ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಗೋಕರ್ಣದಲ್ಲಿ ಬೆಳ್ಳಂಬೆಳಿಗ್ಗೆ ಕುಸಿದ ಗುಡ್ಡ ತಪ್ಪಿದ ಅನಾಹುತ

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದರೂ ಗುಡ್ಡ ಕುಸಿತದ ಆತಂಕ‌ ತಪ್ಪಿಲ್ಲ. ಗೋಕರ್ಣದಲ್ಲಿ ಬೆಳ್ಳಂಬೆಳಿಗ್ಗೆ ಗುಡ್ಡ ಕುಸಿದಿದೆ.

ಗೋಕರ್ಣ ಮುಖ್ಯಕಡಲತೀರದ ರಾಮಮಂದಿರ ಬಳಿ ಗುಡ್ಡ ಕುಸಿತವಾಗಿದೆ. ಮಂದಿರದಲ್ಲಿ ‌ಯಾರು ಇಲ್ಲದ ಕಾರಣ‌ ಅನಾಹುತ ನಡೆದಿಲ್ಲ. ಗುಡ್ಡದ ಕಲ್ಲುಗಳು ದೇವಾಲಯದ ಗೋಡೆತನಕ ಉರುಳಿ ಬಂದು ನಿಂತಿವೆ. ಹೆಚ್ಚಿನ ಅನಾಹುತವಾಗಿಲ್ಲ. ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಗುಡ್ಡ ಕುಸಿದ ಆರೋಪವನ್ನು ಜನತೆ ಮಾಡುತ್ತಿದ್ದಾರೆ.ಮಳೆ ಕಡಿಮೆಯಾದರೂ ನಿಲ್ಲದ
ಗುಡ್ಡ ಕುಸಿತ ದಿಂದ ಜಿಲ್ಲೆಯ ಜನರಲ್ಲಿ ಭಯ ಹೆಚ್ಚಾಗಿದೆ.

ಗೋಕರ್ಣದ ಗುಡ್ಡ ಕುಸಿತದಿಂದರಾಮಮಂದಿರ ದೇವಸ್ಥಾನಕ್ಕೆ ಯಾವುದೇ ಹಾನಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment