ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಅಂಕೋಲಾ ಶಿರೂರು ಗುಡ್ಡ ಕುಸಿತ ಅವಘಡದಲ್ಲಿ 6ಕ್ಕೆ ಏರಿದ ಸಾವು
ಅಂಕೋಲಾ : ತಾಲೂಕಿನ ಶಿರೂರು ಗ್ರಾಮದಲ್ಲಿ ಜು.16 ಮಂಗಳವಾರ ನಡೆದ ಗುಡ್ಡ ಕುಸಿತ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರ ಸೇರಿದಂತೆ 12ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಗುರುವಾರ ಬೆಳಗಿನ ಜಾವ ಮಂಜಗುಣ ಮತ್ತು ಗಂಗಾವಳಿಯಲ್ಲಿ ಎರಡು ಮೃತ ದೇಹ ಪತ್ತೆ ಯಾಗುವ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಒಂದೇ ಕುಟುಂಬದವರಾದ ಲಕ್ಷ್ಮಣ ಬೊಮ್ಮಯ್ಯ ನಾಯ್ಕ (50), ಅವರ ಪತ್ನಿ ಶಾಂತಿ ನಾಯ್ಕ (45), ಮಗ ರೋಶನ್ (11), ಮಗಳು ಅವಂತಿಕಾ (45), ಭಾವ ಜಗನ್ನಾಥ ನಾಯ್ಕ (60) ಗುಡ್ಡ ಕುಸಿತ ಅವ ಘಡದಲ್ಲಿ ನಾಪತ್ತೆಯಾಗಿದ್ದು, ಅದರಲ್ಲಿ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ರೋಷನ್ ನಾಯ್ಕ ಹಾಗೂ ಅವಪರಿಚಿತ ಶವ ಗಂಗಾವಳಿ ನದಿಯ ದಂಡದಲ್ಲಿ ಪತ್ತೆಯಾಗಿದ್ದರು.
ಗುರುವಾರ ಅವಂತಿಕಾ (5) ಈಕೆಯ ಶವವು ಗಂಗಾವಳಿ ನದಿತೀರದಲ್ಲಿ ಪತ್ತೆಯಾಗಿದೆ. ಮಂಜಗುಣ ಯಲ್ಲಿ ಪತ್ತೆಯಾದ ತಮಿಳುನಾಡಿನ ಮುರುಗನ್ ರಾಮಕೃಷ್ಣನ್ (45) ಗುರುತಿಸಿಲಾಗಿದೆ. ಈತನ ಸಂಬಂಧಿಕರು ಪೊಲೀಸ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಜು.16ರ ಸಂಜೆ ಅಪರಿಚಿತ ಮೃತ ದೇಹ ಪತ್ತೆ ಯಾಗಿದ್ದು, ಆ ವ್ಯಕ್ತಿ ತಮಿಳುನಾಡಿನ ನಾಮಕ್ಕಲ್ ಚಿಣ್ಣನನ್ ಎಂಬಾತ ಟ್ಯಾಂಕರ್ ಚಾಲಕನಾಗಿರುತ್ತಾನೆ.
ಮಂಗಳೂರಿನಿಂದ ಹುಬ್ಬಳ್ಳಿ ಅಡುಗೆ ಅನಿಲ ಪೂರೈಸಲು ಸಾಗುತ್ತಿದ್ದ ಟ್ಯಾಂಕರ್ ನದಿಯಲ್ಲಿ ಬಿದ್ದಿದೆ.
ಜೊಯಿಡಾದ ರಾಮನಗರದಿಂದ ಕೇರಳಕ್ಕೆ ನಾಟಾ ಸಾಗಿಸುತ್ತಿದ್ದ ಲಾರಿಯ ಜಿಪಿಎಸ್ ಲೊಕೇಶನ್ ಮಣ್ಣಿನ ರಾಶಿಯ ಬಳಿ ಪತ್ತೆಯಾಗಿದೆ ಎನ್ನಲಾಗಿದ್ದು, ಈ ಲಾರಿ ಮಣ್ಣಿನಡಿ ಹುದುಗಿರುವ ಶಂಕೆ ಇದೆ ಮತ್ತು ಸಗಡಗೇರಿ ಬಳಿ ಗಂಗಾವಳಿ ನದಿಯಲ್ಲಿ ಬಿದ್ದಿರುವ ಗ್ಯಾಸ್ ಟ್ಯಾಂಕರ್ ನಿಂದ ತುಂಬಿರುವ ಅನಿಲವನ್ನು ಖಾಲಿ ಮಾಡಲು ಎಚ್‍ಪಿಸಿಎಲ್ ಕಂಪನಿಯ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಮುನ್ನೆಚ್ಚರಿಗೆ ಕ್ರಮ ವಾಗಿ ಸುತ್ತಲಿನ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಆ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.