ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಸಚಿವರಾದ ಪ್ರಹಲ್ಲಾದ ಜೋಶಿಯವರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ದಿನಕ್ಕೊಂದು ಸುಳ್ಳು ಹೇಳಿಕೆಗಳನ್ನು ನೀಡುವುದು ಏಕೆ? ರಾಜ್ಯದಲ್ಲಿ ಬಿಜೆಪಿಯ ನಂಬರ್ ಒನ್ ನಾಯಕ ಎಂದು ತೋರಿಸಿಕೊಳ್ಳುತ್ತಿರುವ ಪ್ರಯತ್ನವೇ:ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ :ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುತ್ತೇವೆ ಮಾನ್ಯ ಪ್ರಹ್ಲಾದ ಜೋಶಿ ಅವರು ತಮ್ಮ ಪ್ರಚಾರಕ್ಕಾಗಿ ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಸುಳ್ಳು ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಇದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಬದಿಗೆ ಸರಿಸಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಮಾನ್ಯ ವಿಜಯೇಂದ್ರ ಇವರನ್ನು ಅಧಿಕಾರದಿಂದ ಕೆಳಗಿಳಿಸಿ ತಾನು ರಾಜ್ಯದಲ್ಲಿ ನಂಬರ್ ಒನ್ ಬಿಜೆಪಿ ನಾಯಕ ಆಗಲು ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ಧ ಸುಳ್ಳು ಹೇಳಿಕೆಯನ್ನು ನೀಡುತ್ತಿದ್ದಾರೆ.
ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಮತ್ತು ಇನ್ನಿತರ ಭಿನ್ನಮತಿಯ ನಾಯಕರ ಹಿಂದೆ ಮಾನ್ಯ ಜೋಶಿಯವರ ಕೃಪಾ ಕಟಾಕ್ಷ ಇದ್ದು ಹೇಗಾದರೂ ಮಾಡಿ ಯಡಿಯೂರಪ್ಪ ಕುಟುಂಬವನ್ನು ಬಿಜೆಪಿಯಿಂದ ರಾಜ್ಯದಲ್ಲಿ ಹೊರಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ ಮತ್ತೊಂದು ಬದಿಯಲ್ಲಿ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವರಾದಂತಹ ಕುಮಾರಸ್ವಾಮಿಯವರನ್ನು ಬೆಂಬಲಿಸುವ ಹೇಳಿಕೆಯನ್ನು ನೀಡುತ್ತಾ ತಾನು ಕೇಂದ್ರ ಸಚಿವ ಎಂಬುದನ್ನು ಮರೆತು ತಮ್ಮ ಅಧೀನದಲ್ಲಿರುವ ಇಲಾಖೆಯ ಗೋಚರವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಕೇಂದ್ರದಲ್ಲಿ ಬಹುಮತವಿಲ್ಲದ ಬಿಜೆಪಿ ಸರಕಾರ ಮುಂದಿನ ದಿನಗಳಲ್ಲಿ ಪತನವಾಗುವುದು ಖಚಿತ ಎಂಬುದು ಮಾನ್ಯ ಜೋಶಿ ಅವರಿಗೆ ತಿಳಿದಂತಿದೆ ಅದಕ್ಕಾಗಿ ಮಾನ್ಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ನಮ್ಮ ರಾಜ್ಯದಲ್ಲಿ ಅವರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಮಾನ್ಯ ಜೋಶಿಯವರೇ ನೀವು ಎಷ್ಟೇ ಸುಳ್ಳು ಹೇಳಿದರೂ ಎಷ್ಟು ಪಾದಯಾತ್ರೆ ಮಾಡಿದರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ನಿಮ್ಮಿಂದ ಸಾಧ್ಯವಾಗದು ನಿಮ್ಮಂಥ ನೂರು ನಾಯಕರು ಬಂದರು ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಇವರನ್ನು ಅಧಿಕಾರದಿಂದ ಕೆಳಗಿಳಿಸಲು ಈ ಜನ್ಮದಲ್ಲಿ ನಿಮಗೆ ಸಾಧ್ಯವಿಲ್ಲ ಏಕೆಂದರೆ ರಾಜ್ಯದ ಜನತೆ ಇವರ ಬೆಂಬಲಕ್ಕೆ ಇದ್ದಾರೆ ಎಂಬುದು ನೀವು ತಿಳಿದುಕೊಂಡರೆ ಒಳಿತು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೇ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.