ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ನಿನ್ನೆ.. ಹಾಲು ಮಾರುವವರ ಮಗಳು; ಇಂದು… 2 ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರೀತಿ ಪಾಲ್
100 ಮೀಟರ್ ಅಥವಾ 200 ಮೀಟರ್ ಓಟವೇ ಆಗಿರಲಿ, ಭಾರತೀಯನೊಬ್ಬ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಕನಸಿನ ಮಾತು. ಆದರೆ, 23 ವರ್ಷದ ಪ್ರೀತಿ ಪಾಲ್ ಭಾರತದ ಈ ಮಹಾ ಕನಸನ್ನು ಈಗ ನನಸಾಗಿಸಿದ್ದಾರೆ. ಈ ಕನಸನ್ನು ಸಾಕಾರಗೊಳಿಸುವ ಮೂಲಕ ಕೇವಲ 48 ಗಂಟೆಗಳಲ್ಲಿ ಎರಡು ಬಾರಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಕಾರಣರಾಗಿದ್ದಾರೆ. ಆಗಸ್ಟ್ 30 ರಂದು ನಡೆದಿದ್ದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚು ಗೆದ್ದಿದ್ದ ಪ್ರೀತಿ ಪಾಲ್, ಇದೀಗ ಸೆಪ್ಟೆಂಬರ್ 1 ರಂದು ನಡೆದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಮತ್ತೊಮ್ಮೆ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ 2 ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರೀತಿ ಪಾಲ್ ಪಾತ್ರರಾಗಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಪ್ರೀತಿ ಪಾಲ್ ಅವರ ಯಶೋಗಾಥೆ ನಾವು ನೋಡುವಷ್ಟು ಮತ್ತು ಮಾತನಾಡುವಷ್ಟು ಸರಳವಾಗಿಲ್ಲ. ಪ್ರೀತಿ ಪಾಲ್ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಹಾಶಂಪುರ್ ಗ್ರಾಮದ ನಿವಾಸಿ. ಪ್ರೀತಿ ಅವರ ತಂದೆ ಅನಿಲ್ ಕುಮಾರ್ ಪಾಲ್ ಹಾಲಿನ ಡೈರಿ ನಡೆಸುತ್ತಿದ್ದು, ತಮ್ಮ 4 ಜನ ಮಕ್ಕಳಲ್ಲಿ ಪ್ರೀತಿ ಎರಡನೆಯವರಾಗಿದ್ದಾರೆ. ಬಾಲ್ಯದಿಂದಲೂ ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಪ್ರೀತಿಗೆ ಆರಂಭದಲ್ಲಿ ಮೀರತ್‌ನಲ್ಲಿ ಚಿಕಿತ್ಸೆ ಕೊಡಿಸಿದ ಅವರ ತಂದೆ ಆ ನಂತರ ದೆಹಲಿಯಲ್ಲಿ ಚಿಕಿತ್ಸೆ ಕೊಡಿಸಲು ಮುಂದಾದರು. ಆದರೆ ಯಾವ ಚಿಕಿತ್ಸೆಯೂ ಪ್ರೀತಿ ಅವರನ್ನು ಗುಣಪಡಿಸಲಿಲ್ಲ. ಹೀಗಾಗಿ ವಾಸ್ತವತೆಯನ್ನು ಅರ್ಥಮಾಡಿಕೊಂಡ ಪ್ರೀತಿ, ತನ್ನ ನ್ಯೂನತೆಯನ್ನೇ ತನ್ನ ಶಕ್ತಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದರು. ಅಲ್ಲಿಂದ ಆರಂಭವಾದ ಪ್ರೀತಿ ಪಾಲ್ ಅವರ ಯಶಸ್ಸಿನ ಪಯಣ ಇಂದೂ ಸಹ ಮುಂದುವರೆದಿದೆ.
ಎರಡೆರಡು ಪದಕ ಗೆದ್ದ ಪ್ರೀತಿ
ಆರಂಭದಲ್ಲಿ ಕೋಚ್ ಗಜೇಂದ್ರ ಸಿಂಗ್ ಅವರಿಂದ ತರಬೇತಿ ಪಡೆದ ಪ್ರೀತಿ ನಿಧಾನವಾಗಿ ಪ್ರಗತಿಯ ಮೆಟ್ಟಿಲನ್ನು ಏರತೊಡಗಿದರು. ಹಂತ ಹಂತವಾಗಿ ಯಶಸ್ಸನ್ನು ಸಾಧಿಸುತ್ತಾ ಬಂದ ಪ್ರೀತಿ, ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುವ ಮೊದಲು, ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿಯೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 2024 ರಲ್ಲಿ ಜಪಾನ್‌ನಲ್ಲಿ ನಡೆದ ಆ ಸ್ಪರ್ಧೆಯಲ್ಲಿ ಪ್ರೀತಿ ಕಂಚಿನ ಪದಕವನ್ನು ಗೆದ್ದರು. ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದರ ಹಿಂದೆ ಒಂದರಂತೆ ಎರಡು ಪದಕಗಳನ್ನು ಗೆಲ್ಲುವ ಮೂಲಕ ಹೆಮ್ಮೆಯಿಂದ ಖುಷಿಪಡುವ ಡಬಲ್ ಅವಕಾಶ ಪ್ರೀತಿ ಅವರಿಗೆ ಒದಗಿ ಬಂದಿದೆ.