ಹರಿಯಾಣ, ಗೋವಾ, ಲಡಾಖ್‌ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!

ಬಸ್ ಟೈರ್ ಸ್ಫೋಟಗೊಂಡು ಟ್ರಕ್‌ಗೆ ಡಿಕ್ಕಿ – 37 ಮಂದಿ ಸಾವು

ಬ್ರೆಜಿಲ್‌:ಡಿ.22, ಆಗ್ನೇಯ ಬ್ರೆಜಿಲ್‌ನ ಮಿನಾಸ್ ಗೆರೈಸ್‌ನ ಹೆದ್ದಾರಿಯಲ್ಲಿ ಪ್ರಯಾಣಿಕರಿದ್ದ ಬಸ್ ಮತ್ತು ಟ್ರಕ್ ನಡುವೆ ದುರಂತ ಅಪಘಾತ ಸಂಭವಿಸಿದ್ದು, ಶನಿವಾರ ಮುಂಜಾನೆ 37 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಟಿಯೋಫಿಲೋ ಒಟೋನಿ ನಗರದ ಸಮೀಪ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, 13 ಮಂದಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸಾವೊ ಪಾಲೊದಿಂದ ಹೊರಟಿದ್ದ ಬಸ್ ಡಿಕ್ಕಿಯ ಸಮಯದಲ್ಲಿ 45 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.

ಪ್ರತ್ಯಕ್ಷದರ್ಶಿಗಳ ಪ್ರಾಥಮಿಕ ವರದಿಗಳ ಪ್ರಕಾರ, ಬಸ್ ಟೈರ್ ಸ್ಫೋಟಿಸಿ, ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದಿದ್ದಾರೆ. ಅಪಘಾತದ ಬಗ್ಗೆ ಗವರ್ನರ್ ರೊಮಿಯು ಝೆಮಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮತ್ತು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಮಿನಾಸ್ ಗೆರೈಸ್ ಸರ್ಕಾರವನ್ನು ಸಂಪೂರ್ಣ ಸಜ್ಜುಗೊಳಿಸಲು ಆದೇಶಿಸಿದರು.

kiniudupi@rediffmail.com

No Comments

Leave A Comment