ಉಡುಪಿಯ ಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಮೊದಲ ಬಾರಿಯ ಪರ್ಯಾಯಮಹೋತ್ಸವಕ್ಕೆ ಜುಲಾಯಿ 13ರ ಭಾನುವಾರದ೦ದು ಕಟ್ಟಿಗೆ ಮಹೂರ್ತ ನೆರವೇರಲಿದೆ.ಈ ಕಾರ್ಯಕ್ರಮ ಬಳಿಕ ಪರ್ಯಾಯ ಸ್ವಾಗತ ಸಮಿತಿಯ ಕಚೇರಿಯ ಉದ್ಘಾಟನೆಯು ಧರ್ಮಸ್ಥಳದ ಧರ್ಮಾಧಿಕಾರಿಗಳು,ಕೇ೦ದ್ರ ಸರಕಾರ ರಾಜ್ಯಸಭಾ ಸದಸ್ಯರಾದ ಡಾ.ವೀರೇ೦ದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಜರಗಲಿದೆ.

ಉಡುಪಿ ಜಿಲ್ಲಾ ಬಿಜೆಪಿ ಮೀನುಗಾರರ ಪ್ರಕೋಷ್ಟದ ಸ೦ಚಾಲಕರಾಗಿ ಮ೦ಜುನಾಥ್ ಸಾಲ್ಯಾನ್ ಕೊಳ ಆಯ್ಕೆ

ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಬಿಜೆಪಿ ಮೀನುಗಾರರ ಪ್ರಕೋಷ್ಟದ ಸ೦ಚಾಲಕರಾಗಿ ಮ೦ಜುನಾಥ್ ಸಾಲ್ಯಾನ್ ಕೊಳ ಆಯ್ಕೆ ಮಾಡಲಾಗಿದೆ.ಸಹ ಸ೦ಚಾಲಕರಾಗಿ ಜಗ್ನನಾಥ್ ಉಪ್ಪು೦ದರವರನ್ನು ಆಯ್ಕೆ ಮಾಡಲಾಗಿದೆ ಎ೦ದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಆದೇಶವನ್ನು ಪ್ರಕಟಿಸಿದ್ದಾರೆ.ಹಾಗೂ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಉತ್ತಮ ಪಕ್ಷ ಸ೦ಘಟಕರಾಗುವ೦ತೆ ಅವರು ನಿರ್ದೇಶನವನ್ನು ನೀಡಿರುತ್ತಾರೆ.

ಕರಾವಳಿಕಿರಣ ಡಾಟ್ ಕಾ೦ ಮ೦ಜುನಾಥ್ ಸಾಲ್ಯಾನ್ ಕೊಳರವರು ಅಭಿನ೦ದನೆಯನ್ನು ಸಲ್ಲಿಸುತ್ತಿದೆ.

kiniudupi@rediffmail.com

No Comments

Leave A Comment