ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಮಂಗಳೂರು: ‘ಬಿಜೆಪಿಯಿಂದ ಮಹಾರಾಷ್ಟ್ರಕ್ಕೆ ಕಂಟೈನರ್ನಲ್ಲಿ ಹಣ ಬಂದಿದೆ’- ಹರಿಪ್ರಸಾದ್
ಮಂಗಳೂರು:ಬಿಜೆಪಿಯಿಂದ ಮಹಾರಾಷ್ಟ್ರಕ್ಕೆ ಕಂಟೈನರ್ನಲ್ಲಿ ಹಣ ಬಂದಿದೆ ಎಂದು ಕಾಂಗ್ರೆಸ್ ಎಂಎಲ್ಸಿ ಹರಿಪ್ರಸಾದ್ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ತೂಕದ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ . ರಾಜ್ಯದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ರಾಜ್ಯದಲ್ಲಿ ಬೇರೆ ಪಕ್ಷಗಳು ಭಾರಿ ಹಣದ ಹೊಳೆ ಹರಿಸಿತ್ತು. ನಾವು ಕೂಡ ಅವರಿಗಿಂತ ಹೆಚ್ಚು ಪೈಪೋಟಿ ನೀಡಿದ್ದೇವೆ. ನಾವೇನು ಖಾವಿ ತೊಟ್ಟ ಸನ್ಯಾಸಿಗಳಲ್ಲ ಎಂದಿದ್ದಾರೆ.
ಅವರ ಹಣ, ಹೆಂಡಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ. ಆ ಮೂಲಕ ಕರ್ನಾಟಕದಲ್ಲಿ ಹಣ, ಹೆಂಡ ನೀಡಿದ್ದಾಗಿ ಒಪ್ಪಿಕೊಂಡ ಹರಿಪ್ರಸಾದ್ ನಮ್ಮ ಕೆಲಸದ ಮೂಲಕ ಕೂಡ ಉತ್ತರ ಕೊಟ್ಟಿದ್ದೇವೆ. ಬಿಜೆಪಿ ಚುನಾವಣೆಗೂ ಮೊದಲು ಸುಳ್ಳು ವದಂತಿ ಹಬ್ಬಿಸಿದ್ದರು. ಗ್ಯಾರಂಟಿ, ವಕ್ಫ್ ವಿಚಾರ ಪ್ರಸ್ತಾಪಿಸಿ ಅಪಪ್ರಚಾರ ಮಾಡಿದರು.
ಬಿಜೆಪಿಯಲ್ಲಿ ಕಾಂಗ್ರೆಸ್ಗಿಂತ ಡಬಲ್ ಕುಟುಂಬ ರಾಜಕಾರಣ ಇದೆ. ಒಂದೊಂದು ಕುಟುಂಬದಲ್ಲಿ 10 ಜನರು ರಾಜಕಾರಣದಲ್ಲಿ ಇದ್ದಾರೆ. ಕಾಂಗ್ರೆಸ್ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಾರೆ. ಬಿಜೆಪಿಯವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡದೆ, ನಮ್ಮ ತಟ್ಟೆಯ ನೊಣ ನೋಡುತ್ತಿದ್ದಾರೆ. ನಾವು ಕೊಟ್ಟಿರುವ ಕಾರ್ಯಕ್ರಮಗಳಿಂದ ಶಿಗ್ಗಾಂವಿಯಲ್ಲಿ ಗೆದ್ದಿದ್ದೇವೆ ಎಂದರು.
ಸಿಎಂ ಬದಲಾಗುತ್ತಾರೆ ಅಂತಾ ಕೆಲವರು ತಿರುಕನ ಕನಸು ಕಾಣುತ್ತಿದ್ದರು. ಅಪ್ಪನ ತೆಕ್ಕೆಯಲ್ಲಿ ಬೆಳೆದವರು ಹೇಳಿದ ಹಾಗೆ ಆಗಲ್ಲ. ಸಿಎಂ ಬದಲಾವಣೆ ಯಡಿಯೂರಪ್ಪನವರ ಸಹಿ ಮಾಡಿದ ಹಾಗೇ ಅಲ್ಲ. ಚುನಾವಣಾ ಆಯೋಗ ಬಿಜೆಪಿಯ ಅಂಗವಾಗಿ ಬಿಟ್ಟಿದೆ ಎಂದು ವಾಗ್ದಾಳಿ ಮಾಡಿದ್ದಾರೆ.