ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

Paris Olympics 2024: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ಬರೆದ ಮಣಿಕಾ ಬಾತ್ರಾ

ಪ್ಯಾರಿಸ್ ಒಲಿಂಪಿಕ್ಸ್​ನ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತದ ಮಣಿಕಾ ಬಾತ್ರಾ ಪ್ರಿ ಕ್ವಾರ್ಟರ್‌ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಮಣಿಕಾ ಬಾತ್ರಾ ಹಾಗೂ ಫ್ರಾನ್ಸ್​ನ ಪ್ರಿತಿಕಾ ಪವಾಡೆ ಮುಖಾಮುಖಿಯಾಗಿದ್ದರು.

ಅತ್ಯುತ್ತಮ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಮಣಿಕಾ ಬಾತ್ರಾ 11-9 ಸ್ಕೋರ್​ಗಳ ಅಂತರದಿಂದ ಗೆದ್ದುಕೊಂಡರು. ಇನ್ನು ದ್ವಿತೀಯ ಸೆಟ್​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಭಾರತೀಯ ತಾರೆ 11-6 ಅಂತರದಿಂದ ಸುಲಭವಾಗಿ ಜಯ ಸಾಧಿಸಿದರು.

ಇನ್ನು ಮೂರನೇ ಸೆಟ್​ನಲ್ಲಿ ಪ್ರಿತಿಕಾ ಪವಾಡೆ ಕಡೆಯಿಂದ ಉತ್ತಮ ಹೋರಾಟ ಕಂಡು ಬಂತು.  ಇದಾಗ್ಯೂ ಅಂತಿಮವಾಗಿ 11-9 ಸ್ಕೋರ್​ಗಳ ಅಂತರದಿಂದ ಸೆಟ್ ಗೆಲ್ಲುವಲ್ಲಿ ಮಣಿಕಾ ಯಶಸ್ವಿಯಾಗಿದ್ದಾರೆ. ಹಾಗೆಯೇ ಕೊನೆಯ ಸೆಟ್​ನಲ್ಲಿ ಪ್ರಿತಿಕಾ 7 ಅಂಕಗಳಿಸುವಷ್ಟರಲ್ಲಿ ಭಾರತೀಯ ತಾರೆ 11 ಪಾಯಿಂಟ್ಸ್​ಗಳಿಸಿ ಗೆಲುವು ದಾಖಲಿಸಿದರು. ಈ ಮೂಲಕ 4-0 ಅಂತರದ ಜಯ ಸಾಧಿಸಿ ಮಣಿಕಾ ಬಾತ್ರಾ ಪ್ರಿ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಅಲ್ಲದೆ ಒಲಿಂಪಿಕ್ ಗೇಮ್ಸ್‌ ಇತಿಹಾಸದಲ್ಲೇ ಸಿಂಗಲ್ಸ್ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನ್ನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಮಣಿಕಾ ಬಾತ್ರಾ ಪಾತ್ರರಾಗಿದ್ದಾರೆ.

ಮಣಿಕಾ ಬಾತ್ರಾ ಅವರ ಸಾಧನೆಗಳು:

ವರ್ಷ ಸ್ಪರ್ಧೆ ಪದಕ
2016 ಸೌತ್ ಏಷ್ಯಾ ಕ್ರೀಡಾಕೂಟ ಚಿನ್ನ (3 ಪದಕಗಳು)
2018 ಕಾಮನ್ವೆಲ್ತ್ ಗೇಮ್ಸ್ ಚಿನ್ನ (ಮಹಿಳಾ ಸಿಂಗಲ್ಸ್)
2018 ಕಾಮನ್ವೆಲ್ತ್ ಗೇಮ್ಸ್ ಚಿನ್ನ (ಮಹಿಳಾ ತಂಡ)
2018 ಕಾಮನ್ವೆಲ್ತ್ ಗೇಮ್ಸ್ ಕಂಚು (ಶರತ್ ಕಮಲ್ ಜೊತೆ ಮಿಶ್ರ ಡಬಲ್ಸ್)
2018 ಏಷ್ಯನ್ ಗೇಮ್ಸ್ ಕಂಚು (ಶರತ್ ಕಮಲ್ ಜೊತೆ ಮಿಶ್ರ ಡಬಲ್ಸ್)
2021 WTT ಸ್ಪರ್ಧಿ ಬುಡಾಪೆಸ್ಟ್ ಚಿನ್ನ (ಸತ್ಯನ್ ಜ್ಞಾನಶೇಖರನ್ ಅವರೊಂದಿಗೆ ಮಿಶ್ರ ಡಬಲ್ಸ್)
2022 WTT ಸ್ಪರ್ಧಿ ದೋಹಾ ಬೆಳ್ಳಿ (ಸತ್ಯನ್ ಜ್ಞಾನಶೇಖರನ್ ಜೊತೆ ಮಿಶ್ರ ಡಬಲ್ಸ್)
2022 WTT ಸ್ಟಾರ್ ಸ್ಪರ್ಧಿ ದೋಹಾ ಕಂಚು (ಅರ್ಚನಾ ಕಾಮತ್ ಜೊತೆ ಮಹಿಳೆಯರ ಡಬಲ್ಸ್)

kiniudupi@rediffmail.com

No Comments

Leave A Comment