ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ಚಿಕ್ಕಮಗಳೂರು, ನವೆಂಬರ್​ 30: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಕ್ಸಲ್​​ (Naxal) ಚಟುವಟಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ (ANF) ಕೂಂಬಿಂಗ್ ಮುಂದುವರೆದಿದೆ. ​ಕರ್ನಾಟಕದ‌ ಐವರು ನಕ್ಸಲರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸುತ್ತಿನಗುಡ್ಡ, ಕಿಗ್ಗಾ, ಕೆರೆಕಟ್ಟೆ ಅರಣ್ಯದಲ್ಲಿ ಓಡಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಹುಡಕಾಟ ನಡೆದಿದೆ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

ಅರಣ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರು ಲತಾ, ಕಳಸ‌ ತಾಲೂಕಿನ ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಗ್ರಾಮದ ಸುಂದರಿ, ರಾಯಚೂರು ಮೂಲದ ‌ಜಯಣ್ಣ ಮತ್ತು ಶೃಂಗೇರಿ ತಾಲೂಕಿನ ಹಿತ್ತಲಮನೆಯ ರವೀಂದ್ರ ಐವರು ನಕ್ಸಲರ ತಂಡ ಕಾಫಿನಾಡಿನ ಕಾಡಿನಲ್ಲಿ ಅಡಗಿರುವ ಸಾಧ್ಯತೆ ಇದೆ.

ನಕ್ಸಲ್​ ವನಜಾಕ್ಷಿ (66 ವರ್ಷ) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಈಕೆ ಮೋಸ್ಟ್ ವಾಂಟೆಡ್‌ ನಕ್ಸಲ್ ಅಂಗಡಿ ಸುರೇಶ್ ಪತ್ನಿಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಪತ್ನಿ ವನಜಾಕ್ಷಿ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಕರ್ನಾಟಕದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹೀಗಾಗಿ, ಸರ್ಕಾರ ಶರಣಾಗುವಂತೆ ಹೇಳಿದೆ.

ಎಎನ್​ಫ್​ ಅಧಿಕಾರಿಗಳು ಕಳೆದ 4 ದಿನಗಳಿಂದ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶರಣಾಗುವಂತೆ ಸರ್ಕಾರ ಸೂಚನೆಯಂತೆ ಎಎನ್​ಫ್​ ಶರಣಾಗತಿಗೆ ಮೊದಲ‌ ಆಧ್ಯತೆ ನೀಡಿದೆ. ಶರಣಾಗತಿ ಬಗ್ಗೆ ನಕ್ಸಲ್ ಸಂಬಂಧಿಕರು, ಮಾಜಿ ನಕ್ಸಲರು ಮತ್ತು ಸ್ಥಳೀಯರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಶರಣಾದ ನಕ್ಸಲ್​ರಿಗೆ ಸರ್ಕಾರ ನೀಡುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ. ನಕ್ಸಲ್ ಶರಣಾಗತಿ ಕಮಿಟಿಗೂ ಶರಣಾಗಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಅಂಗಡಿ ಸುರೇಶ್ ಸಿಕ್ಕಿದ್ದು ಹೇಗೆ?

ಇದೇ ವರ್ಷ ಫೆಬ್ರವರಿಯಲ್ಲಿ ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ದಾಳಿಯಿಂದ ನಕ್ಸಲ್ ಸುರೇಶ್ ಗಾಯಗೊಂಡಿದ್ದನು. ಹೀಗಾಗಿ ಸುರೇಶ್​ಗೆ ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಿಚಾರ ಇಳಿದು ಆಸ್ಪತ್ರೆಗೆ ತೆರಳಿದ ಕೇರಳ ಪೊಲೀಸರು ಸುರೇಶ್​ನನ್ನು ಬಂಧಿಸಿದ್ದಾರೆ.

ನಕ್ಸಲ್​​ರಿಗೆ ಪ್ಯಾಕೇಜ್​: ಪರಮೇಶ್ವರ್​

ನಕ್ಸಲರಿಗೆ ಶರಣಾಗಲು ಕೇಳುತ್ತಿದ್ದೇವೆ. ಅವರ ಜೊತೆಯಲ್ಲಿ ಇರುವವರಿಗೆ ಶರಣಾಗಲು ಕೇಳುತ್ತಿದ್ದೇವೆ. ನಕ್ಸಲರು ಶರಣಾದರೆ ಪ್ಯಾಕೇಜ್ ನೀಡುತ್ತೇವೆ. ಸಾಮಾನ್ಯ ಜೀವನಕ್ಕೆ ಅನುಕೂಲ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

No Comments

Leave A Comment