Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಶ್ರೀ ಗಣೇಶೋತ್ಸವ: ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

15DK_KAD_2ಉಡುಪಿ: ವಿದ್ಯಾವಂತ, ಪ್ರಜ್ಞಾವಂತ, ಸುಸಂಸ್ಕೃತರ ಜಿಲ್ಲೆಯಾಗಿ ಉಡುಪಿ ಜಿಲ್ಲೆ ಗುರುತಿಸಿಕೊಂಡಿದೆ. ಇಲ್ಲಿನ ಜನ ಸೌಮ್ಯ ಸ್ವಭಾವದವರು. ಮಾತ್ರವಲ್ಲ ಧಾರ್ಮಿಕ ನಂಬಿಕೆಯುಳ್ಳ ವರು. ಆದುದರಿಂದಲೇ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದು ಇದೀಗ 50ನೇ ವರ್ಷ ಆಚರಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕಡಿಯಾಳಿಯಲ್ಲಿ ಸೋಮವಾರ ನಡೆದ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರೋಗ್ಯಪೂರ್ಣ ಸಮಾಜ
ಇಡೀ ದೇಶಕ್ಕೆ ಮಾರ್ಗದರ್ಶನ ನೀಡಬಲ್ಲ ಶ್ರೀ ಗಣೇಶೋತ್ಸವ ಸಮಿತಿ ಯುವ ಜನಾಂಗವನ್ನು ಉತ್ತಮ ಸಂಸ್ಕೃತಿ ಕಡೆಗೆ ಒಯ್ಯುವ ಕೆಲಸ ಮಾಡುತ್ತಿದೆ. ಇದರಿಂದ ಧಾರ್ಮಿಕ ಕೆಲಸ ಮಾತ್ರವಲ್ಲದೇ ಸಮಾಜವೂ ಕೂಡ ಆರೋಗ್ಯ ಪೂರ್ಣವಾಗಲಿದೆ ಎಂದರು.15DK_KAD_1

ಮಾಜಿ ಶಾಸಕ, ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಅಧ್ಯಕ್ಷ ಕೆ. ರಘುಪತಿ ಭಟ್‌, ಉಪಾಧ್ಯಕ್ಷರಾದ ಸಗ್ರಿ ಗೋಪಾಲಕೃಷ್ಣ ಸಾಮಗ, ಬಾಲಾಜಿ ರಾಘವೇಂದ್ರ ಆಚಾರ್ಯ, ಸಂಚಾಲಕ ಪಿ. ವಸಂತ ಭಟ್‌, ಮಟ್ಟಾರು ರತ್ನಾಕರ ಹೆಗ್ಡೆ, ಯಶ್‌ಪಾಲ್‌ ಎ. ಸುವರ್ಣ, ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಕೆ. ಉದಯ ಕುಮಾರ್‌ ಶೆಟ್ಟಿ, ಜಿ.ಪಂ. ಸದಸ್ಯೆ ಶೀಲಾ ಶೆಟ್ಟಿ ಉಪಸ್ಥಿತರಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿದರು. ಲಕ್ಷ್ಮೀನಾರಾಯಣ ಕಾರ್ಯಕ್ರಮ ನಿರೂಪಿಸಿದರು. ದಿನೇಶ ಅಮೀನ್‌ ವಂದಿಸಿದರು.

No Comments

Leave A Comment