ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಬಳ್ಳಾರಿ ಬಾಣಂತಿಯರ ಮರಣ: ಸರ್ಕಾರಿ ಕೆಲಸ ಸಿಕ್ಕ ಖುಷಿಯಲ್ಲಿದ್ದ ನಂದಿನಿ ಸಾವು, ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಅಮಾಯಕ ಜೀವ
ಬಳ್ಳಾರಿ, ನವೆಂಬರ್ 30: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ನಾಲ್ವರಲ್ಲಿ ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ನಂದಿನಿ ಎಂಬುವರು ನವೆಂಬರ್ 09 ರಂದು ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 12 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಅಂದು ಮಧ್ಯರಾತ್ರಿ ಮೃತಪಟ್ಟಿದ್ದು, ದುರ್ದೈವದ ಸಂಗತಿಯಾಗಿದೆ.
ಇನ್ನು, ಮೃತ ಬಾಣಂತಿ ನಂದಿನಿ ಹಿಂದೆ ಕರುಳು ಹಿಂಡುವ ಕಥೆ ಇದೆ. ನಂದಿನಿ ಛಲಗಾರ್ತಿ ಅಂದುಕೊಂಡಿದ್ದನ್ನು ಸಾಧಿಸಿ ತೀರುವ ಮಹಿಳೆಯಾಗಿದ್ದಳು. ಬಡತನದಲ್ಲಿ ಬೆಳದಿದ್ದ ನಂದಿನಿ ಕಷ್ಟಪಟ್ಟು ಓದಿ ಡಬಲ್ ಡಿಗ್ರಿ ತನ್ನದಾಗಿಸಿಕೊಂಡಿದ್ದಳು. ನಂದಿನಿ ಪೋಷಕರು ಕೂಡ ಮಗಳ ಓದಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡಿದ್ದರು.
ನಂದಿನಿ ಪೋಷಕರ ಬಳಿ ಕೇವಲ ಎರಡೂವರೆ ಎಕರೆ ಜಮೀನು ಇತ್ತು. ಇದರಲ್ಲಿ ಬಂದ ಆದಾಯದಲ್ಲೆ ಜೀವನ ನಡೆಸುತ್ತಿದ್ದರು. ಮಗಳು ನಂದಿನಿಯನ್ನು ವಿದ್ಯಾವಂತಳನ್ನಾಗಿ ಮಾಡಿದ್ದರು. ಪೋಷಕರ ಆಸೆಯಂತೆ ವಿದ್ಯಾವಂತಳಾದ ನಂದಿನಿ, ನಾನು ದುಡಿದು ನಿಮ್ಮನ್ನು ನೋಡಿಕೊಳ್ಳುತ್ತೇನೆ ಅಂತ ತಂದೆ-ತಾಯಿಗೆ ಹೇಳಿದ್ದಳು.