿತು ನಡೆ ಇರುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ.

ದುಡ್ಡಿನ ಮರುಳು
ರಾಜಕಾರಣಿಗಳ ಬೆಂಬಲಿಗರು, ಅಧಿಕಾರಿಗಳ ಆಪ್ತರು ಮರಳುಗಾರಿಕೆಗೆ ಅನುಮತಿ ಪಡೆದು ಕೋಟ್ಯಂತರ ರೂ. ಕಮಾಯಿ ಮಾಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಈಗಿನ ಲಭ್ಯತೆ ಪ್ರಕಾರ ಕೇವಲ ಒಂದೂ ವರೆ ವರ್ಷಕ್ಕೆ ಬೇಕಾದಷ್ಟು ಮರಳು ಇರುವುದು. ದ.ಕ. ಜಿಲ್ಲೆಯ ಹವಾಮಾನ ಪ್ರಕಾರ 1 ಚದರ ಆಡಿ ಮರಳು ಉತ್ಪತ್ತಿ ಆಗಲು 78 ವರ್ಷ ಬೇಕು!
ಹಾಗಾದರೆ ಮರಳುಗಾರಿಕೆಗೆ ಇರುವ ಕಾನೂನಾ ತ್ಮಕ ಅಡ್ಡಿ ಏನು ?, ಮರಳಿನ ಹಿಂದಿರುವ ಕರಾಳ ಮುಖಗಳೇನು.

ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 1,500 ಕೋ.ರೂ.ಗಳ ಮರಳು ಅಕ್ರಮ ದರ ದಲ್ಲಿ ವಹಿವಾಟಾಗಿದೆ. ಈ ಬಗ್ಗೆ ನ್ಯಾಯಾಲಯದ ಕದ ತಟ್ಟಲಾಗಿದೆ. 2 ಸಾವಿರದಷ್ಟು ಹೊರ ರಾಜ್ಯದ ಕಾರ್ಮಿಕರು ಮರಳುಗಾರಿಕೆ ನಡೆಸುತ್ತಿದ್ದಾರೆ.

No Comments

Leave A Comment