ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿ ಲೋಕಸಭಾ ಸದಸ್ಯರಾದ ಶ್ರೀನಿವಾಸ್ ಪೂಜಾರಿಯರೇ ನೀವು ಎಲ್ಲಿದ್ದೀರಿ ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನರು ಸಾಯುತ್ತಿದ್ದಾರೆ ಇದನ್ನು ಕೂಡಲೇ ಸರಿಪಡಿಸಿ ನಿಮ್ಮ ಸುಳ್ಳು ಹೇಳಿಕೆ ಬಿಟ್ಟುಬಿಡಿ:ಸುರೇಶ್ ಶೆಟ್ಟಿ ಬನ್ನಂಜೆ ಒತ್ತಾಯ
ಉಡುಪಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಇದರ ಅರಿವೇ ತಮಗೆ ಇಲ್ಲದಂತೆ ಇರುತ್ತಿರುವ ನಮ್ಮ ಉಡುಪಿ ಲೋಕಸಭಾ ಸದಸ್ಯರು ಉಡುಪಿ ಶಾಸಕರು ಆದರೆ ಪರ್ಕಳ ರಾಷ್ಟ್ರೀಯ ಹೆದ್ದಾರಿಯೂ ಜನಸಾಮಾನ್ಯರಿಗೆ ವಾಹನದಲ್ಲಿ ಚಲಿಸಲು ಆಗದಂತ ಪರಿಸ್ಥಿತಿಯನ್ನು ತಂದಿದೆ. ಶಾಲಾ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗುವ ರಿಕ್ಷವೇ ಅಲ್ಲಿ ಪಲ್ಟಿಯಾಗಿ ಮಕ್ಕಳುಪಾರಾಗಿದ್ದಾರೆ ಎರಡು ದಿನದ ಹಿಂದೆ ಗ್ರಾನೈಟ್ ಲಾರಿ ಹಿಂಬದಿಯಾಗಿ ಚಲಿಸಿ ದುರಂತವೇ ಸಂಭವಿಸಿದೆ ಆದರೆ ಇದರ ಪರಿವೆ ಇಲ್ಲದಂತೆ ಮಾಡುತ್ತಿರುವ ಉಡುಪಿ ಸಂಸದರ ನಡೆಯ ಬಗ್ಗೆ ಜನಸಾಮಾನ್ಯರು ಕಂಗೆಟ್ಟು ಹೋಗಿದ್ದಾರೆ.
ಮಾನ್ಯ ಸಂಸದರೇ ನಿಮ್ಮ ಪ್ರಧಾನಿ ಮೋದಿ ಅವರು ಗಂಟೆಗಟ್ಟಲೆ ಭಾಷಣ ಮಾಡಿ ಇಡೀ ದೇಶವನ್ನು ನಾವು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಜನರನ್ನು ಮೋಸಗೊಳಿಸುತ್ತಿದ್ದಾರೆ. ಇಲ್ಲಿ ಹತ್ತು ವರ್ಷಗಳಿಂದ ಒಂದೇ ಒಂದು ರಸ್ತೆ ರಾಷ್ಟ್ರೀಯ ಹೆದ್ದಾರಿ ಸರಿಯಾಗಿ ನಿರ್ಮಾಣ ಆಗಿಲ್ಲ ಇದಕ್ಕೆ ಉತ್ತರಿಸುವವರು ಯಾರು.ಮುಂದಿನ ಒಂದು ತಿಂಗಳ ಒಳಗೆ ಪರ್ಕಳ ರಸ್ತೆಯನ್ನು ಸರಿಯಾಗಿ ನೀವು ಮಾಡದಿದ್ದಲ್ಲಿ ಸ್ಥಳೀಯರ ಜೊತೆಗೂಡಿ ಉಡುಪಿಯ ಸಂಸದರಾದ ನಿಮ್ಮ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಅದಕ್ಕೆ ಅವಕಾಶ ನೀಡದೆ ಈ ರಸ್ತೆಯ ದುರಸ್ತಿಯನ್ನು ಕೂಡಲೇ ಮಾಡಿಸಿ ಜನಸಾಮಾನ್ಯರ ಪ್ರಾಣವನ್ನು ಉಳಿಸುವ ಜವಾಬ್ದಾರಿ ನಿಮ್ಮದು ನಿಮಗೆ ಆ ಕೆಲಸವನ್ನು ಮಾಡಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರ ತಿಳಿಸಿರುತ್ತಾರೆ.