ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
Olympics 2024: ಕ್ರೀಡಾಕೂಟದಲ್ಲಿ ಮೊದಲೆರೆಡು ಚಿನ್ನದ ಪದಕಕ್ಕೆ ಮುತ್ತಿಟ್ಟ ಚೀನಾ, ಅಮೆರಿಕಾ ಬೆಳ್ಳಿಗೆ ತೃಪ್ತಿ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೊದಲ ದಿನ ಭಾರತಕ್ಕೆ ನಿರಾಸೆ ಮೂಡಿದೆ. ಆದರೆ ಚೀನಾ ಮೊದಲೆರೆಡು ಚಿನ್ನದ ಪದಕ ಗೆದ್ದಿದೆ.
ಮೊದಲು ಮಿಶ್ರ ಸ್ಪರ್ಧೆಯಲ್ಲಿ ಮತ್ತು ನಂತರ ಸಿಂಗಲ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್‌ನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಸ್ಥಾನ ಕಳೆದುಕೊಂಡಿತು. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಚೀಮಾ ಮತ್ತು ಸರಬ್ಜೋತ್ ಸಿಂಗ್ ಕೂಡ ಅರ್ಹತಾ ಸುತ್ತಿನಿಂದ ಹೊರಗುಳಿದಿದ್ದರು. ಇದೇ ಸ್ಪರ್ಧೆಯಲ್ಲಿ ಚೀನಾ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾ ಬೆಳ್ಳಿ ಹಾಗೂ ಕಜಕಿಸ್ತಾನ ಕಂಚಿನ ಪದಕ ಗೆದ್ದಿದೆ. 10 ಮೀಟರ್ ರೈಫಲ್ ಮಿಶ್ರ ತಂಡದಲ್ಲಿ ಕೊರಿಯಾ ಜೋಡಿಯನ್ನು ಸೋಲಿಸುವ ಮೂಲಕ ಚೀನಾ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನ್ನ ದೇಶಕ್ಕೆ ಚಿನ್ನದ ಪದಕದ ಖಾತೆ ತೆರೆದಿದೆ.
ಮತ್ತೊಂದೆಡೆ ಮಹಿಳೆಯರ ಸಿಂಕ್ರೊನೈಸ್ಡ್ 3 ಮೀ ಸ್ಪ್ರಿಂಗ್‌ಬೋರ್ಡ್ ಫೈನಲ್‌ನಲ್ಲಿ ಚೀನಾದ ಯಾನಿ ಚಾಂಗ್ ಮತ್ತು ಯಿವೆನ್ ಚೆನ್ ಜೋಡಿ 2ನೇ ಚಿನ್ನದ ಪದಕ ಗೆದ್ದಿದೆ. ಅಮೆರಿಕದ ಕೆ. ಕುಕ್, ಎಸ್. ಬೇಕನ್ ಬೆಳ್ಳಿ ಪದಕ ಗೆದ್ದರೆ, ಬ್ರಿಟನ್ ನ ಹಾರ್ಪರ್ ಮತ್ತು ಜೆನ್ಸನ್ ಕಂಚಿನ ಪದಕ ಗೆದ್ದರು.
ಪದಕ ಪಟ್ಟಿಯಲ್ಲಿ ಚೀನಾ 2 ಚಿನ್ನ, ದಕ್ಷಿಣ ಕೊರಿಯಾ, ಅಮೆರಿಕಾ ತಲಾ ಒಂದು ಬೆಳ್ಳಿ, ಬ್ರಿಟನ್ ಮತ್ತು ಕಜಕಿಸ್ತಾನ ತಲಾ 1 ಕಂಚಿನ ಪದಕ ಗೆದ್ದಿದೆ.