ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಬಿಹಾರದಲ್ಲಿ ಸಿಡಿಲಿಗೆ 21 ಮಂದಿ ಸಾವು

ಪಾಟ್ನಾ: ಬಿಹಾರದಲ್ಲಿ ಸಿಡಿಲಿಗೆ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರ ಮುಖ್ಯಮಂತ್ರಿ ಕಚೇರಿ ಶುಕ್ರವಾರ ನೀಡಿರುವ ಮಾಹಿತಿ ಅನ್ವಯ ಕಳೆದ 24 ಗಂಟೆಗಳಲ್ಲಿ ಬಿಹಾರದಾದ್ಯಂತ ಸಿಡಿಲು ಬಡಿತ-ಸಂಬಂಧಿತ ಘಟನೆಗಳಲ್ಲಿ ಒಟ್ಟು 21 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಬಿಹಾರದ ಮಧುಬನಿಯಲ್ಲಿ ಗರಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್‌ನಲ್ಲಿ ನಾಲ್ಕು, ರಾಜಧಾನಿ ಪಾಟ್ನಾದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ರೋಹ್ತಾಸ್, ಭೋಜ್‌ಪುರ, ಕೈಮೂರ್, ಸರನ್, ಜೆಹಾನಾಬಾದ್, ಗೋಪಾಲ್‌ಗಂಜ್, ಸುಪೌಲ್, ಲಖಿಸಾರೈ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಿಡಿಲು ಬಡಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಸಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಕಚೇರಿ ಜನರಿಗೆ ಮನವಿ ಮಾಡಿದೆ.

ಅಲ್ಲದೆ ಅಗತ್ಯವಿಲ್ಲದಿದ್ದರೆ ಹೊರಗಡೆ ಹೋಗುವುದನ್ನು ತಪ್ಪಿಸಿ ಮತ್ತು ಕಾಲಕಾಲಕ್ಕೆ ವಿಪತ್ತು ನಿರ್ವಹಣಾ ಇಲಾಖೆ ನೀಡುವ ಸಲಹೆಗಳನ್ನು ಅನುಸರಿಸಿ ಎಂದು ಕರೆ ನೀಡಿದೆ.

ಕಳೆದ ಕೆಲವು ವಾರಗಳಿಂದ ಬಿಹಾರದಲ್ಲಿ ಮಳೆ ಮತ್ತು ಭಾರಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಈ ತಿಂಗಳ ಆರಂಭದಿಂದ ಸುಮಾರು 70 ಜನರು ಸಿಡಿಲು-ಸಂಬಂಧಿತ ಘಟನೆಗಳಿಗೆ ಬಲಿಯಾಗಿದ್ದಾರೆ.

No Comments

Leave A Comment