ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಯೆಮೆನ್ ಮೇಲೆ Israel ಪ್ರತೀಕಾರ; Houthi ಬಂಡುಕೋರರ ನೆಲೆಗಳ ಮೇಲೆ Jets Strike, ಕನಿಷ್ಠ 3 ಸಾವು
ಟೆಲ್ ಅವೀವ್: ರಾಜಧಾನಿ ಟೆಲ್ ಅವೀವ್ ಮೇಲೆ ದಾಳಿ ಮಾಡಿದ್ದ ಯೆಮೆನ್ ಹೌತಿ ಬಂಡುಕೋರರ ವಿರುದ್ಧ ಇಸ್ರೇಲ್ ಸೇನೆ ಪ್ರತೀಕಾರದ ದಾಳಿ ನಡೆಸಿದ್ದು, ಬಂಡುಕೋರರ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ.
ಹೌದು.. ಹೌತಿ ಬಂಡುಕೋರರ ನಿಯಂತ್ರಣದಲ್ಲಿರುವ ಪಶ್ಚಿಮ ಯೆಮನ್ ಮೇಲೆ ಇಸ್ರೇಲಿ ಸೇನಾಪಡೆ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದ್ದು, ಪಶ್ಚಿಮ ಯೆಮೆನ್ ನ ಹೊಡೆಡಾದಲ್ಲಿರುವ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿದೆ.
ಇಸ್ರೇಲ್ ನ ಈ ಎಫ್ 15 ಜೆಟ್ ವಿಮಾನಗಳು ಈ ದಾಳಿ ನಡೆಸಿದ್ದು, ಇಸ್ರೇಲ್ ಮೇಲೆ ಗುರುವಾರ ಹೌತಿ ಬಂಡುಕೋರರು ನಡೆಸಿದ್ದ ಡ್ರೋನ್ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದೆ ಎನ್ನಲಾಗಿದೆ. ಹೌತಿಗಳೇ ಹೆಚ್ಚಾಗಿರುವ ಪಶ್ಚಿಮ ಕರಾವಳಿ ಯೆಮೆನ್ ನಗರದಲ್ಲಿ ಭಾರಿ ಸ್ಪೋಟಗಳು ಮತ್ತು ಆಕಾಶದೆತ್ತರಕ್ಕೆ ಬೆಂಕಿಯ ಜ್ವಾಲೆಗಳು ಕಂಡುಬಂದಿವೆ ಎಂದು ಸ್ಥಳಿಯ ಮಾದ್ಯಮಗಳು ವರದಿ ಮಾಡಿವೆ.
ಹೌತಿ ಪ್ರಾಯೋಜಿತ ಸುದ್ದಿಸಂಸ್ಥೆ ವರದಿ ಮಾಡಿರುವಂತೆ ಇಸ್ರೇಲ್ ಸೇನೆ ನಡೆಸಿದ ಭೀಕರ ವಾಯು ದಾಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದು, ಭಾರಿ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ಯೆಮೆನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ ಎಂದು ವರದಿ ಮಾಡಿದೆ.
ಈ ಹಿಂದೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಓರ್ವ ಇಸ್ರೇಲ್ ಪ್ರಜೆ ಸಾವನ್ನಪ್ಪಿದ್ದರು. ಈ ದಾಳಿ ಹೊಣೆಯನ್ನು ಹೌತಿ ಬಂಡುಕೋರ ಸಂಘಟನೆ ಹೊತ್ತುಕೊಂಡಿತ್ತು.
ಈ ದಾಳಿ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರದರ್ಶನದ ಭಾಷಣದಲ್ಲಿ ಯೆಮೆನ್ ಗೆ “ನಮಗೆ ಹಾನಿ ಮಾಡುವ ಯಾರಾದರೂ ಅವರ ಆಕ್ರಮಣಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ವಾಯುಸೇನೆ ಈ ದಾಳಿ ನಡೆಸಿದೆ.