ಹರಿಯಾಣ, ಗೋವಾ, ಲಡಾಖ್‌ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!

ಉಚಿತ ವೈದ್ಯಕೀಯ ಪರೀಕ್ಷೆ ಹಾಗೂ ರಕ್ತ ಧಾನ ಶಿಬಿರ

ಶ್ರೀ ಸೇವಾ ಬಳಗ ಶ್ರೀ ಕೃಷ್ಣಾಪುರ ಮಠ ಇವರ ಆಶ್ರಯದಲ್ಲಿ ರಕ್ತ ನಿಧಿ ವಿಭಾಗ ಜಿಲ್ಲಾ ಆಸ್ಪತ್ರೆ ಉಡುಪಿ, ಉಚಿತ ವೈದ್ಯಕೀಯ ಪರೀಕ್ಷೆ ಹಾಗೂ ರಕ್ತ ಧಾನ ಶಿಬಿರದ ಉದ್ಘಾಟನೆಯನ್ನು ಶ್ರೀ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀ ಪಾದರು ನೆರವೇರಿಸಿ ರಕ್ತ ದಾನದ ಮಹತ್ವ ಹಾಗೂ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹಿತ ನುಡಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 

ಈ ಶಿಬಿರಕ್ಕೆ ನ್ಯೂ ಚ್ಯವನ ಡೈಗೋಸ್ಟಿಕ್ ಸೆಂಟರ್, ಶ್ರೀ ಕೃಷ್ಣ ಮುಖ್ಯ ಪ್ರಾಣ ಪಂಚಕರ್ಮ ಸೆಂಟರ್, ಶ್ರೀ ಕೃಷ್ಣಫ್ಯಾಮಿಲಿ ಟ್ರಸ್ಟ್, hdfc bank ಉಡುಪಿ, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ )ವಿಶೇಷ ಸಹಕಾರ ನೀಡಿದ್ದು dr. ಸತೀಶ್ ರಾವ್, dr ಜಯರಾಮ್ ಭಟ್, dr ಜಯಂತ್ ಕುಮಾರ್, dr ರಾಜೇಶ್ ನಾವುಡ, dr ವೀಣಾ, dr ದೀಕ್ಷಾ ತಂಡದವರು ಕೈ ಜೋಡಿಸಿರುವರು.

ಸೇವಾ ಬಳಗದ ಪ್ರಮುಖ ರಾದ ಶ್ರೀ ರಘು ರಾಮ್ ಕೃಷ್ಣ ಬಲ್ಲಾಳ್ ಹಾಗೂ ಶ್ರೀ ರಾಘವೇಂದ್ರ ಮುಚ್ಚಿ0ತಾಯ ಗುರುಗಳನ್ನು ಗೌರವಿಸಿ ಶ್ರೀ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ ಪ್ರಸ್ತಾವನೆಗೈದರು.

kiniudupi@rediffmail.com

No Comments

Leave A Comment