ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣ ಸಿಐಡಿಗೆ ವರ್ಗಾವಣೆ
ಬೆಂಗಳೂರು, ಅಕ್ಟೋಬರ್ 11: ಸಾಮಾಜಿಕ ಕಾರ್ಯಕರ್ತೆ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಜತೆಗೆ, ಸಂತ್ರಸ್ತೆ ವಿರುದ್ಧ ವಿನಯ್ ಕುಲಕರ್ಣಿ ದಾಖಲಿಸಿರುವ ಪ್ರಕರಣವನ್ನೂ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಶಾಸಕ ವಿನಯ್ ಕುಲಕರ್ಣಿ ವಿರುದ್ಧ ರೈತ ಮಹಿಳೆ ದೂರು ನೀಡಿದ್ದರು. ವಿನಯ್ ಕುಲಕರ್ಣಿ ವಿರುದ್ಧ ಜೀವ ಬೆದರಿಕೆ, ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ ವಿನಯ್ ಕುಲಕರ್ಣಿ ಅತ್ಯಾಚಾರವೆಸಗಿದ್ದರೆಂದು ಹಾವೇರಿಯ ಮಹಿಳೆ ಸಂಜಯ್ ನಗರ ಠಾಣೆಗೆ ದೂರು ನೀಡಿದ್ದರು. ಸಂತ್ರಸ್ತ ಮಹಿಳೆ ದೂರಿಗೆ ಪ್ರತಿದೂರು ದಾಲಿಸಿದ್ದ ವಿನಯ್ ಕುಲಕರ್ಣಿ, 2 ಕೋಟಿ ರೂಪಾಯಿ ನೀಡುವಂತೆ ರೈತ ಮಹಿಳೆ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಆರೋಪಿಸಿದ್ದರು.
ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸ್ಥಳ ಮಹಜರು ನಡೆಸಿದ್ದಾರೆ. ಸಂತ್ರಸ್ತೆಯಿಂದ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ವಿನಯ್ ಕುಲಕರ್ಣಿ ಅತ್ಯಾಚಾರ ಎಸಗಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ರೈತ ಮಹಿಳೆ ಮಾಡಿದ ಆರೋಪದ ಮೇಲೆ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ, ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ ವಿರುದ್ಧವೇ ವಿನಯ್ ಕುಲಕರ್ಣಿ ಪ್ರತಿದೂರು ದಾಖಲಿಸಿದ್ದರು.
ಸಂತ್ರಸ್ತ ಮಹಿಳೆ ಹಾಗೂ ಖಾಸಗಿ ಚಾನೆಲ್ ಮುಖ್ಯಸ್ಥರೊಬ್ಬರ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪದಡಿ ವಿನಯ್ ಕುಲಕರ್ಣಿ ಪ್ರತಿ ದೂರು ನೀಡಿದ್ದರು.