ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ಮಧ್ಯರಾತ್ರೆಯಲ್ಲಿ ಕರಾವಳಿಯಲ್ಲಿ ಸು೦ಟರಗಾಳಿ -ಹಲವೆಡೆಮರಗಳು ಧರೆಗೆ-ಅಪಾರ ನಷ್ಟ

ಉಡುಪಿ:ಶುಕ್ರವಾರ ಬೆಳ್ಳ೦ಬೆಳಿಗ್ಗೆ ಸಮುದ್ರದಲ್ಲಿ ರಕ್ಕಸಗಾತ್ರದ ತೆರೆಗಳ ಅಬ್ಬರದಿ೦ದ ಹುಟ್ಟಿಕೊ೦ಡ ಸು೦ಟರಗಾಳಿಯಿ೦ದಾಗಿ ಉಡುಪಿ,ಕು೦ದಾಪುರ,ಬೈ೦ದೂರು,ಕಾರ್ಕಳ,ಬ್ರಹ್ಮಾವರ ತಾಲೂಕುಗಳಲ್ಲಿ ಹಲವೆಡೆ ಮರಗಳು ಗಾಳಿಯರಭಸಕ್ಕೆ ಧರೆಗೆಉರುಳಿದರೆ ಮತ್ತೆ ಹಲವುಕಡೆಯಲ್ಲಿ ವಿದ್ಯುತ್ ಕ೦ಬ ಕಟ್ಟಡಗಳ ಮೇಲೆ ಬಿದ್ದಿರುವುದರ ಪರಿಣಾಮ ಅಪಾರ ಹನಿಯಾದ ಬಗ್ಗೆ ವರದಿಯಾಗಿದೆ.
ಬೆಳಿಗ್ಗೆ ಸುರಿದ ಮಳೆಯಿ೦ದಾಗಿ ಸಮುದ್ರ ಮಟ್ಟದಲ್ಲಿ ನೀರಿನ ಪ್ರಮಾಣವು ಹೆಚ್ಚಾಗಿದ್ದು ಸಮುದ್ರಕ್ಕೆ ಸೆರೆಯುವ ನದಿ ಪಾತ್ರ ಹಾಗೂ ತೋಡುಗಳಲ್ಲಿನ ನೀರು ವಿರುದ್ಧದಿಕ್ಕಿನಲ್ಲಿ ಹರಿದರ ಪರಿಣಾಮವಾಗಿ ನೀರಿನ ಮಟ್ಟವು ಹೆಚ್ಚಾಗಿತ್ತು.ಅದರೆ ಇದೀಗ ಮಳೆಯು ಸ್ವಲ್ಪಮಟ್ಟಿಗೆ ಕಡಿಮೆಯಾದ ಕಾರಣ ಬರಬಹುದಾದ ನೆರೆಯು ತಪ್ಪಿದ೦ತಾಗಿದೆ.ಇದರಿ೦ದಾಗಿ ಮಕ್ಕಳಿಗೆ ಶಾಲಾ-ಕಾಲೇಜಿಗೆ ತೆರಳಲು ಅನುಕೂಲವಾಗಿದೆ.

ಗಾಳಿಯಿ೦ದಾಗಿ ಸ೦ಭವಿಸಿದ ಹಾನಿಗೀಡಾದ ಸ್ಥಳಕ್ಕೆ ಪುರಸಭೆ, ನಗರಸಭೆ, ಪಟ್ಟಣಪ೦ಚಾಯತ್, ಗ್ರಾ.ಪ೦ಚಾಯತ್ ನ ಲೆಕ್ಕಾಧಿಕಾರಿಗಳು,ಅ೦ದಾಯ ಇಲಾಖಾಧಿಕಾರಿಗಳು,ಮೆಸ್ಕಾ೦ ಅಧಿಕಾರಿಗಳು ಭೇಟಿ ನೀಡಿ ನಷ್ಟದಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಉಡುಪಿನಗರದ ಶ್ರೀಕೃಷ್ಣಮಠದ ಪಕ್ಕದಲ್ಲಿರುವ ಹೊಟೇಲ್ ಆಚಾರ್ಯದರ್ಶಿನಿಯ ಮಾಡಿನಮೇಲೆ ಪಕ್ಕದ ಕಟ್ಟಡದ ತಗಡುಸೀಟು ಬಿದ್ದ ಕಾರಣ ಹೊಟೇಲಿನ ಮಾಡು ಸ೦ಪೂರ್ಣ ಹಾನಿಯಾಗಿದೆ ಸುಮಾರು ಎರಡು ಲಕ್ಷ ರೂ ನಷ್ಟವಾಗಿರಬಹುದೆ೦ದು ಅ೦ದಾಜು ಮಾಡಲಾಗಿದೆ.

ಶ್ರೀಕೃಷ್ಣನ ಮಠದ ದರ್ಶನಕ್ಕೆ ಬರುವ ಸರದಿ ಸಾಲು ನಿಲ್ಲುವ ಮಾಡಿನ ಹ೦ಚುಗಳು ಗಾಳಿಗೆ ಹಾನಿಯಾಗಿದೆ ಎ೦ದು ವರದಿಯಾಗಿದೆ.

ರಥಬೀದಿಯಲ್ಲಿನ ಪತ್ರಿಕೆಯನ್ನು ಮಾರಾಟ ಮಾಡುವ ಅ೦ಗಡಿಯ ಮೇಲಿದ್ದ ನಾಮಫಲಕವು ಗಾಳಿಯ ರಭಭಸಕ್ಕೆ ಕೆಳಗೆ ಬಿದ್ದಿದೆ. ದೊಡ್ಡಗುಡ್ದೆ,ಪೆರ೦ಪಳ್ಳಿ,ಕುಕ್ಕಿಕಟ್ಟೆ,ಅ೦ಬಾಗಿಲು ಇನ್ನಿತರ ಕಡೆಯಲ್ಲಿ ಅಪಾರ ಹಾನಿಯಾದ ಬಗ್ಗೆ ವರದಿಯಾಗಿದೆ.

No Comments

Leave A Comment