ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ದೇವ-ದೇಶ-ದೇಹ ಮಂದಿರಗಳಲ್ಲಿ ಸ್ವಚ್ಛತೆ-ಮಾಸಿಕ ಸ್ವಚ್ಛ ಭಾರತ್ ಅಭಿಯಾನಕ್ಕೆ ಪರ್ಯಾಯ ಶ್ರೀಗಳಿ೦ದ ಚಾಲನೆ
ಉಡುಪಿ:ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರಿಕಲ್ಪನೆ ಆದೇಶ ಮತ್ತು ಮಾರ್ಗದರ್ಶನದನ್ವಯ ದೇವ-ದೇಶ-ದೇಹ ಮಂದಿರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ, ಮಾಸಿಕ ಸ್ವಚ್ಛ ಭಾರತ್ ಅಭಿಯಾನಕ್ಕೆ ಪೂರಕವಾಗಿ ಕೃಷ್ಣಗೀತಾ ಸೇವಾ ವೃಂದ ವನ್ನು ರಚಿಸಿಕೊಂಡು ಸ್ವಚ್ಛತಾ ಕೆಲಸಗಳನ್ನು ಕೈಗೊಳ್ಳಲು ಉದ್ದೇಶಿ ಈ ದಿನ ಮುಂಜಾನೆ ಗೀತಾ ಮಂದಿರದಲ್ಲಿ, ಶ್ರೀ ಗಳವರು ಸ್ಥಳೀಯ ಸಂಘಟನೆ ಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ,ಗಾಂಧಿ ಆಸ್ಪತ್ರೆಯ ಡಾ. ವ್ಯಾಸರಾಯ ತಂತ್ರಿ, ಪತಂಜಲಿ ಯೋಗ ಸಮಿತಿಯ ಕೆ. ರಾಘವೇಂದ್ರ ಭಟ್, ಮಠದ ದಿವಾನರಾದ ನಾಗರಾಜ್ ಆಚಾರ್ಯ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದು, ಗೀತಾ ಮಂದಿರದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಶ್ರೀ ಮಠದ ಸಂಚಾಲಕರಾದ ರಮಣಾಚಾರ್ಯ ಧನ್ಯವಾದವಿತ್ತರು.