ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಶ್ರೀಕೃಷ್ಣಮಠದ ಲಕ್ಷದೀಪೋತ್ಸವಕ್ಕೆ ಅದ್ದೂರಿಯ ಚಾಲನೆ-ಕೆರೆ ಉತ್ಸವಕ್ಕೆ ಭಾರೀ ಜನ ಜನಸ್ತೋಮ
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ರಥಬೀದಿಯ ಸುತ್ತಲೂ ಹಣತೆಯನ್ನಿಟ್ಟು ದೀಪೋತ್ಸವಕ್ಕೆ ಚಾಲನೆಯನ್ನು ನೀಡಿದರು.
ಉಡುಪಿಯ ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಉತ್ಥಾನ ದ್ವಾದಶಿಯ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ಕ್ಷೀರಾಭ್ದಿಯನ್ನು ಮಾಡಿ, ಅರ್ಘ್ಯವನ್ನು ನೀಡಿದರು. ನಂತರ ಲಕ್ಷದೀಪೋತ್ಸವ ದ ಅಂಗವಾಗಿ ಮಧ್ವ ಸರೋವರದಲ್ಲಿ ಪಾರ್ಥ ಸಾರಥಿ ರಥದ ಮಾದರಿಯ ತೆಪ್ಪದಲ್ಲಿ ಆಕರ್ಷಕ ತೆಪ್ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನಿಟ್ಟು ತೆಪ್ಪೋತ್ಸವವನ್ನು ನೆರವೇರಿಸಲಾಯಿತು. ತದನಂತರ ಅಲಂಕೃತ ರಥಗಳಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಹಾಗೂ ಅನಂತೇಶ್ವರ, ಚಂದ್ರೇಶ್ವರ ದೇವರನ್ನಿಟ್ಟು ರಥಬೀದಿಯ ಸುತ್ತಲೂ ವೈವಿಧ್ಯಮಯ ಲಕ್ಷ ದೀಪಗಳ ನಡುವೆ, ನಾದಸ್ವರ, ಪಂಚ ವಾದ್ಯ, ಚಂಡೆ ವಾದ್ಯಗಳೊಂದಿಗೆ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ತುಳಸಿ ಸಂಕೀರ್ಥನೆಯೊಂದಿಗೆ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ನಂತರ ಮಧ್ವ ಮಂಟಪದಲ್ಲಿ ತೊಟ್ಟಿಲು ಪೂಜೆಯು ನಡೆಯಿತು.