ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ: ಸಗ್ರಿ ರೈಲ್ವೆ ಸೇತುವೆ ಬಳಿ ಶವ ಪತ್ತೆ- ಆತ್ಮಹತ್ಯೆ ಶಂಕೆ
ಉಡುಪಿ: ಜು. 18:ರೈಲ್ವೇ ಟ್ರ್ಯಾಕ್, ಸಗ್ರಿ ರೈಲ್ವೆ ಸೇತುವೆ ಬಳಿ ಜುಲೈ 17ರಂದು ಶವ ಪತ್ತೆಯಾಗಿದೆ.ಮಣಿಪಾಲ ಠಾಣೆಯ ಎಸ್‌ಐ ರಾಘವೇಂದ್ರ ಸಿ ಮತ್ತು ಅವರ ತಂಡ ಕಾರ್ಯಾಚರಣೆ ನಡೆಸಿ ಸಮಾಜ ಸೇವಕ ನಿತ್ಯಾನಂದ ವೊಳಕಾಡು ಅವರ ಸಹಕಾರದೊಂದಿಗೆ ಶವವನ್ನು ಮಣಿಪಾಲ ಶವ ರಕ್ಷಣಾ ಘಟಕದಲ್ಲಿ ಇರಿಸಲಾಗಿದೆ.
ಮೃತರನ್ನು ಉಡುಪಿಯ ಮೂಡುಬೆಟ್ಟು ನಿವಾಸಿ ಪ್ರಸಾದ್ ಆಚಾರ್ಯ ಎಂದು ಗುರುತಿಸಲಾಗಿದೆ.ರೈಲಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ.ಮಣಿಪಾಲ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಕಾನೂನು ಪ್ರಕ್ರಿಯೆಗಳು ಮತ್ತು ತನಿಖೆಗಳನ್ನು ಪ್ರಾರಂಭಿಸಿದ್ದಾರೆ.