ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...

ಬಜ್ಪೆ : ವಿಳಾಸ ಕೇಳುವ ನೆಪದಲ್ಲಿ ಸರ ಎಗರಿಸಿದ ಕಳ್ಳ ಪೊಲೀಸ್ ವಶಕ್ಕೆ

ದಕ್ಷಿಣ ಕನ್ನಡ : ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್‌ ಮಿಲ್‌ ಬಳಿ ಇರುವ ಒಳ ರಸ್ತೆಯಲ್ಲಿ ನಡೆದುಕೊಂಡು ಮಧ್ಯಾಹ್ನ ವೇಳೆಯಲ್ಲಿ ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಹೋದ ಘಟನೆಗೆ ಸಂಬಂಧಿಸಿ ಬಜಪೆ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೆಯಂಗಡಿ ಇಂದಿರಾ ನಗರದ ನಿವಾಸಿ ಅಬ್ದುಲ್‌ ರವೂಫ್‌ ಯಾನೆ ಆಟೋ ರವೂಫ್‌(30)ಬಂಧಿತ ಆರೋಪಿ.

ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ವಿಶೇಷ ತಂಡ ರಚಿಸಿದ ಬಜಪೆ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಸಂದೀಪ್‌ ಜಿ.ಎಸ್‌. ಅವರು ಆರೋಪಿಯನ್ನು ಪತ್ತೆ ಮಾಡಿದ್ದು, ಆರೋಪಿತನಿಂದ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ, 50 ಸಾವಿರ ರೂಪಾಯಿ ಮೌಲ್ಯದ ಸ್ಕೂಟರ್‌, ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಆಟೋ ರಿಕ್ಷಾ ಮತ್ತು ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿತನ ವಿರುದ್ಧ ಮೂಡುಬಿದಿರೆ, ಮೂಲ್ಕಿ, ಬಜಪೆ, ಉಪ್ಪಿನಂಗಡಿ ಪೊಲೀಸ್‌ ಠಾಣೆ ಮತ್ತು ಹಾಸನ ಜಿಲ್ಲೆಯ ಅರೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ಒಟ್ಟು 10 ಸುಲಿಗೆ ಮತ್ತು ಕಳವಿಗೆ ಸಂಬಂ ಧಿಸಿದ ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳಲ್ಲಿ ಆರೋಪಿತ 2 ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದುಕೊಂಡಿದ್ದ. ಸರ ಮಾರಾಟದ ಹಣದಿಂದ ಆತ ಆಟೋ ರಿಕ್ಷಾ ಖರೀದಿಸಿದ್ದ.

ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

kiniudupi@rediffmail.com

No Comments

Leave A Comment