ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಹೆಬ್ರಿ: ನಕ್ಸಲ್ ಮುಖಂಡ ವಿಕ್ರಂ ಗೌಡನ ಎನ್‌ ಕೌಂಟರ್ ಪ್ರಕರಣ : ಜಯಂತ್ ಗೌಡ ವಿಚಾರಣೆ : ಹೆಬ್ರಿ ಸ್ಟೇಷನ್ ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪೀತಬೈಲ್ ಎಂಬಲ್ಲಿ ನಡೆದ ನಕ್ಸಲ್ ಮುಖಂಡ ವಿಕ್ರಂ ಗೌಡನ ಎನ್‌ ಕೌಂಟರ್ ಪ್ರಕರಣದ ತನಿಖೆಯ ಕುರಿತಾಗಿ ಘಟನೆ ನಡೆದ ಸ್ಥಳದ ನಿವಾಸಿ ಜಯಂತ್ ಗೌಡ ಅವರನ್ನು ಹೆಬ್ರಿ ಪೊಲೀಸರು ವಿಚಾರಣೆಗೆ ವಶಪಡಿಸಿಕೊಂಡಿದ್ದು, ಈ ಕುರಿತು ಗ್ರಾಮಸ್ಥರು ವಿರೋಧಿಸಿ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ (ನ.22) ನಡೆಯಿತು.

ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶುಕ್ರವಾರ ಬೆಳಗ್ಗೆ ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಜಯಂತ್ ಗೌಡ ಅವರನ್ನು ವಶಕ್ಕೆ ಪಡೆದು ಹೆಬ್ರಿ ಠಾಣೆಗೆ ಕರೆ ತಂದಿದ್ದಾರೆ.

ಜಯಂತ್ ಗೌಡ ಅಮಾಯಕ ಆತನಿಗೆ ಏನು ತಿಳಿದಿಲ್ಲ ಆತನನ್ನು ಯಾಕೆ ಠಾಣೆಗೆ ಕರೆದುಕೊಂಡು ಬಂದಿದ್ದೀರಿ ಅಲ್ಲಿಯ ವಿಚಾರಿಸಬಹುದಿತ್ತಲ್ಲ ಎಂದು ಮಲೆಕುಡಿಯ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಠಾಣಾಧಿಕಾರಿ ಅವರಲ್ಲಿ ಮನವಿ ಮಾಡಿ ಆತನನ್ನು ಕೂಡಲೇ ಬಿಡುವಂತೆ ಒತ್ತಾಯಿಸಿದರು. ವಿಚಾರಣೆಯ ನಂತರ ಜಯಂತ್ ಗೌಡ ಅವರನ್ನು ಬಿಡುಗಡೆಗೊಳಿಸಿರುವ ಮಾಹಿತಿ ಲಭ್ಯವಾಗಿದೆ.

ಸಮಾಜದ ಪ್ರಮುಖರಾದ ಶ್ರೀಧರ್ ಗೌಡ, ಗಂಗಾಧರ ಗೌಡ, ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ್ ಬಂಗೇರ, ಊರಿನ ಪ್ರಮುಖರಾದ ವಿಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment