ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಅ.10ರಿ೦ದ 17ರ ತನಕ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಕ್ಷಣಗಣನೆ….

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಕ್ರೋಧಿ ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 10/08/2024ನೇ ಶನಿವಾರ ಮೊದಲ್ಗೊ೦ಡು ಶ್ರಾವಣ ಶುದ್ಧ 12ಯು 17/08/2024ನೇ ಶನಿವಾರ ಪರ್ಯ೦ತ 124ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಅತೀ ವಿಜೃ೦ಭಣೆಯಿ೦ದ ಜರಗಲಿದೆ.

10/08/2024ನೇ ಶನಿವಾರ ಭಜನಾ ಸಪ್ತಾಹ ಮಹೋತ್ಸವವು ಮಧ್ಯಾಹ್ನ ಗ೦ಟೆ 12.05ಕ್ಕೆ ಪ್ರಾರ್ಥನೆ,ಅನ೦ತರ ದೀಪ ಸ್ಥಾಪನಾ ಕಾರ್ಯಕ್ರಮವು ಜರಗಲಿದೆ.

ಪ್ರತಿನಿತ್ಯ ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯು ಜರಗಲಿದೆ.
ಪ್ರತಿದಿನ ರಾತ್ರೆ 8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ. 16/08/2024ರ೦ದು ಏಕಾದಶಿಯ ದಿನವಾಗಿರುವುದರಿ೦ದ ರಾತ್ರೆ 9.00ಗ೦ಟೆಗೆ ಜರಗಲಿದೆ.

ದಿನಾ೦ಕ 15/08/2024ನೇ ಗುರುವಾರದ೦ದು ಸಾಯ೦ಕಾಲ ರ೦ಗಪೂಜೆಯು ನಡೆಯಲಿದೆ.ಸ೦ಜೆ 6.05ಕ್ಕೆ ರ೦ಗಪೂಜೆಗೆ ವಿಶೇಷ ಪ್ರಾರ್ಥನೆಯು ಯೊ೦ದಿಗೆ ರಾತ್ರೆ 9.00ಗ೦ಟೆಗೆ ರ೦ಗಪೂಜೆಯು ನಡೆಯಲಿದೆ.

11/08/2024ನೇ ಭಾನುವಾರದಿ೦ದ 16/08/2024ನೇ ಶುಕ್ರವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ 5.30ಕ್ಕೆ ಕಾಕಡಾರತಿ ಜರಗಲಿದೆ. 17/08/2024ರ ಶನಿವಾರದ೦ದು ಪ್ರಾತ:ಕಾಲ 5.00ಗ೦ಟೆಗೆ ಕಾಕಡಾರತಿ ಜರಗಲಿದೆ.

ನಗರ ಭಜನೆ:- 16/08/2024ನೇ ಶುಕ್ರವಾರದ೦ದು ಸಾಯ೦ಕಾಲ ಘ೦ಟೆ 5.00ಕ್ಕೆ ಶ್ರೀದೇವಳದಿ೦ದ ಹೊರಟು ಐಡಿಯಲ್ ಸರ್ಕಲ್ , ಡಯಾನ ಸರ್ಕಲ್, ಕೋರ್ಟು ರಸ್ತೆ ,ಅಜ್ಜರಕಾಡು, ಕವಿಮುದ್ದಣ್ಣ ಮಾರ್ಗವಾಗಿ ,ಸ೦ತೆಕಟ್ಟೆ,ಶಿರಿಬೀಡು, ಕಲ್ಸ೦ಕ, ಬಡಗುಪೇಟೆ, ರಥಬೀದಿ, ತೆ೦ಕಪೇಟೆಯಾಗಿ ಶ್ರೀದೇವಸ್ಥಾನದ ಹಿ೦ಬದಿಯ ರಸ್ತೆಯಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀದೇವಳಕ್ಕೆ ಹಿ೦ತಿರುಗುವುದು.ಆ ಬಳಿಕ ನಜರ ಕಾಣಿಕೆ ಪ್ರಸಾದ ವಿತರಣೆಯು ಜರಗಲಿದೆ.

17/08/2024ನೇ ಶನಿವಾರದ೦ದು ಮ೦ಗಲೋತ್ಸವ ಜರಗಲಿದ್ದು ಬೆಳಿಗ್ಗೆ 11.00ಗ೦ಟೆಗೆ ನಗರ ಭಜನೆಯು ಹೊರಡುವುದು. ಮಧ್ಯಾಹ್ನ 11.30ಕ್ಕೆ ಶ್ರೀದೇವರಿಗೆ ಮಹಾಪೂಜೆ ನ೦ತರ ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ ಪೂಜೆ . ಉರುಳು ಸೇವೆ (ಮಡಸ್ತಾನ)ಮೊಸರುಕುಡಿಕೆ, ತಪ್ಪ೦ಗಾಯಿ, ಮ೦ಗಲೋತ್ಸವದ ಕಾರ್ಯಕ್ರಮ, ಸಾಯ೦ಕಾಲ 5.30ರಿ೦ದ 8.00ರ ತನಕ ಮಹಾ ಸಮಾರಾಧನೆ ಬಳಿಕ ಮರು ಭಜನೆ ಹಾಗೂ ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ ಎ೦ದು ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಪ್ರಕಟಣೆ ತಿಳಿಸಿದೆ.

 

No Comments

Leave A Comment