ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ವಯನಾಡ್ ಭೂಕುಸಿತ: ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಎನ್‌ಡಿಆರ್‌ಎಫ್, ಸೇನಾ ಹೆಲಿಕಾಪ್ಟರ್‌ಗಳು

ವಯನಾಡ್: ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಕೇರಳ ಸರ್ಕಾರ ಮಂಗಳವಾರ ಭಾರತೀಯ ಸೇನೆಯ ನೆರವು ಕೋರಿದೆ. ಇದರ ಬೆನ್ನಲ್ಲೇ, ಭಾರತೀಯ ಸೇನೆ, NDRF ತಂಡಗಳು, ಎರಡು ಸೇನಾ ಹೆಲಿಕಾಪ್ಟರ್‌ಗಳು ಮತ್ತು ಇತರ ರಕ್ಷಣಾ ತಂಡಗಳು ಮುಂಡಕ್ಕೈಗೆ ತೆರಳುತ್ತಿವೆ.

ಕೇರಳದ ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

122 ಇನ್‌ಫೆಂಟ್ರಿ ಬೆಟಾಲಿಯನ್(ಟಿಎ) ಮದ್ರಾಸ್‌ನಿಂದ ಸೆಕೆಂಡ್-ಇನ್-ಕಮಾಂಡ್ ನೇತೃತ್ವದ 43 ಸೇನಾ ಸಿಬ್ಬಂದಿಗಳ ತಂಡ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ತೆರಳುತ್ತಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ವೈದ್ಯಕೀಯ ಅಧಿಕಾರಿ, ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು(ಜೆಸಿಒಗಳು) ಮತ್ತು 40 ಸೈನಿಕರನ್ನು ಒಳಗೊಂಡ ತಂಡ ವಯನಾಡು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ.

NDRF ನ ಒಂದು ತಂಡವು ಅವಶೇಷಗಳನ್ನು ತೆರವುಗೊಳಿಸಲು ಮುಂಡಕ್ಕೈ ಕಡೆಗೆ ತೆರಳುತ್ತಿದೆ.

ಕೊಲ್ಲಂ, ಅರಕ್ಕೋಣಂ ಮತ್ತು ಬೆಂಗಳೂರಿನಿಂದ ಇನ್ನೂ ಮೂರು ಎನ್‌ಡಿಆರ್‌ಎಫ್ ತಂಡಗಳು ಸಹ ತೆರಳುತ್ತಿವೆ ಎಂದು ಕೇರಳ ಕಂದಾಯ ಕೆ ರಾಜನ್ ಅವರು ತಿಳಿಸಿದ್ದಾರೆ.

“ಮುಂಡಕ್ಕೈ ಪರ್ವತದ ತಪ್ಪಲಿನಲ್ಲಿದೆ. ಪ್ರವಾಹದಿಂದ ಸೇತುವೆ ಕುಸಿದಿದ್ದು, ಈ ಪ್ರದೇಶ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ. ಈಗ ರಕ್ಷಣಾ ತಂಡ ತೆರಳಲು ಅನುಕೂಲವಾಗುವಂತೆ ತಾತ್ಕಾಲಿಕ ಸೇತುವೆ ನಿರ್ಮಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ರಾಜನ್ ಹೇಳಿದ್ದಾರೆ.

ಹಾನಿಯ ಪ್ರಮಾಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಮಧ್ಯಾಹ್ನದ ವೇಳೆಗೆ ಇನ್ನೂ ಮೂರು ಎನ್ ಡಿಆರ್ ಎಫ್ ತಂಡಗಳು ಆಗಮಿಸುತ್ತವೆ. ಸೇನೆಯ ಎರಡು ಹೆಲಿಕಾಪ್ಟರ್‌ಗಳು ಕೂಡ ಶೀಘ್ರದಲ್ಲೇ ತಲುಪಲಿವೆ” ಎಂದು ರಾಜನ್ ತಿಳಿಸಿದ್ದಾರೆ.

No Comments

Leave A Comment