ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ: ಸಾಮಾಜಿಕ ಮಾಧ್ಯಮದಲ್ಲಿ ಕೋಮುಭಾವನೆ ಕೆರಳಿಸುವ ಪೋಸ್ಟ್, ವೈದ್ಯರ ವಿರುದ್ಧ ಪ್ರಕರಣ ದಾಖಲು
ಉಡುಪಿ, ಜುಲೈ 16: ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಮುಸ್ಲಿಮರ ವಿರುದ್ಧ ಕೋಮುಭಾವನೆ ಕೆರಳಿಸುವ ಪೋಸ್ಟ್ ಮಾಡಿದ ಆರೋಪದ ಮೇಲೆ ವೈದ್ಯರೊಬ್ಬರ ಮೇಲೆ ಉಡುಪಿ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಕೀರ್ತನ್ ಉಪಾಧ್ಯ ಎಂಬವರು ಉಡುಪಿಯ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜುಲೈ 13 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅವರು, ‘ನೀವು ಈ ಪ್ರಪಂಚದಿಂದ ಒಂದು ವಿಷಯವನ್ನು ತೆಗೆದುಹಾಕಲು ಸಾಧ್ಯವಾಗುವುದಾದರೆ ಅದು ಏನಾಗಬಹುದು? ಮುಸ್ಲಿಂ ಸಮುದಾಯ’ ಎಂದು ಉಲ್ಲೇಖಿಸಿದ್ದರು.
ಪೋಸ್ಟ್ ವೈರಲ್ ಆದ ನಂತರ ಸಾರ್ವಜನಿಕರ ಆಕ್ರೊಶ ವ್ಯಕ್ತವಾಗಿತ್ತು. ನಂತರ ವೈದ್ಯರು ಅದನ್ನು ಅಳಿಸಿ ಹಾಕಿದ್ದರು. ಎಕ್ಸ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದರು.
ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದ ವೈದ್ಯರು, ನಾನು ಕೆಲವು ತಿಂಗಳ ಹಿಂದೆ ಟ್ವಿಟರ್ ಬಳಸುವುದನ್ನು ನಿಲ್ಲಿಸಿದ್ದೆ. ನನ್ನ ಅರಿವಿಗೆ ಬಾರದೆ ಪೋಸ್ಟ್ ಮಾಡಲಾಗಿರುವುದು ಗೊತ್ತಾಯಿತು. ನನ್ನ ಖಾತೆಯನ್ನು ಯಾರೋ ಬಳಸುತ್ತಿದ್ದರು. ನಾನು ನನ್ನ ಪಾಸ್‌ವರ್ಡ್, ಲಾಗಿನ್ ವಿವರಗಳು ಮತ್ತು ಖಾತೆಗೆ ಸಂಬಂಧಿಸಿದ ಎಲ್ಲವನ್ನೂ ಬದಲಾಯಿಸಿದ್ದೇನೆ. ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ವಿಚಾರವಾಗಿ ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.
ಅನೇಕರು ವೈದ್ಯರ ಪೋಸ್ಟ್‌ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಪ್ರಕಟಿಸಿದ್ದರು. ಪೋಸ್ಟ್ ಅನ್ನು ಅಳಿಸಿಹಾಕಲಾಗಿದ್ದರೂ ಸಹ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.