ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
IPL Mega Auction 2025: ದಾಖಲೆಯ 27 ಕೋಟಿಗೆ ಪಂತ್, ಶ್ರೇಯಸ್ ಅಯ್ಯರ್ ಗೆ 26.75 ಕೋಟಿ. ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತ
ಜಿದ್ದಾ (ಸೌದಿ ಅರೇಬಿಯ) : ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಭಾರತದ ಬ್ಯಾಟರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರು 27 ಕೋಟಿ ರೂ. ಗೆ ಹರಾಜಾಗಿದ್ದಾರೆ.
ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬೆಲೆಗೆ ಹರಾಜಾದ ಆಟಗಾರ ಎನಿಸಿಕೊಂಡಿದ್ದಾರೆ.
ಮೂಲ ಬೆಲೆ 2 ಕೋಟಿ ರೂ ವಿನಿಂದ ಪ್ರಾರಂಭವಾದ ಹರಾಜಿನಲ್ಲಿ ರಿಷಬ್ ಗೆ ಆರಂಭದಿಂದಲೇ ಬೇಡಿಕೆ ಹೆಚ್ಚಾಯಿತು. ತೀವ್ರ ಪೈಪೋಟಿಯಲ್ಲಿ ರಿಷಬ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 22 ಕೋಟಿ ರೂ.ವರೆಗೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ಕೊನೆಗೆ ಲಕ್ನೋ ತಂಡವು ಆರ್ ಟಿ ಎಂ ಬಳಸಿ ರಿಷಬ್ ಅವರನ್ನು 27 ಕೋಟಿ ರೂ.ವಿಗೆತನ್ನದಾಗಿಸಿಕೊಂಡಿತು.