ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್....ಮುಂದುವರೆದ ನಕ್ಸಲ್ ಕೂಂಬಿಂಗ್: ಶರಣಾಗತಿಗೆ ಸೂಚನೆ, ಪ್ಯಾಕೇಜ್ ನೀಡುತ್ತೇವೆ ಎಂದ ಪರಮೇಶ್ವರ್
ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸ್ವಪಕ್ಷದವರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ ಯತ್ನಾಳ್
ವಿಜಯಪುರ, ಜುಲೈ 28: ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಬಿಜೆಪಿಯಲ್ಲೆ ಇದ್ದಾಗ ಆದ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾನೆ. ಕಾಂಗ್ರೆಸ್ಗೆ ಯಾಕೆ ಸೇರಿದ್ದಾರೆ ಅಂದರೆ ಇದೆಲ್ಲ ಮುಚ್ಚಿ ಹಾಕಲು ಸೇರಿದ್ದಾರೆ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೆಡವಲು ಸಿದ್ಧರಾಮಯ್ಯ ನೇತೃತ್ವದಲ್ಲಿ ಸೇರಿದ್ದಾರೆ. ರಾಜೀವ ಯಾರ ನಿರ್ದೇಶನದ ಮೇಲೆ ಕಾಂಗ್ರೆಸ್ ಸೇರಿದ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ರಾಜೀವ ಯಾರ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ. ವಿಧಾನಸೌಧದಲ್ಲಿ ನಾನು ಹೇಳಿದ್ದೇನೆ. ಕೇವಲ ಸಿದ್ಧರಾಮಯ್ಯ ಅವರನ್ನ ಮಾತ್ರ ಗುರಿ ಮಾಡಬೇಡಿ. ಇವತ್ತು ನಮ್ಮ ವಿಜಯೇಂದ್ರ ಹೇಳುತ್ತಾರೆ, ಇದು ಕೇವಲ ಸಿದ್ಧರಾಮಯ್ಯ ವಿರುದ್ದ ಹೋರಾಟ ಅಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಅಂತ, ಹಾಗಾದ್ರೆ ಸಿದ್ಧರಾಮಯ್ಯ ಯಾರು? ಬೇರೆನಾ, ಬಿಜೆಪಿಯವರಾ? ಎಂದು ಪ್ರಶ್ನಿಸಿದ್ದಾರೆ.
ಸಚಿವ ನಾಗೇಂದ್ರ ರಾಜೀನಾಮೆ ಪಡೆದಿದ್ದಕ್ಕೆ ಇವರು ಸಿಎಂಗೆ ಅಭಿನಂದನೆ ಸಲ್ಲಿಸುತ್ತಾರೆ. ನಾಗೇಂದ್ರ ಹಾಗೂ ವಾಲ್ಮಿಕಿ ನಿಗಮದ ಅಧ್ಯಕ್ಷರನ್ನ ಸಚಿವ ಸಂಪುಟದಿಂದ ಕಿತ್ತು ಹಾಕಬೇಕಿತ್ತು. ಅದು ನಿಜವಾದ ಸಿದ್ಧರಾಮಯ್ಯ ಅಂತಾ ಗೊತ್ತಾಗುತ್ತಿತ್ತು. ಕಾರಣ ಇದರ ತನಿಖೆ ಸಿಬಿಐನಿಂದ ಮಾತ್ರ ಸಾಧ್ಯ. ಹಾಗಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದ್ದಾರೆ.
ಮುಡಾ ಹಗರಣದಲ್ಲಿ ಯಡ್ಡಿಯೂರಪ್ಪ ಇದ್ದಾರೋ, ವಿಜಯೇಂದ್ರ ಇದ್ದಾರೋ, ಯಡ್ಡಿಯೂರಪ್ಪ ಅಕ್ಕನ ಮಕ್ಕಳು ಇದ್ದಾರೋ, ರಾಜೀವ್ ಅದರೋ, ಮತ್ಯಾರು ಇದ್ದಾರೆ ಎಲ್ಲರೂ ಸಿಕ್ಕಿ ಬೀಳುತ್ತಾರೆ. ರಾಜೀವ್ ಯಡ್ಡಿಯೂರಪ್ಪ ಶಿಷ್ಯನೋ, ಏನು ವಿಜಯೇಂದ್ರ ಶಿಷ್ಯನೋ ಯಾರೆಂದು ಹೇಳಬೇಕು. ಅವರನ್ನೇ ಕೇಳಿ ರಾಜೀವ್ ನಿಮ್ಮ ಶಿಷ್ಯ ಇದ್ದಾನೆ ಏಕೆ ಪಾದಯಾತ್ರೆ ಮಾಡುತ್ತಿದ್ದೀರಿ ಅಂತಾ ವಿಜಯೇಂದ್ರನನ್ನು ಕೇಳಬೇಕು ಎಂದಿದ್ದಾರೆ.
ರಾಜ್ಯದಲ್ಲಿ ಅನೇಕರನ್ನ ಸೋಲಿಸಲು ಇವರೇ ಕಾರಣ
ಲೋಕಸಭಾ ಚುನಾವಣೆ ಬಂದಾಗ ಯಾಕೆ ರಾಜೀವ್ ಕಾಂಗ್ರೆಸ್ ಸೇರಿದ. ಮೈಸೂರು, ಚಾಮರಾಜನಗರ ಗೆಲ್ಲಲು ಕಾಂಗ್ರೆಸ್ಗೆ ಇನ್ ಡೈರೆಕ್ಟ್ ಆಗಿ ಸಪೋರ್ಟ್ ಮಾಡಲು ಹೊಂದಾಣಿಕೆ ಅಂತಾ ಹೇಳಿದ್ನಲ್ಲ ಅದಕ್ಕೆ ಇದು ಸಾಕ್ಷಿ. ಇವರೆಲ್ಲ ಕೂಡಿ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆಡಿದ್ದಾರೆ. ಯಡ್ಡಿಯೂರಪ್ಪ, ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ಜಮೀರ ಅಹ್ಮದ ಖಾನ್ ಎಲ್ಲರೂ ಅಡ್ಜೆಸ್ಟ್ಮೆಂಟ್ ಇದ್ದಾರೆ. ರಾಜ್ಯದಲ್ಲಿ ಅನೇಕರನ್ನ ಸೋಲಿಸಲು ಇವರೇ ಕಾರಣ. ಜನರಿಗೆ ಎಲ್ಲ ಗೊತ್ತಾಗಿದೆ. ಸುಮ್ಮನೆ ಎಲ್ಲ ಒಪ್ಪಿಕೊಂಡು ಹಿಂದೆ ಸರಿದರೆ ಒಳ್ಳೆಯದು ಎಂದು ಯತ್ನಾಳ್ ಸಲಹೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಹಗರಣ ಮಾಡಿದ್ದರೆ ಅವರದ್ದೂ ತನಿಖೆ ಆಗಲಿ. ಯಾರು ಯಾರು ಕಳ್ಳತನ ಮಾಡಿದ್ದಾರೆ ಎಲ್ಲರದು ತನಿಖೆ ಮಾಡಿ. ಸರ್ಕಾರ ನಿಮ್ಮದೆ ಇದೆ. 14 ತಿಂಗಳು ನೀವು ಕತ್ತೆ ಕಾಯುತ್ತಿದ್ದರಾ? ಈಗ ಭೋವಿ ನಿಗಮ, ತಾಂಡಾ ಅಭಿವೃದ್ದಿಯಲ್ಲಿ ಹಗರಣ ಅಗಿದೆ ಅಂತಾ ಹೇಳುತ್ತಿದ್ದೀರಿ. ಯಡ್ಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಈಗ ಹೇಳುತ್ತಿದ್ದೀರಿ. ಇಷ್ಟು ದಿನ ಯಾಕೆ ಸುಮ್ಮನೆ ಕುಳಿತಿದ್ದೀರಿ ಸಿದ್ದರಾಮಯ್ಯನವರೆ ಎಂದು ಪ್ರಶ್ನೆ ಮಾಡಿದ್ದಾರೆ.